ಮಲೆನಾಡಿನ ಜನ ಆತಂಕ ಪಡಬಾರದು DCM

ಬೇಡ್ತಿ, ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಸದಸ್ಯರು, ಸ್ಥಳೀಯ ಶಾಸಕ, ಸಚಿವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಮಂಕಾಳ ವೈದ್ಯ, ಅನಂತ ಅಶೀಸರ, ಭೀಮಣ್ಣ ನಾಯ್ಕ, ಶಿವರಾಮ ಹೆಬ್ಬಾರ್, ಶಾಂತಾರಾಮ ಸಿದ್ದಿ, ಬಾಲಚಂದ್ರ ಸಾಯೀಮನೆ ಇತರರಿದ್ದರು.
ಬೇಡ್ತಿ, ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಸದಸ್ಯರು, ಸ್ಥಳೀಯ ಶಾಸಕ, ಸಚಿವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಮಂಕಾಳ ವೈದ್ಯ, ಅನಂತ ಅಶೀಸರ, ಭೀಮಣ್ಣ ನಾಯ್ಕ, ಶಿವರಾಮ ಹೆಬ್ಬಾರ್, ಶಾಂತಾರಾಮ ಸಿದ್ದಿ, ಬಾಲಚಂದ್ರ ಸಾಯೀಮನೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅಭಯ
  • ಬೇಡ್ತಿ, ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಭೇಟಿ
ಶಿರಸಿ: ನದಿ ಜೋಡಣೆಯ ಯತ್ನ ಇದುವರೆಗೂ ಎಲ್ಲಿಯೂ ಯಶಸ್ವಿಯಾಗಿಲ್ಲ. ಬೇಡ್ತಿ ಹಾಗೂ ಅಘನಾಶಿನಿ ನದಿಗಳ ತಿರುವಿನ ಯೋಜನೆಗಳ ಬಗ್ಗೆ ಇನ್ನೂ ಆರಂಭಿಕ ಪರಿಶೀಲನೆ ಆಗಿಲ್ಲ. ಮಲೆನಾಡಿನ ಜನ ಆತಂಕ ಪಡಬಾರದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಭರವಸೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸಂಜೆ ತಮ್ಮನ್ನು ಭೇಟಿಯಾದ ಸ್ಥಳೀಯ ಶಾಸಕರು, ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಸದಸ್ಯರೊಂದಿಗೆ ಮಾತನಾಡಿದ ಅವರು, ನದಿ ಜೋಡಣೆ ಯೋಜನೆಗೆ ಹಲವು ಗಂಭೀರ ವೈಜ್ಞಾನಿಕ ಅಂಶಗಳು ಎದುರಾಗಿವೆ. ಬೇಡ್ತಿ-ವರದಾ ಯೋಜನೆ ಬಗ್ಗೆ ಪುನರ್ ಪರಿಶೀಲನೆ ಅಗತ್ಯ. ಅಘನಾಶಿನಿ-ವೇದಾವತಿ ತಿರುವು ಬಗ್ಗೆ ಆರಂಭಿಕ ಪರಿಶೀಲನೆಯೇ ಆಗಿಲ್ಲ. ಪೂಜ್ಯ ಸೋಂದಾ ಸ್ವರ್ಣವಲ್ಲೀ ಸ್ವಾಮೀಜಿ ಅವರು ಉ.ಕ ಜನಪ್ರತಿನಿಧಿಗಳು ಉ.ಕ ಜನತೆ ಬೃಹತ್ ಜನಾಂದೋಲನ ನಡೆಸಿರುವ ಬಗ್ಗೆ ಸರ್ಕಾರಕ್ಕೆ ಅರಿವಿದೆ. ತಜ್ಞರು, ಉನ್ನತ ಅಧಿಕಾರಿಗಳ ಜೊತೆ ಸಮಾಲೋಚನ ಸಭೆ ನಡೆಸುತ್ತೇವೆ. ಮಲೆನಾಡಿನ ಜನತೆ ಆತಂಕ ಪಡಬಾರದು ಎಂದು ರಾಜ್ಯ ಸರ್ಕಾರದ ಪರವಾಗಿ ಆಶ್ವಾಸನೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ವಿಧಾನಸಭಾ ಅಧಿವೇಶನದ ಒತ್ತಡದಲ್ಲೂ ಬೇಡ್ತಿ-ಅಘನಾಶಿನಿ ನಿಯೋಗದ ಜೊತೆ ಮಾತುಕತೆ ಏರ್ಪಡಿಸಿದ್ದೇವೆ. ಪೂಜ್ಯ ಸ್ವರ್ಣವಲ್ಲೀ ಗುರುಗಳ ಸೂಚನೆಯಂತೆ ಈ ಸಭೆ ಏರ್ಪಡಿಸಿದ್ದೇವೆ ಎಂದರು. 
ಶಾಸಕ ಭೀಮಣ್ಣ ನಾಯ್ಕ ಅವರು ನೀರಿಲ್ಲದ ನದಿ ತಿರುವು ವ್ಯರ್ಥ ಎಂದರು. ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಬೇಡ್ತಿಯಿಂದ ಕೆರೆ ತುಂಬಿಸುವ, ಕುಡಿಯುವ ನೀರಿನ 4 ಯೋಜನೆಗಳಿಗೇ ನೀರಿಲ್ಲ ಎಂದು ವಾಸ್ತವ ಚಿತ್ರಣ ನೀಡಿದರು. 
ಕರಾವಳಿ ಮೀನುಗಾರರು, ರೈತರು ಬೇಡ್ತಿ-ಗಂಗಾವಳಿ, ಅಘನಾಶಿನಿ ನದಿಗಳ ಸಿಹಿ ನೀರಿನ ಮೇಲೆ ಬದುಕು ಕಟ್ಟಿಕೊಂಡಿದ್ದಾರೆ ಎಂದು ಕುಮಟಾ ಶಾಸಕ ದಿನಕರ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಅವರು ವನವಾಸಿಗಳ ಬದುಕು ನದಿ ತಿರುವಿನಿಂದ ಅತಂತ್ರವಾಗಲಿದೆ ಎಂದರು. 
ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಭೂಕುಸಿತ ವರದಿ, ಧಾರಣಾ ಸಾಮರ್ಥ್ಯ ವರದಿ, ಬೇಡ್ತಿ-ಅಘನಾಶಿನಿ ಸಂರಕ್ಷಿತ ಪ್ರದೇಶ ಆದೇಶ, ಇತ್ಯಾದಿ ತಜ್ಞ ವರದಿಗಳನ್ನು ಈ ವೇಳೆ ಸ್ವರ್ಣವಲ್ಲೀ ಸಂಸ್ಥಾನದ ಅಧ್ಯಕ್ಷ ವ್ನಿೇಶ್ವರ ಹೆಗಡೆ ಬೊಮ್ಮನಳ್ಳಿ ಬೇಡ್ತಿ ಪ್ರದೇಶ, ಸೋಂದಾ ಸ್ವರ್ಣವಲ್ಲೀಗೆ ಭೇಟಿ ನೀಡಲು ಡಿ.ಕೆ. ಶಿವಕುಮಾರ ಅವರಿಗೆ ಆಹ್ವಾನ ನೀಡಿದರು. 
ತಜ್ಞ ಡಾ. ಬಾಲಚಂದ್ರ ಸಾಯೀಮನೆ ನೀರಿನ ಲಭ್ಯತೆಯ ನೈಜ ಚಿತ್ರಣ ಮುಂದಿಟ್ಟರು. ಗೋಪಾಲಕೃಷ್ಣ ತಂಗಾರ‌್ಮನೆ, ವಿಶ್ವನಾಥ ಶೀಗೆಹಳ್ಳಿ ಅಶ್ವಿನಿ ಕುಮಾರ, ವಿವೇಕ್ ಗಡಿಹಿತ್ಲು, ರವಿ ಮುಂತಾದವರು ಇದ್ದರು. ನಂತರ ಬೇಡ್ತಿ ಸಮಿತಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ  ಮನವಿ ಸಲ್ಲಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net