ಕಾರವಾರದಲ್ಲಿ ಪ್ರಸಾದ ನೇತ್ರಾಲಯ ಶುಭಾರಂಭ

ಕಾರವಾರದಲ್ಲಿ ಪ್ರಸಾದ ನೇತ್ರಾಲಯ ಶುಭಾರಂಭಗೊಂಡಿತು.
ಕಾರವಾರದಲ್ಲಿ ಪ್ರಸಾದ ನೇತ್ರಾಲಯ ಶುಭಾರಂಭಗೊಂಡಿತು.
Published on: 

ಕಾರವಾರ: ಪ್ರಸಿದ್ಧ ಪ್ರಸಾದ ನೇತ್ರಾಲಯದ 12 ನೇ ಶಾಖೆಯು ಕಾರವಾರದಲ್ಲಿ ಶುಕ್ರವಾರ ಶುಭಾರಂಭಗೊಂಡಿತು. ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಇದಾಗಿದ್ದು, ನಗರ ಡಾ.ಪಿಕಳೆ ರಸ್ತೆ ಕೊಂಕಣ ಮೆಡಿಕಲ್ ಸೆಂಟರ್‌ನಲ್ಲಿ ಪ್ರಾರಂಭವಾಗಿದೆ. ದೇಶದ ಎಲ್ಲ ಅತ್ಯಾಧುನಿಕ ಕಣ್ಣಿನ ಚಿಕಿತ್ಸಾ ಯಂತ್ರೋಪಕರಣಗಳು ಹಾಗೂ ತಂತ್ರಜ್ಞಾನಗಳು ಇಲ್ಲಿದ್ದು, ಕಣ್ಣಿನ ತಜ್ಞರಾದ ಡಾ.ನಿರಂಜನ್ ಹಾಗೂ ಡಾ.ಮೇಘಾ ಶೇಟ್ ಕಾರ್ಯ ನಿರ್ವಹಿಸುವರು.

ಉಡುಪಿ ಮೂಲದ ಪ್ರಸಾದ ನೇತ್ರಾಲಯ ರಾಜ್ಯದ 8 ಜಿಲ್ಲೆಗಳಲ್ಲಿ ಕಾರ್ಯ ವ್ಯಾಪ್ತಿಯನ್ನು ಹೊಂದಿದ ಆಸ್ಪತ್ರೆಗಳ ಸಮೂಹವಾಗಿದೆ. ಗ್ಲೊಕೋಮಾ, ಮೆಳ್ಳೆಗಣ್ಣು, ರೆಟಿನಾ ವಿಭಾಗ, ಕಣ್ಣಿನ ನರ ವಿಭಾಗ ಸೇರಿ ಎಲ್ಲ ಸೇವೆಗಳೂ ಇಲ್ಲಿ ಲಭ್ಯ ಎಂದು ಪ್ರಸಾದ ನೇತ್ರಾಲಯದ ತಜ್ಞರು ತಿಳಿಸಿದ್ದಾರೆ.

ಉಡುಪಿ ಸೋದೆ ವಾದಿರಾಜ ಮಠದ ಶ್ರೀ ವಿಶ್ವ ವಲ್ಲಭ ತೀರ್ಥ ಶ್ರೀಪಾದಂಗಳ ಸಾನ್ನಿಧ್ಯದಲ್ಲಿ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ನಡೆಯಿತು. ಕೇಂದ್ರ ಸಚಿವ ಶ್ರೀಪಾದ ನಾಯಕ ಅವರು ಆಸ್ಪತ್ರೆ ಉದ್ಘಾಟಿಸಿದರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಸತೀಶ ಸೈಲ್, ಕರಾವಳಿ ಅಭಿವೃದ್ಧಿ ಪ್ರಾಽಕಾರದ ಅಧ್ಯಕ್ಷ ಎಂ.ಎ.ಗಫೂರ್, ಫಾದರ್ ಥಾಮಸ್ ಫರ್ನಾಂಡಿಸ್, ಹಿರಿಯ ವಕೀಲ, ಕೆನರಾ ವೆಲ್‌ಫೇರ್ ಟ್ರಸ್ಟ್ ಅಧ್ಯಕ್ಷ ಎಸ್.ಪಿ.ಕಾಮತ್ ಹಾಗೂ ಇತರರು ಇದ್ದರು.

ಆಸ್ಪತ್ರೆಯ ಸಮೂಹದ ಸಂಸ್ಥಾಪಕ ನಿರ್ದೇಶಕ ಡಾ.ಕೃಷ್ಣಪ್ರಸಾದ್ ಕುಡ್ಲು, ಪತ್ನಿ ರಷ್ಮಿ ಕೃಷ್ಣ ಪ್ರಸಾದ್, ಹಾಗೂ ವೈದ್ಯರು ಇದ್ದರು.