Stone-quarry ಕೈಗಾ ಪರಿಸರದಲ್ಲಿ ಕಲ್ಲು ಕ್ವಾರಿಗೆ ಅನುಮತಿ ಬೇಡ

ಕೈಗಾ ಪರಿಸರದ ಸರಹದ್ದಿನಲ್ಲಿ ಕಲ್ಲು ಕ್ವಾರಿಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ನಾಗರಿಕ ವೇದಿಕೆಯಿಂದ ಯಲ್ಲಾಪುರದಲ್ಲಿ ಗ್ರೇಡ್- 2 ತಹಸೀಲ್ದಾರ್ ಸಿ.ಜಿ. ನಾಯ್ಕ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ರಾಮು ನಾಯ್ಕ, ಡಿ.ಜಿ. ಹೆಗಡೆ, ಬೀರಣ್ಣ  ನಾಯಕ ಮೊಗಟಾ, ವೇಣುಗೋಪಾಲ ಮದ್ಗುಣಿ, ಜಗನ್ನಾಥ ರೇವಣಕರ, ಗಣಪತಿ ಬೋಳಗುಡ್ಡೆ, ಗಜಾನನ ನಾಯ್ಕ, ಇತರರಿದ್ದರು.
ಕೈಗಾ ಪರಿಸರದ ಸರಹದ್ದಿನಲ್ಲಿ ಕಲ್ಲು ಕ್ವಾರಿಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ನಾಗರಿಕ ವೇದಿಕೆಯಿಂದ ಯಲ್ಲಾಪುರದಲ್ಲಿ ಗ್ರೇಡ್- 2 ತಹಸೀಲ್ದಾರ್ ಸಿ.ಜಿ. ನಾಯ್ಕ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ರಾಮು ನಾಯ್ಕ, ಡಿ.ಜಿ. ಹೆಗಡೆ, ಬೀರಣ್ಣ ನಾಯಕ ಮೊಗಟಾ, ವೇಣುಗೋಪಾಲ ಮದ್ಗುಣಿ, ಜಗನ್ನಾಥ ರೇವಣಕರ, ಗಣಪತಿ ಬೋಳಗುಡ್ಡೆ, ಗಜಾನನ ನಾಯ್ಕ, ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಾಗರಿಕ ವೇದಿಕೆಯಿಂದ ಜಿಲ್ಲಾಧಿಕಾರಿಗೆ ಮನವಿ

ಯಲ್ಲಾಪುರ: ಕೈಗಾ ಪರಿಸರದ ಸರಹದ್ದಿನಲ್ಲಿ ಕಲ್ಲು ಕ್ವಾರಿಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ನಾಗರಿಕ ವೇದಿಕೆ ವತಿಯಿಂದ ಸೋಮವಾರ ಗ್ರೇಡ್-2 ತಹಸೀಲ್ದಾರ್ ಸಿ.ಜಿ. ನಾಯ್ಕ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಕೈಗಾ 5 ಮತ್ತು 6ನೇ ಘಟಕ ನಿರ್ಮಾಣಕ್ಕೆ ಬೇಕಾದ ಬೃಹತ್ ಪ್ರಮಾಣದ ಕಲ್ಲುಗಳನ್ನು ಸಂಗ್ರಹಿಸಲು, ಅದೇ ಯೋಜನಾ ವ್ಯಾಪ್ತಿಯ 500 ಎಕರೆ ಭೂಮಿಯಲ್ಲಿ ಕಲ್ಲುಕ್ವಾರಿ ನಡೆಸಲು ಖಾಸಗಿ ಗುತ್ತಿಗೆ ಸಂಸ್ಥೆಗೆ ಅನುಮತಿ ನೀಡುವ ಹಂತದಲ್ಲಿದೆ.
ಪಶ್ಚಿಮ ಘಟ್ಟದ ತಪ್ಪಲಿನಲ್ಲಿ, ಕೈಗಾದಿಂದ ಕೇವಲ 25 ಕಿಮೀ ಅಂತರದಲ್ಲಿರುವ ತಳಕೇಬೈಲ್ ಗಣಿಗಾರಿಕೆಯನ್ನು ಪರಿಸರ ನಾಶದ ಕಾರಣದಿಂದ ಮುಚ್ಚಲಾಗಿದೆ. 55 ಕಿಮೀ. ಅಂತರದಲ್ಲಿರುವ ಬಿಸಗೋಡ ಗಣಿಗಾರಿಕೆಯನ್ನೂ ಇದೇ ಕಾರಣಕ್ಕೆ ಮುಚ್ಚಲಾಗಿದೆ. ಕಳೆದ ನಾಲ್ಕು ವರ್ಷದ ಹಿಂದೆ 40 ಕಿಮೀ ದೂರದಲ್ಲಿರುವ ಕಳಚೆ ಗ್ರಾಮದಲ್ಲಿ ಭೂಕುಸಿತವಾಗಿದೆ. ಮಳೆ ಹೆಚ್ಚಾದರೆ, ಬಂಡೆಗಲ್ಲುಗಳು ರಸ್ತೆಗೆ ಜಾರುತ್ತವೆ. ಇಷ್ಟೆಲ್ಲ ಗೊತ್ತಿದ್ದರೂ, ಹೊಸದಾಗಿ ಕೈಗಾ ಅಣು ಸ್ಥಾವರದ 5 ಹಾಗೂ 6ನೇ ಘಟಕ ಆರಂಭಿಸಲು ಸರ್ಕಾರ ಯೋಜಿಸಿದೆ.
ಕೇಂದ್ರ ಸರ್ಕಾರವಿರಲಿ, ರಾಜ್ಯ ಸರ್ಕಾರವೇ ಆಗಿರಲಿ, ಜಿಲ್ಲೆಯ ಜನರ ಬದುಕಿನ ಜತೆ ಚೆಲ್ಲಾಟ ಆಡುವುದು ಸರಿಯಲ್ಲ. ಕೈಗಾದಲ್ಲಿ ಏನಾದರೂ ಅನಾಹುತ ಸಂಭವಿಸಿದರೆ, ಇಡೀ ಜಿಲ್ಲೆಯೇ ಭಸ್ಮವಾಗಲಿದೆ. ಈಗ 5 ಹಾಗೂ 6ನೇ ಹಂತದ ಯೋಜನೆಗೆ ಬೇಕಾದ ಕ್ರಷರ್ ಕಲ್ಲುಗಳನ್ನು ಪಶ್ಚಿಮ ಘಟ್ಟದ ಹೊರಗಿನಿಂದ ತರಬೇಕು. ಇಲ್ಲಿ ಕಲ್ಲು ಕ್ವಾರಿಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.
ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ, ಪ್ರಮುಖರಾದ ಡಿ.ಜಿ. ಹೆಗಡೆ, ಬೀರಣ್ಣ ನಾಯಕ ಮೊಗಟಾ, ವೇಣುಗೋಪಾಲ ಮದ್ಗುಣಿ, ಜಗನ್ನಾಥ ರೇವಣಕರ, ಗಣಪತಿ ಬೋಳಗುಡ್ಡೆ, ಗಜಾನನ ನಾಯ್ಕ, ದಾಸಿಂತ ನಾರ್ಂಡೀಸ್, ರಜನಿ ಚಂದ್ರಶೇಖರ, ಸುಜಯ ಮರಾಠಿ, ಮಹಾದೇವಚಂದ್ರ ಪಂಢರಾಪುರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net