ಗಂಗಾವಳಿಯಲ್ಲಿ ಮಣ್ಣು ತೆರವಿಗೆ ಮಳೆಗಾಲದ ಅಡ್ಡಿ

ಶಿರೂರು ಗುಡ್ಡ ಕುಸಿತದಿಂದ ಮಣ್ಣು ತೆರವಾಗಿರುವುದು
ಶಿರೂರು ಗುಡ್ಡ ಕುಸಿತದಿಂದ ಮಣ್ಣು ತೆರವಾಗಿರುವುದು
Published on
ಕಾರವಾರ: ಅಂಕೋಲಾ ಶಿರೂರಿನಲ್ಲಿ 2024 ರ ಮಳೆಗಾಲದ ಗುಡ್ಡ ಕುಸಿತದಿಂದ ಗಂಗಾವಳಿ ನದಿಯಲ್ಲಿ ಬಿದ್ದಿದ್ದ ಮಣ್ಣು ತೆರವಿಗೆ ಸರ್ಕಾರದಿಂದ ಆದೇಶವಾಗಿದೆ. ಬ್ಯಾತಮೆಟ್ರಿಕ್‌ ಸರ್ವೇ ಮಾಡಿ ತಕ್ಷಣ ಕಾಮಗಾರಿ ಆದರೆ, ಮಳೆಗಾಲ ಎದುರು ಬಂದಿರುವ ಕಾರಣ ಸಂಪೂರ್ಣ ಕಾಮಗಾರಿ ಮುಗಿಸುವುದು ಅನುಮಾನವಾಗಿದೆ. ಹಾಗಾಗಿ ಉಳುವರೆ ಹಾಗೂ ಗಂಗಾವಳಿ ತೀರದ ಹಲವು ಗ್ರಾಮಸ್ಥರಿಗೆ ಪ್ರವಾಹದ ಆತಂಕ ಮುಂದುವರಿಯಲಿದೆ.
ಶಾಸಕ ಸತೀಶ ಸೈಲ್ ಹಾಗೂ ಜಿಲ್ಲಾಡಳಿತದ ಸತತ ಪ್ರಯತ್ನದಿಂದ ಈಗ ಮಣ್ಣು ತೆರವು ಮಾಡಲು ಕಂಪನಿ ನಿಗದಿಯಾಗಿದೆ. 2.34 ಕೋಟಿ ರೂ. ಹಣ ಬಿಡುಗಡೆಗೂ ಆದೇಶವಾಗಿದೆ. ಕಂಪನಿಗೆ 4ಜಿ ತರಿಗೆ ವಿನಾಯಿತಿ ಕೂಡ ಲಭಿಸಿದೆ. ಆದರೆ, ಮುಂಗಾರು ಶುರುವಾಗಲು ವಾರಕ್ಕಿಂತ ಕಡಿಮೆ ಅವಧಿ ಇರುವ ಕಾರಣ ತಕ್ಷಣ ಸಂಪೂರ್ಣ ಕಾಮಗಾರಿ ಮಾಡಲು ಸಾಧ್ಯವಿಲ್ಲ ಎಂದು ಬಂದರು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಹಿನ್ನೆಲೆ:

ರಾಷ್ಟಿçÃಯ ಹೆದ್ದಾರಿಗಾಗಿ ಗುಡ್ಡವನ್ನು ಕಡಿದಾಗಿ ತೆರವು ಮಾಡಿದ ಕಾರಣ 2024 ಜುಲೈ 16 ರಂದು ಶಿರೂರಿನಲ್ಲಿ ಗುಡ್ಡ ಕುಸಿತ ಸಂಭವಿಸಿತ್ತು. ಒಂದು ಕ್ಯಾಂಟೀನ್, ಒಂದು ಮನೆ 11 ಜನರ ಪ್ರಾಣವೂ ಹೋಗಿತ್ತು. ಹಲವು ದಿನದ ಕಾರ್ಯಾಚರಣೆಯ ಬಳಿಕವೂ ಇನ್ನಿಬ್ಬರ ದೇಹಗಳು ಇದುವರೆಗೂ ಪತ್ತೆಯಾಗಿಲ್ಲ. ಘಟನೆ ನಡೆದಾಗ ಮೃತರ ಶವ ಹುಡುಕಾಟದ ವೇಳೆ ಕಾರವಾರದ ಅಭಿಷೇನಿಯ ಓಶನ್ ಸರ್ವೀಸ್ ಎಂಬ ಕಂಪನಿ ಬಾರ್ಜ್ ಹಾಗೂ ಡ್ರಜ್ಜಿಂಗ್ ಯಂತ್ರ ತಂದು ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಕಾರ್ಯಾಚರಣೆ ನಡೆಸಿತ್ತು. ಕೇರಳದ ಅರ್ಜುನ್ ಎಂಬ ಲಾರಿ ಚಾಲಕನ ಶವ ಕಾರ್ಯಾಚರಣೆಯಲ್ಲಿ ಪತ್ತೆಯಾಗಿತ್ತು.

ಭಾರಿ ಪ್ರಮಾಣದ ಮಣ್ಣು

ಘಟನೆಯಲ್ಲಿ 89 ಸಾವಿರ ಘನ ಮೀಟರ್‌ನಷ್ಟು ಎಂದರೆ ಸುಮಾರು 5500 ಟ್ರಕ್ ಮಣ್ಣು ನದಿಗೆ ಬಿದ್ದಿದೆ ಎಂದು ಹೇಳಲಾಗಿದೆ. ಇದರಿಂದ ನದಿಯ ನಡುವೆ ಸುಮಾರು ಒಂದು ಎಕರೆಯಷ್ಟು ವಿಸ್ತಾರದ ಸಣ್ಣ ನಡುಗಡ್ಡೆಯೇ ಸೃಷ್ಟಿಯಾಗಿದೆ. ಬಂದರು ಇಲಾಖೆ ಬ್ಯಾತಮೆಟ್ರಿಕಲ್ ಸಮೀಕ್ಷೆ ಮಾಡಿ ಮಣ್ಣು ತೆರವು ಮಾಡಲು 4.34 ಕೋಟಿ ರೂ. ಬೇಕು ಎಂದು ಯೋಜನೆ ರೂಪಿಸಿತ್ತು. ಅದಕ್ಕಾಗಿ ನಾಲ್ಕು ಬಾರಿ ಅಲ್ಪಾವಽ ಟೆಂಡರ್ ಕರೆದರೂ ಯಾರೂ ಕಾಮಗಾರಿ ನಡೆಸಲು ಮುಂದೆ ಬಂದಿರಲಿಲ್ಲ.
ನಂತರ ಚರ್ಚೆ ನಡೆಸಿ, ಅವಗಢದ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಿದ ಅಭಿಷೇನಿಯಾ ಓಶನ್ ಸರ್ವೀಸ್ ಎಂಬ ಕಂಪನಿಗೇ ಈ ಕಾರ್ಯವನ್ನು ಟೆಂಡರ್ ಇಲ್ಲದೇ ವಹಿಸಲು ನಿರ್ಧರಿಸಿ ಜಿಲ್ಲಾಡಳಿತವು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿತ್ತು. ಮೇ 16 ರಂದು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನರಸಿಂಹ ಮೂರ್ತಿ ಅವರು ಈ ಸಂಬAಧ ಆದೇಶ ಹೊರಡಿಸಿದ್ದಾರೆ.
ಮಣ್ಣು ತೆರವು ಮಾಡಲು ಬೇಕಾಗಿರುವ 4.34 ಕೋಟಿ ರೂ.ಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 2 ಕೋಟಿ ರೂ.ಗಳನ್ನು ನೀಡಿದೆ. ಉಳಿದ 2.34 ಕೋಟಿ ರೂ.ಗಳನ್ನು ರಾಜ್ಯ ವಿಪತ್ತು ಉಪಶಮನ ನಿಽಯಲ್ಲಿ ಭರಿಸಲು ಆದೇಶದಲ್ಲಿ ತಿಳಿಸಲಾಗಿದೆ. 2025 ರಿಂದ ಪ್ರಾರಂಭವಾದ ಟೆಂಡರ್ ಪ್ರಕ್ರಿಯೆ ಮುಗಿಯಲು ಇಷ್ಟು ದಿನ ಹಿಡಿದಿದೆ. ಆದರೆ, ಈಗ ಮಳೆಗಾಲ ಎದುರು ಬಂದು ನಿಂತಿದೆ.
ಗುತ್ತಿಗೆದಾರರ ಹಿಂದೇಟೇಕೆ..?
ಸುಮಾರು 300 ಮೀಟರ್ ಅಷ್ಟು ಅಗಲದ ನದಿನದಿಯ ನಡುವೆ ಮಣ್ಣು ಬಿದ್ದಿರುವುದರಿಂದ ಸಾಮಾನ್ಯ ಯಂತ್ರಗಳಿAದ ಅದನ್ನು ತೆರವು ಮಾಡಲು ಸಾಧ್ಯವಿಲ್ಲ. ಸಮುದ್ರ ಅಥವಾ ದೊಡ್ಡ ನದಿಯಲ್ಲಿ ಹೂಳು ತೆಗೆಯಲು ಬಳಸುವ ದೊಡ್ಡ ಬಾರ್ಜ್ ಹಾಗೂ ಲಾಂಗ್ ಆರ್ಮ್ ಭೂಮರ್ ಮುಂತಾದ ವಿಶೇಷ ಯಂತ್ರಗಳು ಬೇಕಾಗಲಿವೆ. ಅಲ್ಲದೇ ಯಂತ್ರವನ್ನು ಕಾಮಗಾರಿ ಸ್ಥಳಕ್ಕೆ ರರುವುದೂ ಕಷ್ಟ. ನದಿಗೆ ಅಡ್ಡಲಾಗಿ ಕಟ್ಟಲಾದ ಸೇತುವೆ ಅಡ್ಡಿಯಾಗಿದೆ. ಅಳಿವೆಯಲ್ಲಿ ದೊಡ್ಡ ಬಾರ್ಜ್ಗಳು ಬರುವಷ್ಟು ನದಿ ಆಳವಿರದ ಕಾರಣ ಬಾರ್ಜ್ಗಳು ಸಿಕ್ಕಿ ಬೀಳುವ ಸಾಧ್ಯತೆ ಇದೆ. ಗುತ್ತಿಗೆದಾರರಿಗೂ ಈ ಕಾರ್ಯ ಸಾಕಷ್ಟು ಸವಾಲಿನದ್ದಾಗಿದೆ. ಇದರಿಂದ ಯಾರೂ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧರಿಲ್ಲ.

ಹಚ್ಚುವ ನದಿಯ ಹರಿವು

ಮಳೆಗಾಲದಲ್ಲಿ ನದಿಯ ನರಿವಿನ ವೇಗ ಹೆಚ್ಚಾಗಲಿದೆ. ಅಲ್ಲದೇ ಪ್ರವಾಹ ಬರುವ ಸಾಧ್ಯತೆ ಇದೆ. ಇದರಿಂದ ನದಿಯ ನಡುವೆ ಯಂತ್ರ ನಿಲ್ಲಿಸಿ ಸಂಪೂರ್ಣ ಮಣ್ಣು ತೆರವು ಕಾರ್ಯ ಮಾಡಲು ಸಾಧ್ಯವಿಲ್ಲ ಎಂಬುದು ತಜ್ಞರ ಅಭಿಪ್ರಾಯ.

ಜನರಲ್ಲಿ ಆತಂಕ

ನದಿಯ ನಡುವೆ ನಡುಗಡ್ಡೆ ಸೃಷ್ಟಿಯಾಗಿದ್ದರಿಂದ ನದಿಯ ಹರಿವು ಬದಲಾಗುಲಿದೆ. ಇದರಿಂದ ಪಕ್ಕದ ಉಳುವರೆಗೆ ಗ್ರಾಮಕ್ಕೆ ಪ್ರವಾಹ ಬರುವ ಆತಂಕವಿದೆ. ಅಲ್ಲದೇ ನೀರು ನಿಂತು ಶಿರೂರಿನ ಹಿಂದೆ ಇರುವ ಸಾಕಷ್ಟು ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಶೀಘ್ರದಲ್ಲಿ ಮಣ್ಣು ತೆರವು ಮಾಡಿಕೊಡಬೇಕು ಎಂದು ಉಳುವರೆ ಹಾಗೂ ಗಂಗಾವಳಿ ನದಿಯ ಇಕ್ಕೆಲದ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net