ಕುಗ್ರಾಮಗಳಿಗೆ ಬೆಳಕು ನೀಡುವ ಶಾಲೆಗಳು

ಗೋಕರ್ಣದ ಅಶೋಕೆಯ ಕನ್ನಡ ಶಾಲೆಯ ಅಮೃತ ಮಹೋತ್ಸವ ಸಮಾರಂಭವನ್ನು ಶುಕ್ರವಾರ ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು. ಉದಯ ನಾಯ್ಕ, ರಾಜೇಂದ್ರ ಭಟ್ಟ, ಕೇಶವ ನಾಯ್ಕ, ಮಹೇಶ ಶೆಟ್ಟಿ, ಡಾ. ಪತಂಜಲಿ ಶರ್ಮ, ಸಿ.ಜಿ. ನಾಯಕದೊರೆ ಇತರರಿದ್ದರು.
ಗೋಕರ್ಣದ ಅಶೋಕೆಯ ಕನ್ನಡ ಶಾಲೆಯ ಅಮೃತ ಮಹೋತ್ಸವ ಸಮಾರಂಭವನ್ನು ಶುಕ್ರವಾರ ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು. ಉದಯ ನಾಯ್ಕ, ರಾಜೇಂದ್ರ ಭಟ್ಟ, ಕೇಶವ ನಾಯ್ಕ, ಮಹೇಶ ಶೆಟ್ಟಿ, ಡಾ. ಪತಂಜಲಿ ಶರ್ಮ, ಸಿ.ಜಿ. ನಾಯಕದೊರೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ದಿನಕರ ಶೆಟ್ಟಿ ಅಭಿಪ್ರಾಯ
  • ಅಮೃತಮಹೋತ್ಸವ ಸಮಾರಂಭ ಉದ್ಘಾಟನೆ
ಗೋಕರ್ಣ: ಒಂದು ಶಾಲೆ ಕುಗ್ರಾಮವನ್ನು ಕೂಡ ಸುಗ್ರಾಮವನ್ನಾಗಿಸಿ ಹೊಸ ಬೆಳಕನ್ನು ಹಚ್ಚಬಲ್ಲದು. ಇದಕ್ಕೆ ಒಂದು ಕಾಲದಲ್ಲಿ ಕುಗ್ರಾಮದ ಹಣೆಪಟ್ಟಿ ಹೊತ್ತು, ಹಾಲಕ್ಕಿ ಒಕ್ಕಲಿಗರು ಗರಿಷ್ಠ ಸಂಖ್ಯೆಯಲ್ಲಿರುವ ಗೋಕರ್ಣದ ಅಶೋಕೆ ಮತ್ತು 75 ವರ್ಷ ಹಿಂದೆಯೇ ಇಲ್ಲಿ ಪ್ರಾರಂಭವಾದ ಕನ್ನಡ ಶಾಲೆ ಉದಾಹರಣೆಯಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಇಲ್ಲಿನ ಅಶೋಕೆಯ ಕನ್ನಡ ಶಾಲೆಯ ಅಮೃತ ಮಹೋತ್ಸವವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಶೋಕೆಗೆ ನಡೆದಾಡಲು ಕೂಡ ಆಗದಂತಹ ರಸ್ತೆಯಿತ್ತು. ಇಂತಹ ಮಣ್ಣು ಕಲ್ಲಿನ ದಾರಿಯ ಮೇಲೆ ಮಕ್ಕಳು ಶಾಲೆಗೆ ಹೋಗುವ ದಯನೀಯ ದುಸ್ಥಿತಿ ಹೋಗಲಾಡಿಸಲು 2008ರ ನನ್ನ ಶಾಸಕತ್ವದ ಅವಧಿಯಲ್ಲಿ ಓಂ ಬೀಚ್ ಕ್ರಾಸ್‌ನಿಂದ ಬೇಲೆಕಾನು ತನಕ ಡಾಂಬರ ರಸ್ತೆ ನಿರ್ಮಿಸಲಾಯಿತು. ಕಳೆದ ವರ್ಷ ಗೋಕರ್ಣದಿಂದ ತದಡಿ-ಬೇಲೆಕಾನು ಮೂಲಕ ಬಸ್ ಬಿಡುವ ಏರ್ಪಾಟು ಮಾಡಲಾಯಿತು ಎಂದರು.
ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗ ವಿಭಾಗದ ಖಜಾಂಚಿ ಮಹೇಶ ಶೆಟ್ಟಿ ಮಾತನಾಡಿ, ಕಳೆದ ಎರಡು ದಶಕಗಳಿಂದ ಅಶೋಕೆ ಸೇರಿದಂತೆ ಗೋಕರ್ಣದ ವಿವಿಧೆಡೆಗಳಲ್ಲಿ ಆಗಬೇಕಾದ ವಿವಿಧ ಸಾರ್ವಜನಿಕ ಕೆಲಸಗಳನ್ನು ಅವಿರತ ಮಾಡಿಕೊಡುವ ಮೂಲಕ ತಾವು ಕೇವಲ ಚುನಾವಣೆ ವೇಳೆ ಬಂದು ಹೋಗುವ ಶಾಸಕರಲ್ಲ, ಸದಾ ಜನರೊಂದಿಗೆ ನಿಲ್ಲುವ ಶಾಸಕರು ಎನ್ನುವುದನ್ನು ದಿನಕರ ಶೆಟ್ಟಿ ಋಜುವಾತಾಗಿಸಿದ್ದಾರೆ ಎಂದರು.
ಬಿಇಒ ಉದಯ ನಾಯ್ಕ, ತಾಪಂ ಇಒ ರಾಜೇಂದ್ರ ಭಟ್ಟ, ಡಾ.ಪತಂಜಲಿ ಶರ್ಮ, ನಿವೃತ್ತ ಶಿಕ್ಷಕ ಬಿ.ಎಸ್. ಗೌಡ, ಶಿಕ್ಷಣ ಇಲಾಖೆಯ ಕೇಶವ ನಾಯ್ಕ, ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಸಂಘದ ತಾಲೂಕಾಧ್ಯಕ್ಷ ಸಿ.ಜಿ. ನಾಯಕದೊರೆ ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಾಣೇಶ್ವರ ರಾಮ ಗೌಡ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ರಾಮಮೂರ್ತಿ ನಾಯಕ, ಗ್ರಾಪಂ ಮಾಜಿ ಸದಸ್ಯರಾದ ಶಾರದಾ ಮೂಡಂಗಿ, ಮೋಹನ ಮೂಡಂಗಿ, ವಕೀಲ ವೀರೇಂದ್ರ ನಾಯಕ, ನಿವೃತ್ತ ಶಿಕ್ಷಕ ಮಧುಕರ ನಾಯಕ, ಶಿಕ್ಷಕ ಮಂಜುನಾಥ ನಾಯಕ, ಶಿಕ್ಷಣ ಇಲಾಖೆಯ ದೀಪಾ ಕಾಮತ, ಮೋಹಿನಿ ಗೌಡ, ದಿನೇಶ ಪಂಡಿತ, ಎಸ್‌ಡಿಎಂಸಿ ಉಪಾಧ್ಯಕ್ಷೆ ಮಂಗಲಾ ಗೌಡ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವೆಂಕಟ್ರಮಣ ಗೌಡ ಇತರರಿದ್ದರು.
ಅಮೃತ ಮಹೋತ್ಸವ ನಿಮಿತ್ತ ಊರ ಹಿರಿಯ ಗೌಡರಾದ ಮಹಾಬಲೇಶ್ವರ ಗೌಡ, ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ, ನಾಟಿ ವೈದ್ಯ ಹನುಮಂತ ಗೌಡ ಬೆಳಂಬಾರ, ನಿವೃತ್ತ ಶಿಕ್ಷಕ ಬಿ.ಎಸ್. ಗೌಡ, ಸಮಾಜ ಸೇವಕ ವೆಂಕಟ್ರಮಣ ಗೌಡ, ಸ್ಥಳ ದಾನಿಗಳು ಮತ್ತು ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮತ್ತು ಊರ ನಾಗರಿಕರಿಂದ ಮನರಂಜನಾ ಕಾರ್ಯಕ್ರಮ ನಡೆದವು. ಶಾಲೆ ಮುಖ್ಯಾಧ್ಯಾಪಕ ನಾರಾಯಣ ಉದ್ದಂಡ ನಾಯಕ, ಶಿಕ್ಷಕಿ ಗೀತಾ ಹೆಬ್ಬಾರ ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net