ಅಕ್ರಮ ಮರಳು ಸಾಗಿಸುವ ಲಾರಿಗಳ ನೋಂದಣಿ ರದ್ದು

ಡಿಸಿ ಹರ್ಷಲ್
ಡಿಸಿ ಹರ್ಷಲ್
Published on: 

ಕಾರವಾರ: ಮರಳು ಲಾರಿಗಳ ನೋಂದಣಿ ರದ್ದತಿಗೆ ಕ್ರಮ
ನಿರಂತರವಾಗಿ ಅಕ್ರಮ ಮರಳುಗಾರಿಕೆಯಲ್ಲಿ ಭಾಗಿಯಾಗುವ ವಾಹನಗಳ ನೋಂದಣಿ ರದ್ದತಿಗೆ ಕ್ರಮ ವಹಿಸಲಾಗುವುದು ಎಂದು ನೂತನ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಿರಂತರ ಅಪರಾಧ ಚಟುವಟಿಕೆಯಲ್ಲಿ ತೊಡಗುವ ವಾಹನಗಳ ಮೇಲೆ ಕ್ರಮ ವಹಿಸಲು ಜಿಲ್ಲಾಧಿಕಾರಿ ಅವರಿಗೆ ಅಧಿಕಾರವಿದೆ. ಈ ಸಂಬಂಧ ಈಗಾಗಲೇ ಮಾಹಿತಿ ಪಡೆದಿದ್ದು, ಆರ್‌ಟಿಒ ಹಾಗೂ ಗಣಿ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಮಾತನಾಡಿದ್ದೇನೆ ಎಂದರು.
ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆ ಜಾರಿ ಸಮಸ್ಯೆ, ಕಂದಾಯ ಭೂಮಿಯ ಕೊರತೆ, ಪರಿಸರ ರಕ್ಷಣೆಯ ವಿಚಾರ, ಬಂದರು ಮುಂತಾದ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಅವುಗಳಿಗೆ ವಿರೋಧ ಹೀಗೆ ಹಲವು ವಿಷಯಗಳ ಬಗ್ಗೆ ಮಾಹಿತಿ ಪಡೆಯತ್ತಿದ್ದೇನೆ. ಜಿಲ್ಲೆಯ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.