ಸೈನಿಕನಿಗೂ ಬಲ ತುಂಬಲಿದೆ ನಮ್ಮ ಸಂಸ್ಕೃತಿ soldier

ಶಿರಸಿಯ ಯಕ್ಷಕಲಾಸಂಗಮದ ವಾರ್ಷಿಕೋತ್ಸವದಲ್ಲಿ ಸಾಧಕಿ ತುಂಗಭದ್ರಾ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಮೇ. ಗಣಪತಿ ಹೆಗಡೆ, ಶ್ರೀಪಾದ ಭಟ್, ವೇದಾ ಹೆಗಡೆ ನೀರ್ನಳ್ಳಿ, ಸುಮಾ ಗಡಿಗೆಹೊಳೆ ಇತರರಿದ್ದರು.
ಶಿರಸಿಯ ಯಕ್ಷಕಲಾಸಂಗಮದ ವಾರ್ಷಿಕೋತ್ಸವದಲ್ಲಿ ಸಾಧಕಿ ತುಂಗಭದ್ರಾ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಮೇ. ಗಣಪತಿ ಹೆಗಡೆ, ಶ್ರೀಪಾದ ಭಟ್, ವೇದಾ ಹೆಗಡೆ ನೀರ್ನಳ್ಳಿ, ಸುಮಾ ಗಡಿಗೆಹೊಳೆ ಇತರರಿದ್ದರು.
Published on
ಶಿರಸಿ: ಮಕ್ಕಳು ಮತ್ತು ಮಹಿಳೆಯರಿಗೆ ಯಕ್ಷಗಾನ ಕಲಿಸಿ, ಈ ಕಲೆಯ ರಕ್ಷಣೆಗೆ ಶ್ರಮಿಸುತ್ತಿರುವ ಇಲ್ಲಿಯ ಯಕ್ಷ ಕಲಾ ಸಂಗಮದ ವಾರ್ಷಿಕೋತ್ಸವ ನಗರದ ರಂಗಧಾಮದಲ್ಲಿ ಬುಧವಾರ ನಡೆಯಿತು.
ಸಾಧಕರಿಗೆ ಸನ್ಮಾನ, ಯಕ್ಷಗಾನ ಪ್ರದರ್ಶನದ ಮೂಲಕ ಕಾರ್ಯಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಯೋಧ ( soldier) ಮೇ. ಗಣಪತಿ ಹೆಗಡೆ, ಭಾರತ ಸಾವಿರ ಸಾವಿರ ವರ್ಷಗಳ ಸಂಸ್ಕೃತಿ ಹೊಂದಿರುವ ದೇಶ. ಇಡೀ ದೇಶಾದ್ಯಂತ ಎಲ್ಲ ಕಡೆ ಪೌರಾಣಿಕ ಕಥೆಗಳ ಮನನ ಸಮಾನವಾಗಿದೆ.
ಅನಾದಿ ಕಾಲದಿಂದಲೂ ನಮ್ಮ ಪೌರಾಣಿಕ ಸಂಗತಿಗಳನ್ನು ಯುವ ಪೀಳಿಗೆಗೆ ದಾಟಿಸುವಲ್ಲಿ ಕಲೆ ಪ್ರಮುಖ ಪಾತ್ರ ವಹಿಸಿದೆ. ಯಕ್ಷಗಾನ ಕಲೆ ಮೂಲಕ ನಾವು ನೋಡಿದ, ಕೇಳಿದ ಪೌರಾಣಿಕ ಸಂಗತಿಗಳು ನಮ್ಮ ಜೀವನದುದ್ದಕ್ಕೂ ನೆನಪಿರುತ್ತವೆ.
ಸೈನಿಕರು ಕೇವಲ ನಮ್ಮ ಗಡಿಗಳನ್ನು ಮಾತ್ರ ಕಾಯುತ್ತಿಲ್ಲ. ನಮ್ಮ ದೇಶದ ಸಂಸ್ಕೃತಿ, ವೈವಿಧ್ಯತೆಯನ್ನೂ ರಕ್ಷಿಸುತ್ತಿದ್ದಾರೆ. ನಮ್ಮ ನಾಡಿನ ಸಂಸ್ಕೃತಿಗಳು ಸೈನಿಕನಿಗೂ ಬಲ ತುಂಬಿವೆ ಎಂದರು.
ಇದೇ ವೇಳೆ ನಿವೃತ್ತ ಶಿಕ್ಷಕಿ ಮತ್ತು ಯಕ್ಷಗಾನ ಕಲಾ ಪೋಷಕಿ ತುಂಗಭದ್ರಾ ಹೆಗಡೆ ಕುಂದಾಪುರ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀರಿಸಿ ಮಾತನಾಡಿದ ತುಂಗಭದ್ರಾ ಹೆಗಡೆ, ಯಕ್ಷಗಾನದಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ.
ಮಾತುಗಾರಿಕೆಯ ಮೂಲದ ಮಾನಸಿಕ ಪ್ರಗತಿ, ನೃತ್ಯ ಹಾವ ಭಾವದಿಂದ ದೈಹಿಕ ಪ್ರಗತಿ ಸಾಧ್ಯವಾಗುತ್ತದೆ ಎಂದರು.
ನಿವೃತ್ತ ಯೋಧ ಶ್ರೀಪಾದ ಭಟ್ ಇದ್ದರು. ಪ್ರಗತಿಪರ ಕೃಷಿಕ ವೇದಾ ಹೆಗಡೆ ನೀರ್ನಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಯಕ್ಷ ಕಲಾ ಸಂಗಮದ ಅಧ್ಯಕ್ಷೆ ಸುಮಾ ಗಡಿಗೆಹೊಳೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಪ್ರೇಮಾ ಭಟ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net