ಕಾರವಾರದಲ್ಲಿ ಮತ್ತೆ ಇಡಿ ದಾಳಿ !!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಗೋವಾದ ಕೋಟ್ಯಾಧೀಶನ ಕಾರವಾರ ಮನೆಯ ಮೇಲೆ ದಾಳಿ
  • ಅಕ್ರಮವಾಗಿ 300 ಕೋಟಿ ರೂ. ಆಸ್ತಿ ಮಾಡಿದ ಆರೋಪ
ನಗರದ ಕೋಡಿಬಾಗದ ಅಬಕಾರಿ ಕಚೇರಿಯ ಎದುರಿನ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿರುವ ನಾಲ್ಕು ಫ್ಲಾಟ್‌ಗಳ ಮೇಲೆ ಗೋವಾದ ಇಡಿ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಮೂಲತಃ ಶಿವಮೊಗ್ಗದವ ಎಂದು ಹೇಳಿಕೊಂಡಿದ್ದ ಸಿದ್ದಿಕ್‌ ಖಾನ್‌ ಕಾರವಾರದಲ್ಲಿ ಐದು ವರ್ಷ ನೆಲೆಸಿದ್ದ. ನಂತರ ಗೋವಾಕ್ಕೆ ಸ್ಥಳಾಂತರಗೊಂಡಿದ್ದ. ಆತನ ಒಂದು ಕುಟುಂಬ ಇಲ್ಲಿ ನೆಲೆಸಿತ್ತು ಎನ್ನಲಾಗಿದೆ. ಗೋವಾದಲ್ಲಿ ಮೃತರ ಹೆಸರಿನ ಜಮೀನುಗಳನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿ ಆರೋಪ ಆತನ ಮೇಲಿತ್ತು.
ಇದರಿಂದ 2024 ರಲ್ಲಿ ಗೋವಾ ಎಸ್‌ಐಟಿ ಆತನನ್ನು ಬಂಧಿಸಿತ್ತು. ಆತ ಜೈಲಿನಿಂದಲೇ ಪರಾರಿಯಾಗಿದ್ದ ನಂತರ ಕೇರಳದಲ್ಲಿ ಗೋವಾ ಎಸ್‌ಐಟಿ ಅಧಿಕಾರಿಗಳು ಆತನನ್ನು ಬಂಧಿಸಿದ್ದರು.ಗೋವಾ ಎಸ್‌ಐಟಿ ಅಧಿಕಾರಿಗಳು ಆಗ ಕಾರವಾರಕ್ಕೆ ಆಗಮಿಸಿ ಸಿದ್ದಿಕ್‌ ಖಾನ್‌ಗೆ ಸೇರಿದ ಫ್ಲಾಟ್‌ಗಳನ್ನು ಸೀಜ್‌ ಮಾಡಿದ್ದರು.
ಅದೇ ಪ್ರಕರಣವನ್ನು ಈ ವರ್ಷ ಜುಲೈನಲ್ಲಿ ಕೈಗೆತ್ತಿಕೊಂಡ ಇಡಿ ಸಿದ್ದಿಕ್‌ ಖಾನ್‌ನನ್ನು ಬಂಧಿಸಿತ್ತು. ಆತ ಗೋವಾದಲ್ಲಿ ಅಕ್ರಮ ಹಣ ವರ್ಗಾವಣೆ ದಂಧೆ ನಡೆಸಿ ಸುಮಾರು 300 ಕೋಟಿ ರೂ. ಮೌಲ್ಯದ 25 ಹೆಕ್ಟೇರ್‌ ಭೂಮಿಯನ್ನು ಖರೀದಿಸಿದ್ದ ಎಂದು ಇಡಿ ತನ್ನ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿತ್ತು. ಇದೇ ಆರೋಪದ ಮೇಲೆ ಈಗ ಇಡಿ ಅಧಿಕಾರಿಗಳು ಕಾರವಾರದಲ್ಲಿರುವ ಫ್ಲಾಟ್‌ನಲ್ಲಿ ಹುಡುಕಾಟ ನಡೆಸಿದ್ದಾರೆ.

siddik khan

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net