Shri Mahasati ಶ್ರೀ ಮಹಾಸತಿ ದೇವರ ಜಾತ್ರೆ ಆರಂಭ

ಸೋಡಿಗದ್ದೆ ಮಹಾಸತಿ ದೇವಿ Shri Mahasati
ಸೋಡಿಗದ್ದೆ ಮಹಾಸತಿ ದೇವಿ Shri Mahasati
Published on
ಭಟ್ಕಳ: ತಾಲೂಕಿನ ಸುಪ್ರಸಿದ್ಧ ಶಕ್ತಿ ಕ್ಷೇತ್ರಗಳಲ್ಲಿ ಒಂದಾದ ತಾಲೂಕಿನ ಸೋಡಿಗದ್ದೆ ಶ್ರೀ ಮಹಾಸತಿ Shri Mahasati ದೇವರ ಜಾತ್ರೆಯು ಶುಕ್ರವಾರ ಹಾಲಹಬ್ಬದಿಂದ ಅದ್ದೂರಿಯಾಗಿ ಆರಂಭಗೊಂಡಿದ್ದು, ಮೊದಲ ದಿನ ಸಹಸ್ರಾರು ಭಕ್ತರು ದೇವಿ ದರ್ಶನ ಪಡೆದು ಪುನೀತರಾದರು.
ಶುಕ್ರವಾರದಿಂದ ಆರಂಭವಾದ ಜಾತ್ರೆಯೂ ಜ. 31ರವರೆಗೆ ನಡೆಯಲಿದೆ. ಬೆಳಗ್ಗೆಯಿಂದಲೇ ಭಕ್ತರು ಶ್ರೀದೇವರಿಗೆ ಹೂವಿನ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದುಕೊಂಡರು.
ಜಿಲ್ಲೆಯಲ್ಲಿ ಅತ್ಯಂತ ದೊಡ್ಡ ಜಾತ್ರೆಯಾದ ಸೋಡಿಗದ್ದೆ ಶ್ರೀ ಮಹಾಸತಿ ಅಮ್ಮನವರ ಜಾತ್ರೆಗೆ ಊರ ಹಾಗೂ ಪರ ಊರಿನಿಂದ ಸಹಸ್ರಾರು ಭಕ್ತಾದಿಗಳು ಆಗಮಿಸಿ ಹರಕೆಗಳನ್ನು ತೀರಿಸುವ ಸಂಪ್ರದಾಯ ರೂಢಿಯಲ್ಲಿದೆ.
ಜಾತ್ರೆಯ ಇನ್ನೊಂದು ವಿಶೇಷ ಎಂದರೆ ದೇವಸ್ಥಾನವನ್ನು ವಿಶೇಷ ರೀತಿಯ ಬಗೆ ಬಗೆಯ ಹೂವಿನಿಂದ ದೇವಾಲಯ ಪ್ರಾಂಗಣವನ್ನು ಸುಂದರವಾಗಿ ಕಂಗೊಳಿಸುವಂತೆ ಅಲಂಕೃತಗೊಳಿಸಲಾಯಿತು.
ಎರಡನೇ ದಿನದ ವಿಶೇಷ ಕೆಂಡ ಸೇವೆ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಬರಲಿದ್ದು, ಹರಕೆ ತಿರಿಸಿ ದೇವಿಗೆ ಪೂಜೆ ಸಲ್ಲಿಸಲಿದ್ದಾರೆ.
ಸೋಡಿಗದ್ದೆ ಶ್ರೀ ಮಹಾಸತಿ ಜಾತ್ರೆಯ ವಿಶೇಷವೆಂದರೆ ದೇವರಿಗೆ ಗೊಂಬೆಗಳನ್ನು ಅರ್ಪಿಸುವುದು ಪ್ರಮುಖ ಹರಕೆಗಳಲ್ಲಿ ಒಂದಾಗಿದೆ. ಗೊಂಬೆಗಳಲ್ಲಿಯೂ ಮೂರು ವಿವಿಧ ಗಾತ್ರದ ಗೊಂಬೆಗಳನ್ನು ಅರ್ಪಿಸಲಿದ್ದು, ಭಕ್ತರು ತಮ್ಮ ಶಕ್ತ್ಯಾನುಸಾರ ಹರಕೆಯ ಗೊಂಬೆಗಳನ್ನು ನೀಡುತ್ತಾರೆ.
ಜಾತ್ರಾ ಸಮಯದಲ್ಲಿ ಪ್ರತಿ ನಿತ್ಯ ಭಕ್ತರು ಹೂವಿನ ಪೂಜೆ, ತೊಟ್ಟಿಲು ಸಮರ್ಪಣೆ, ಕಣ್ಣು, ಇತ್ಯಾದಿಗಳನ್ನು ಸಮರ್ಪಿಸಿ ತಮ್ಮ ಹರಕೆಯನ್ನು ತೀರಿಸುತ್ತಾರೆ.
ಈ ಬಾರಿ ಜಾತ್ರೆಯ ಸಂದರ್ಭದಲ್ಲಿ ಎಂಟು ದಿನಗಳ ಕಾಲ ಪ್ರಸಾದ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ. ದೇವಾಲಯದ ಸುತ್ತಲು ಜಾತ್ರಾ ಮಹೋತ್ಸವದ ಅಂಗಡಿ-ಮುಂಗಟ್ಟುಗಳು ಜಾತ್ರೆಯ ವೈಭವವನ್ನು ಇನ್ನಷ್ಟು ಹೆಚ್ಚಿಸಿದವು.
ಸತತ ಒಂಬತ್ತು ದಿನಗಳ ಕಾಲ ಅದ್ದೂರಿಯಾಗಿ ಸಂಭ್ರಮದಿಂದ ನಡೆಯುವ ಅತ್ಯಂತ ಮಹತ್ವದ ಜಾತ್ರೆಯಾಗಿದೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net