protest ರಸ್ತೆ ಸಂಚಾರ ತಡೆದು ಪ್ರತಿಭಟನೆ

ಯಲ್ಲಾಪುರದ ಅಂಬೇಡ್ಕರ್ ಸರ್ಕಲ್ ಬಳಿ ಟಿಎಂಎಸ್ ಆಡಳಿತಾಧಿಕಾರಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ protest ಸಹಕಾರಿ ಇಲಾಖೆಯ ಜಿಲ್ಲಾ ಉಪನಿಬಂಧಕ ಹಜಮತ್ ಉಲ್ಲಾ ಖಾನ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.
ಯಲ್ಲಾಪುರದ ಅಂಬೇಡ್ಕರ್ ಸರ್ಕಲ್ ಬಳಿ ಟಿಎಂಎಸ್ ಆಡಳಿತಾಧಿಕಾರಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ protest ಸಹಕಾರಿ ಇಲಾಖೆಯ ಜಿಲ್ಲಾ ಉಪನಿಬಂಧಕ ಹಜಮತ್ ಉಲ್ಲಾ ಖಾನ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.
Published on
ಯಲ್ಲಾಪುರ: ಆಡಳಿತಾಧಿಕಾರಿಯ ವಿರುದ್ಧ ಟಿಎಂಎಸ್ ಉಳಿಸಿ ಹೋರಾಟ ಸಮಿತಿಯಿಂದ ಪಟ್ಟಣದ ಅಂಬೇಡ್ಕರ್ ಸರ್ಕಲ್ ಬಳಿ ರಸ್ತೆ ಸಂಚಾರ ತಡೆ ನಡೆಸಿ ಪ್ರತಿಭಟನೆ protest ನಡೆಸಿದರು.
ಟಿಎಂಎಸ್ ಮಾಜಿ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಸಂಸ್ಥೆಯ ಉಳಿವಿಗಾಗಿ ಯಾವುದೇ ಹೋರಾಟಕ್ಕೆ ಸಿದ್ಧ. ಆಡಳಿತಾಧಿಕಾರಿ ವಿರುದ್ಧ ಕ್ರಮ ಆಗದೆ ಇದ್ದರೆ ಮಾ.13 ರಿಂದ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ತಿಳಿಸಿದರು.
ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ಎಲ್ಲಾ ಸಹಕಾರಿ ಸಂಸ್ಥೆಗಳ ಮಾತೃ ಸಂಸ್ಥೆಯಾದ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಶಾಸಕರೇ ರೈತರ ಸಂಸ್ಥೆಯನ್ನು, ರೈತ ನಾಯಕರನ್ನು ದಮನ ಮಾಡುವ ಕಾರ್ಯಕ್ಕೆ ಮುಂದಾಗಿರುವುದು ಪ್ರಾರಬ್ಧ ಎಂದರು.
ಟಿಎಂಎಸ್ ಮಾಜಿ ನಿರ್ದೇಶಕ ವೆಂಕಟರಮಣ ಬೆಳ್ಳಿ ಮಾತನಾಡಿ, ಟಿಎಂಎಸ್ ಸಂಸ್ಥೆ ಯಾರೋ ಒಬ್ಬರಿಂದ ಬೆಳೆದಿಲ್ಲ. ರೈತರು ಕಷ್ಟಪಟ್ಟು ಬೆಳೆದ ಬೆಳೆಯಿಂದ, ರೈತರ ಷೇರು, ಬಂಡವಾಳ, ವ್ಯವಹಾರದಿಂದ ಪ್ರಗತಿ ಕಂಡಿದೆ.
ಸಂಸ್ಥೆಯಲ್ಲಿ ದಶಕಗಳ ಕಾಲ ಮುಖ್ಯಕಾರ್ಯನಿರ್ವಾಹಕರಾಗಿದ್ದ ಸಿ.ಎಸ್. ಹೆಗಡೆ ಅವರೆ ಈ ಎಲ್ಲ ಅವಾಂತರಗಳಿಗೆ ಕಾರಣರಾಗಿದ್ದಾರೆ. ಶಾಸಕರು ಇದಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಇಂತಹ ಷಡ್ಯಂತ್ರದ ವಿರುದ್ಧ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.
ಪ್ರಮುಖರಾದ ಪ್ರಮೋದ ಹೆಗಡೆ, ರಾಘವೇಂದ್ರ ಭಟ್ಟ, ಸುಬ್ಬಣ್ಣ ಉದ್ದಾಬೈಲ, ನರಸಿಂಹ ಭಟ್ಟ ಕುಂಕಿಮನೆ, ಮಾದೇವ ನಾಯ್ಕ ಮುಂತಾದವರು ಆಡಳಿತಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಆಡಳಿತಾಧಿಕಾರಿ ವರ್ಗಾವಣೆಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ಅಧಿಕಾರಿಗಳು ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ವರ್ಗಾವಣೆಗೆ ಕ್ರಮ ಕೈಗೊಳ್ಳದಿದ್ದರೆ ಮಾ. 13ರಿಂದ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಚ್ಚರಿಸಿದರು.
ಹೋರಾಟ ಸಮಿತಿಯ ನಾಗರಾಜ ಕವಡಿಕೆರೆ, ನಟರಾಜ ಗೌಡರ, ವೆಂಕಟರಮಣ ಭಟ್ಟ ಕಿರಕುಂಭತ್ತಿ, ಅಪ್ಪು ಆಚಾರಿ, ಕೆ.ಟಿ. ಹೆಗಡೆ, ಗೋಪಾಲಕೃಷ್ಣ ಗಾಂವ್ಕರ, ಸುಬ್ಬಣ್ಣ ದಾನ್ಯಾನಕೊಪ್ಪ, ಶಿರಸಿಯ ಅನಂತಮೂರ್ತಿ ಹೆಗಡೆ ಇತರರಿದ್ದರು.
ಪೇಚಿಗೆ ಸಿಲುಕಿದ ಡಿಆರ್: ಸ್ಥಳಕ್ಕೆ ಆಗಮಿಸಿದ ಸಹಕಾರಿ ಇಲಾಖೆಯ ಜಿಲ್ಲಾ ಉಪನಿಬಂಧಕ ಹಜಮತ್ ಉಲ್ಲಾ ಖಾನ್, ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿ, ಆಡಳಿತಾಧಿಕಾರಿ ನೇಮಕ ಸರ್ಕಾರದಿಂದ ಆಗಿದೆ. ಪ್ರತಿಭಟನೆ ಕುರಿತು ಸರ್ಕಾರದ ಗಮನಕ್ಕೆ ತಂದು ಅಧಿಕಾರಿ ಬದಲಾವಣೆಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಇದಕ್ಕೆ ಒಪ್ಪದ ಪ್ರತಿಭಟನಾಕಾರರು, ಆಡಳಿತಾಧಿಕಾರಿ ನೇಮಕವನ್ನು ಸರ್ಕಾರ ಮಾಡಿಲ್ಲ, ಇಲಾಖೆಯ ಅಧಿಕಾರಿಗಳಾದ ನೀವೇ ಮಾಡಿದ್ದೀರಿ, ಸುಳ್ಳು ಹೇಳಿ ನುಣುಚಿಕೊಳ್ಳುವ ಪ್ರಯತ್ನ ಬೇಡ ಎಂದಾಗ ನೇಮಕ ಮಾಡಿದ್ದು ನಾನೇ ಎಂದು ಅಧಿಕಾರಿ ಒಪ್ಪಿಕೊಂಡರು.
ಮೊದಲಿಗೆ ಆಡಳಿತಾಧಿಕಾರಿಯನ್ನು ವರ್ಗಾಯಿಸಲು ಪ್ರಯತ್ನಿಸುತ್ತೇನೆ ಎಂದು ಹೇಳುತ್ತಿದ್ದ ಡಿಆರ್ ಪ್ರತಿಭಟನಾಕಾರರ ಆಕ್ರೋಶ ಹೆಚ್ಚುತ್ತಿದ್ದಂತೆ ಸಂಜೆಯೊಳಗೆ ವರ್ಗಾವಣೆ ಮಾಡುತ್ತೇನೆ ಎಂದರು.
ಆಡಳಿತಾಧಿಕಾರಿ ಮಾಡಿದ್ದು ತಪ್ಪು: ಸಂಸ್ಥೆಯಿಂದ ನ್ಯಾಯಾಲಯದಲ್ಲಿ ದಾಖಲಾದ ಮೊಕದ್ದಮೆಯನ್ನು ಹಿಂಪಡೆಯುವ ನಿರ್ಣಯವನ್ನು ಆಡಳಿತಾಧಿಕಾರಿ ಕೈಗೊಂಡಿದ್ದಾರೆ.
ಅವರಿಗೆ ಆ ಅಧಿಕಾರ ಇದೆಯೇ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಡಿಆರ್ ಅವರು ಹಾಗೆ ಮಾಡಬಾರದಿತ್ತು. ಆದರೆ, ಮಾಡಿದ್ದಾರೆ, ನಾನು ಅವರನ್ನು ತರಾಟೆಗೆ ತೆಗೆದುಕೊಂಡಿದ್ದೇನೆ. ವರ್ಗಾವಣೆಯನ್ನೂ ಮಾಡುತ್ತೇನೆ ಎಂದರು.
ಹಿಂಬಾಗಿಲಿನಿಂದ ಅಧಿಕಾರ ಪಡೆಯಲು ಪ್ರಯತ್ನ: ಬೆಂಗಳೂರಿನಿಂದ ದೂರವಾಣಿಯಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಟಿಎಂಎಸ್‌ನಲ್ಲಿ ಆಡಳಿತಾಧಿಕಾರಿಯ ಅಧಿಕಾರ ವಹಿಸಿಕೊಳ್ಳುವ ಕ್ಷಣದಿಂದಲೂ ಕಾನೂನು ಮೀರಿ ಪ್ರಹಸನಗಳು ನಡೆದಿವೆ.
ಹಿಂಬಾಗಿಲಿನಿಂದ ಅಧಿಕಾರ ಪಡೆಯಲು ಪ್ರಯತ್ನ ನಡೆಯುತ್ತಿದೆ. ಈ ಅವ್ಯವಸ್ಥೆ ವಿರುದ್ಧ ರಾಜ್ಯದ ಬಿಜೆಪಿ ನಾಯಕರ ಗಮನಕ್ಕೂ ತರಲಾಗಿದೆ. ರೈತರ, ಸಂಸ್ಥೆಯ ಹಿತಕ್ಕಾಗಿ ಹೋರಾಟ ಮುಂದುವರಿಸುತ್ತೇವೆ ಎಂದರು.
ಮಾತಿನ ಚಕಮಕಿ: ಅಂಬೇಡ್ಕರ್ ಸರ್ಕಲ್ ಬಳಿ ನಾಲ್ಕು ರಸ್ತೆಗಳನ್ನು ಎರಡು ತಾಸುಗಳ ಕಾಲ ಪ್ರತಿಭಟನಾಕಾರರು ತಡೆದಿದ್ದರು. ಆ ವೇಳೆ ಪೊಲೀಸರು ಬಸ್ ನಿಲ್ದಾಣದ ಆವಾರದಿಂದ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಇದು ಪ್ರತಿಭಟನಾಕಾರರನ್ನು ಕೆರಳಿಸಿತು.
ವಾಹನ ಸಂಚಾರ ಬಂದ್ ಮಾಡುವಂತೆ ಪ್ರತಿಭಟನಾಕಾರರು ಪೊಲೀಸರನ್ನು ಆಗ್ರಹಿಸಿದರು. ಇದಕ್ಕೆ ತಹಸೀಲ್ದಾರ್ ಚಂದ್ರಶೇಖರ ಹೊಸ್ಮನಿ ಹಾಗೂ ಸಿಪಿಐ ರಮೇಶ ಹಾನಾಪುರ ಒಪ್ಪಲಿಲ್ಲ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net