Hindu : ಧರ್ಮ ರಕ್ಷಣೆ ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ

ಕುಮಟಾ ತಾಲೂಕಿನ ಹೊಳೆಗದ್ದೆ ಶಾಂತಿಕಾ ಪರಮೇಶ್ವರಿ ಸಭಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಮಾಜಿ ಸಚಿವ ಪ್ರಮೋದ ಮಧ್ವರಾಜ ಉದ್ಘಾಟಿಸಿದರು. ಎಂ.ಜಿ. ಭಟ್​, ವಿನೋದ ಪ್ರಭು, ನಾಗರಾಜ ಜೋಶಿ, ವಿನಾಯಕ ಜೋಶಿ, ಜಯರಾಮ ಭಟ್​, ರಾಮು ಅಡಿ ಇತರರಿದ್ದರು.
ಕುಮಟಾ ತಾಲೂಕಿನ ಹೊಳೆಗದ್ದೆ ಶಾಂತಿಕಾ ಪರಮೇಶ್ವರಿ ಸಭಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಮಾಜಿ ಸಚಿವ ಪ್ರಮೋದ ಮಧ್ವರಾಜ ಉದ್ಘಾಟಿಸಿದರು. ಎಂ.ಜಿ. ಭಟ್​, ವಿನೋದ ಪ್ರಭು, ನಾಗರಾಜ ಜೋಶಿ, ವಿನಾಯಕ ಜೋಶಿ, ಜಯರಾಮ ಭಟ್​, ರಾಮು ಅಡಿ ಇತರರಿದ್ದರು.
Published on
ಕುಮಟಾ: ಜಗತ್ತಿನ ಅತ್ಯಂತ ಶ್ರೇಷ್ಠ ಧರ್ಮ ಸನಾತನ ಧರ್ಮ. ಅದರ ರಣೆ ಪ್ರತಿಯೊಬ್ಬ ಹಿಂದೂವಿನ (Hindu) ಕರ್ತವ್ಯ ಎಂದು ಮಾಜಿ ಸಚಿವ ಪ್ರಮೋದ ಮಧ್ವರಾಜ ಹೇಳಿದರು.
ತಾಲೂಕಿನ ಹೊಳೆಗದ್ದೆಯ ಶಾಂತಿಕಾ ಪರಮೇಶ್ವರಿ ದೇವಾಲಯದ ಸಭಾಭವನದಲ್ಲಿ ಸನಾತನ ಧರ್ಮ ಜಾಗೃತಿ ಪ್ರತಿಷ್ಠಾನದಿಂದ ಅಭಿನಂದನಾ ಕಾರ್ಯಕ್ರಮ ಹಾಗೂ ನನ್ನ ದೇಶ, ನನ್ನ ಧರ್ಮ ರಣೆಯಲ್ಲಿ ನನ್ನ ಪಾತ್ರ ಎಂಬ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉಪನ್ಯಾಸ ಮಾಡಿದ ಧರ್ಮ ಜಾಗರಣ ವಿಭಾಗ ಸಂಚಾಲಕ ವಿನೋದ ಪ್ರಭು, ನಮ್ಮ ಧರ್ಮ ಹಾಗೂ ದೇಶ ಜಗತ್ತಿನಲ್ಲಿ ಅತ್ಯಂತ ವಿಶಿಷ್ಟ. ದೇಶದಲ್ಲಿ ಇಂದು ರಾಷ್ಟ್ರೀಯ ಸವಯಂ ಸೇವಕ ಸಂದ ನೂರನೇ ವರ್ಷದ ಆಚರಣೆ ನಡೆಯುತ್ತಿದೆ. ಈ ನೂರು ವರ್ಷಗಳು ಸಂ ಪ್ರತಿ ಮನೆಯಲ್ಲಿ ಧರ್ಮ ಜಾಗತಿ ಮಾಡುವ ಕೆಲಸ ಮಾಡುತ್ತಿದೆ. ಇದು ಪ್ರತಿಯೊಬ್ಬನ ಕರ್ತವ್ಯವಾಗಬೇಕು ಎಂದರು.
ಪ್ರಾಸ್ತಾವಿಕ ಮಾತನಾಡಿದ ಪ್ರತಿಷ್ಠಾನದ ಜಿಲ್ಲಾಧ್ಯ ಎಂ.ಜಿ. ಭಟ್​, ಹಿಂದೂ ಧರ್ಮ ನಾಶಕ್ಕಾಗಿ ಜಾಗತಿಕ ಷಡ್ಯಂತ್ರ ನಡೆಯುತ್ತಿದೆ. ಲವ್​ ಜಿಹಾದ್​, ಲ್ಯಾಂಡ್​ ಜಿಹಾದ್​ ಹೀಗೆ ಪ್ರತಿ ಹಂತದಲ್ಲೂ ನಡೆಯುತ್ತಿದೆ. ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆ, ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ, ಹೀಗೆ ಅನೇಕ ಅಪಾಯಗಳನ್ನು ಎದುರಿಸುತ್ತಿದ್ದೇವೆ. ನಾವೆಲ್ಲ ಜಾಗತರಾಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮೋದ ಮಧ್ವರಾಜ ಅವರ ಧರ್ಮ ಹಾಗೂ ಸಾಮಾಜಿಕ ಕಾರ್ಯ ಶ್ರೇಷ್ಠತೆಗಾಗಿ ಸನ್ಮಾನಿಸಿ ಗೌರವಿಸಲಾಯಿತು. ದೇವಾಲಯದ ವಿನಾಯಕ ಜೋಶಿ ಮಾತನಾಡಿದರು. ಜಯರಾಮ ಭಟ್​, ನಾಗರಾಜ ಜೋಶಿ ವೇದಿಕೆಯಲ್ಲಿದ್ದರು. ವಿಶ್ವ ಹಿಂದೂ ಪರಿಷತ್ತಿನ ತಾಲೂಕಾಧ್ಯ ರಾಮು ಅಡಿ ಸ್ವಾಗತಿಸಿದರು. ಹೇಮಂತಕುಮಾರ ಗಾಂವಕರ ವಂದನಾರ್ಪಣೆ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net