

ಮುಂಡಗೋಡ: ಪಟ್ಟಣ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ವಿಪರೀತ ಕಿರಿಕಿರಿ ಉಂಟುಮಾಡುತ್ತಿದ್ದ ಹಂದಿಗಳು ಇದೀಗ ಜನರ ಮೇಲೆ ದಾಳಿ ನಡೆಸುತ್ತಿರುವುದರಿಂದ ಪಟ್ಟಣ ಪಂಚಾಯಿತಿ ವಿರುದ್ಧ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷವೂ ಹಂದಿಗಳ ಹಾವಳಿ ವಿಪರೀತವಾಗಿತ್ತು. ಪಪಂಗೆ ಮನವಿ ಸಲ್ಲಿಸಿದ ನಂತರ ಹಂದಿಗಳನ್ನು ಬೇರೆಡೆಗೆ ಸ್ಥಳಾಂತರಿಸಿದ್ದರು. ಇದೀಗ ಮತ್ತೆ ಓಣಿಯಲ್ಲಿ ಹಂದಿಗಳ ಹಿಂಡು ಹಿಂಡಾಗಿ ಸಂಚರಿಸುತ್ತಿವೆ. ಹಿತ್ತಲಿನಲ್ಲಿ ಬಂದು ಒದರುತ್ತ ಜನರ ನೆಮ್ಮದಿ ಹಾಳುಮಾಡುತ್ತಿದೆ. ಅಲ್ಲದೆ, ಹೋಟೆಲ್‌ಗಳ ಹಿಂದೆ ಮುಂದೆ ಓಡಾಡುತ್ತಿವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.
— ಇಲಂಗೋವನ್ ತೇವರ್ ಸ್ಥಳೀಯ ನಿವಾಸಿ
ಆರು ತಿಂಗಳ ಹಿಂದೆ ಹಂದಿಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಇದೀಗ ಮತ್ತೆ ಜನರಿಂದ ದೂರುಗಳು ಬಂದಿವೆ. ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು.
— ಸಂತೋಷಕುಮಾರ ಎಚ್., ಪಪಂ ಮುಖ್ಯಾಧಿಕಾರಿ