ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಪದ್ಮಾವತಿಗೆ ಸನ್ಮಾನ

ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ದಾಂಡೇಲಿಯ ಪದ್ಮಾವತಿ ಮಾದಿಗ ಅವರನ್ನು ದಾಂಡೇಲಿ ನಗರಾಡಳಿತದ ವತಿಯಿಂದ ಸನ್ಮಾನಿಸಲಾಯಿತು. ವಿವೇಕ ಬನ್ನೆ, ನಾಗರಾಜ ತೇರದಾಳ, ಪರಶುರಾಮ್ ಶಿಂಧೆ, ಅಶ್ಪಾಕ್ ಶೇಖ್ ಇದ್ದರು.
ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ದಾಂಡೇಲಿಯ ಪದ್ಮಾವತಿ ಮಾದಿಗ ಅವರನ್ನು ದಾಂಡೇಲಿ ನಗರಾಡಳಿತದ ವತಿಯಿಂದ ಸನ್ಮಾನಿಸಲಾಯಿತು. ವಿವೇಕ ಬನ್ನೆ, ನಾಗರಾಜ ತೇರದಾಳ, ಪರಶುರಾಮ್ ಶಿಂಧೆ, ಅಶ್ಪಾಕ್ ಶೇಖ್ ಇದ್ದರು.
Published on
ದಾಂಡೇಲಿ: ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ದಾಂಡೇಲಿಯ ಪದ್ಮಾವತಿ ಮಾದಿಗ ಅವರನ್ನು ದಾಂಡೇಲಿ ನಗರಾಡಳಿತದ ವತಿಯಿಂದ ಸನ್ಮಾನಿಸಲಾಯಿತು.
ಪೌರಾಯುಕ್ತ ವಿವೇಕ ಬನ್ನೆ ಮಾತನಾಡಿ, ನಿಜಕ್ಕೂ ಇದೊಂದು ದಾಂಡೇಲಿಗೆ ಅಭಿಮಾನದ ಸಂಗತಿಯಾಗಿದೆ. ಪದ್ಮಾವತಿ ಅವರು ಅತ್ಯಂತ ಕಷ್ಟದ ಬದುಕಿನ ಜೊತೆಗೆ ಅಸಾಮಾನ್ಯವಾದ ಸಾಧನೆ ಮಾಡಿದ್ದಾರೆ. ಇವರ ಸಾಧನೆ ಇಂದಿನ ವಿದ್ಯಾರ್ಥಿ, ಯುವ ಜನರಿಗೆ ಪ್ರೇರಣೆಯಾಗಿದೆ ಎಂದರು.
ನಗರಸಭೆ ನಿಕಟಪೂರ್ವ ಅಧ್ಯಕ್ಷ ಅಶ್ಪಾಕ್ ಶೇಖ್, ರಾಜ್ಯ ಮಾನವ ಹಕ್ಕುಗಳ ಸಂಘಟನೆಯ ನಿರ್ದೇಶಕ ಪಿರೋಜಾ ಪೀರ್ಜಾದೆ, ನಗರಸಭೆ ಅಧಿಕಾರಿ ನಾಗರಾಜ ತೇರದಾಳ ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪದ್ಮಾವತಿ ಮಾದಿಗ, ನಾನು ದಾಂಡೇಲಿಯ ಮಣ್ಣಿನ ಮಗಳು. ನನ್ನ ಓದು ಮತ್ತು ಸಾಧನೆಯ ಹಿಂದೆ ಈ ನೆಲದ ಅನೇಕ ಮಹನೀಯರ ಸಹಕಾರವಿದೆ. ನನ್ನ ಸಾಧನೆಗೆ ಸಹಕರಿಸಿದ ಹಳಿಯಾಳ ಹಾಗೂ ದಾಂಡೇಲಿ ವಕೀಲರ ಸಂಘ ಹಾಗೂ ನನ್ನ ಓದಿಗೆ ಎಲ್ಲ ರೀತಿಯ ಬೆಂಬಲಿ ನೀಡಿದ ವಕೀಲರ ಪರಿಷತ್ ಹಾಗೂ ನನ್ನ ಕುಟುಂಬವನ್ನ ಮರೆಯಲು ಸಾಧ್ಯವಿಲ್ಲ ಎಂದರು.
ನಗರಸಭೆಯ ವ್ಯವಸ್ಥಾಪಕ ಪರಶುರಾಮ್ ಶಿಂಧೆ, ನಾಗರಾಜ ತೇರದಾಳ, ಬಾಳು ಗವಸ್, ಶಿವಪ್ಪ ಉಪ್ಪಾರ, ನಗರಸಭೆ ಸದಸ್ಯರು, ವಿವಿಧ ಸಂಘಟನೆಗಳ ಪ್ರಮುಖರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net