ಮುಂಡಗೋಡಿನ 6 ಸಹಕಾರಿ ಸಂಘಗಳ ನೋಂದಣಿ ರದ್ದತಿಗೆ ಸಿದ್ಧತೆ

ಸಹಕಾರ ಇಲಾಖೆ ಲೋಗೋ
ಸಹಕಾರ ಇಲಾಖೆ ಲೋಗೋ
Published on
ಕಾರವಾರ: ಮುಂಡಗೋಡಿನ ಸಹಕಾರ ಅಭಿವೃದ್ಧಿ ಅಧಿಕಾರಿಯನ್ನು ಮುಂಡಗೋಡ ತಾಲೂಕಿನ ಸಹಕಾರ ಸಂಘಗಳಿಗೆ, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯನ್ವಯ , ಸಮಾಪನಾಕಾರಿಗಳು ನೇಮಕ ಮಾಡಿ ಕಾರವಾರ ಸಹಕಾರ ಉಪನಿಬಂಧಕರು ಆದೇಶ ಮಾಡಿದ್ದಾರೆ.
ಮುಂಡಗೋಡ ಕುಂಬಾರರ ಸಮಾಜದ ಕುಶಲ ಕೈಗಾರಿಕೆ ಕೆಲಸಗಾರರ ಸಹಕಾರ ಸಂಘ, ಹೊಸಕೊಪ್ಪ ಪಂಚವಟಿ ಮಹಿಳಾ ಮೀನುಗಾರರ ವಿವಿದೋದ್ದೇಶಗಳ ಸಹಕಾರ ಸಂಘ, ಹರಗನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ,ಹಕ್ಕಲಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ, ಮುಂಡಗೋಡ ತಾಲೂಕು ಪ್ರೈಮರಿ ಸ್ಕೂಲ್ ಕೋ-ಆಪ್ ಸ್ಟೋರ್ಸ್, ವಿಶಾಲ ಮಹಿಳಾ ಖಾದಿ ಗ್ರಾಮೋದ್ಯೋಗ ಹಾಗೂ ವಿವಿದೋದ್ದೇಶಗಳ ಸಹಕಾರ ಸಂಘ ಇವುಗಳಿಗೆ ಸಂಬಂಧಿಸಿದಂತೆ ಸಮಾಪನಾಽಕಾರಿಯನ್ನು ನಿಯೋಜಿಸಲಾಗಿದೆ. ಇವು ನಷ್ಟದಲ್ಲಿದ್ದು ಮುಚ್ಚಿವೆ ಅಥವಾ ಮುಚ್ಚುವ ಹಂತದಲ್ಲಿವೆ. ಇದರಿಂದ ಇವುಗಳಿಗೆ ಸಂಬಂಧಿಸಿದಂತೆ ಏನಾದರೂ ವ್ಯವಹಾರಗಳಿದ್ದಲ್ಲಿ 15 ದಿನಗಳ ಒಳಗಾಗಿ ಮುಂಡಗೋಡ ಸಹಕಾರಿ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಇಲ್ಲದಿದ್ದಲ್ಲಿ ಆ ಸಂಘದ ನೋಂದಣಿ ರದ್ದತಿಗೆ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಸಹಕಾರ ಇಲಾಖೆ ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net