ರಾಷ್ಟ್ರಪತಿ ದ್ರೌಪದಿ ಮುರ್ಮು ನಾಡಿದ್ದು ಕಾರವಾರಕ್ಕೆ : ಕಾರ್ಯಕ್ರಮವೇನು..?

ರಾಷ್ಟ್ರಪತಿ ದ್ರೌಪದಿ ಮುರ್ಮು
ರಾಷ್ಟ್ರಪತಿ ದ್ರೌಪದಿ ಮುರ್ಮು
Published on
ಕಾರವಾರ: ಭಾರತದ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಡಿಸೆಂಬರ್ 28 ರಂದು ಇಲ್ಲಿನ ಕದಂಬ ನೌಕಾನೆಲೆಗೆ ಭೇಟಿ ನೀಡುವರು.
27 ರಂದು ರಂದು ಗೋವಾಕ್ಕೆ ಬರುವ ಅವರು, 28 ರಂದು ಬೆಳಗ್ಗೆ ಕಾರವಾರ ದಕ್ಕೆಯಿಂದ ಜಲಾಂತರ್ಗಾಮಿಯೊಂದರಲ್ಲಿ ಸಮುದ್ರಯಾನ (ಸೀ ಸೊರ್ಟಿ)ಕೈಗೊಳ್ಳುವರು. ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಕಾರವಾರಕ್ಕೆ ಆಗಮಿಸಿ ರಾಷ್ಟ್ರಪತಿಗಳನ್ನು ಬರಮಾಡಿಕೊಳ್ಳುವರು. ಮಧ್ಯಾಹ್ನ ನಂತರ ಅವರು ಕಾರವಾರದಿಂದ ವಾಪಸಾಗುವರು. ಡಿಸೆಂಬರ್‌ 29 ರಂದು ಅವರು ಜಾರ್ಖಂಡ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ರಾಷ್ಟ್ರಪತಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ಏಷ್ಯಾದ ಅತಿ ದೊಡ್ಡ ನೌಕಾನೆಲೆಯಾಗುವತ್ತ ಅಭಿವೃದ್ಧಿ ಹೊಂದುತ್ತಿರುವ ಕದಂಬ ನೌಕಾನೆಲೆಗೆ ರಾಷ್ಟçಪತಿಗಳ ಮೊದಲ ಭೇಟಿಯಾಗಿದೆ. ನೌಕಾಸೇನೆಯ ಅಧಿಕೃತ ಕಾರ್ಯಕ್ರಮ ಇದಾಗಿದ್ದು, ತಯಾರಿ ನಡೆಸಲಾಗಿದೆ ಎಂದು ಪಿಆರ್‌ಒ ಅರವಿಂದ್‌ ಮಾಹಿತಿ ನೀಡಿದ್ದಾರೆ.
ಮೀನುಗಾರಿಕೆ ನಿಷೇಧ:
ಡಿಸೆಂಬರ್ 28 ರಂದು ಬಳಗಿನಿಂದ ಮಧ್ಯಾಹ್ನ 3.30 ರವರೆಗೆ ಕಾರವಾರದ ಮಾಜಾಳಿಯಿಂದ ಹಾರವಾಡದವರೆಗೆ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಯನ್ನು ನಿಷೇಽಸಲಾಗಿದೆ ಎಂದು ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕರುಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net