ಅಂಕೋಲಾದಲ್ಲಿ ಮಾ.25 ರಂದು ಮಾರಣಾಂತಿಕ ಹಲ್ಲೆಗೊಳಗಾಗಿ, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಅವರು ಶನಿವಾರ ಕಾರವಾರದ ತಮ್ಮ ಬಾಡಿಗೆ ಮನೆಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸಾಮಾನ್ಯವಾಗಿ ಹೆಣ್ಣು, ಹೊನ್ನು, ಮಣ್ಣಿಗಾಗಿ ಕೊಲೆ ಯತ್ನಗಳು ನಡೆಯುತ್ತವೆ. ಆದರೆ, ನಾನು ಯಾರ ಜಮೀನು ಆಸ್ತಿಯನ್ನೂ ಕಬಳಿಸಿಲ್ಲ. ಹೆಣ್ಣಿನ ಸಹವಾಸವಿಲ್ಲ. ಇದರಿಂದ ರಾಜಕೀಯ, ಸಹಕಾರಿ ದ್ವೇಷಕ್ಕಾಗಿಯೇ ಕೊಲೆಗೆ ಯತ್ನ ನಡೆದಿರಬಹುದು ಎಂದರು.