ಪ್ರತಿಭಾ ಅನಾವರಣಕ್ಕೆ ಸೂಕ್ತ ವೇದಿಕೆ ಸಿಗಲಿ Vishwadarshana
ಯಲ್ಲಾಪುರದ ವಿಶ್ವದರ್ಶನ (Vishwadarshana )ಶಿಕ್ಷಣ ಸಂಸ್ಥೆಯ ಶ್ರೀ ಗಂಗಾಧರೇಂದ್ರ ಸರಸ್ವತಿ ಸಭಾಭವನದಲ್ಲಿ ವಿದ್ಯಾರ್ಥಿಗಳ ಓದಿಗೆ ಉಪಯುಕ್ತ ಆಗುವ ‘ಕ್ವಾಂಟಮ್ ಕ್ವೆಸ್ಟ್’ ಪುಸ್ತಕ ಲೋಕಾರ್ಪಣೆಗೊಳಿಸಲಾಯಿತು. ವಿಘ್ನೇಶ್ವರ ಗಾಂವ್ಕರ, ಆರೋಗ್ಯ ಸ್ವಾಮಿ, ಡಾ.ಡಿ.ಕೆ. ಗಾಂವ್ಕರ, ಡಾ.ಸಂತೋಷ ಕುಮಾರ ಇದ್ದರು.
Published on:
Copied
Follow Us
ಯಲ್ಲಾಪುರ: ನಮ್ಮಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಸಾಕಷ್ಟು ಜನ ಇದ್ದಾರೆ. ಅವರಿಗೆ ಪ್ರತಿಭಾ ಅನಾವರಣಕ್ಕೆ ಸೂಕ್ತ ವೇದಿಕೆಯ ಅಗತ್ಯವಿದೆ ಎಂದು ವಿಶ್ವದರ್ಶನ (Vishwadarshana) ಶಿಕ್ಷಣ ಸಮೂಹದ ನಿರ್ದೇಶಕ ವಿಘ್ನೇಶ್ವರ ಗಾಂವ್ಕರ ಹೇಳಿದರು.
ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಶ್ರೀ ಗಂಗಾಧರೇಂದ್ರ ಸರಸ್ವತಿ ಸಭಾಭವನದಲ್ಲಿ ಪಪೂ ಕಾಲೇಜ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸಿಇಟಿ, ನೀಟ್ ಪರೀಕ್ಷಾ ತರಬೇತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಿಇಟಿ ಮತ್ತು ನೀಟ್ ಕಾರ್ಯಕ್ರಮದ ಸಂಯೋಜಕ ಆರೋಗ್ಯ ಸ್ವಾಮಿ ಮಾತನಾಡಿ, ‘ಓದು ಒಕ್ಕಾಲು ಬುದ್ಧಿ ಮುಕ್ಕಾಲು’ ಎಂಬ ಮಾತಿದೆ. ಓದಿನ ಜೊತೆ ಬುದ್ಧಿ ಕೂಡಾ ಮುಖ್ಯ.
ಈ ಸಂಸ್ಥೆಯು ವಿದ್ಯಾರ್ಥಿಗಳ ಹಾಗೂ ಶಿಕ್ಷಣದ ಕುರಿತು ವಿಶೇಷ ಕಳಕಳಿ ಹೊಂದಿದೆ. ಇಂತಹ ತರಬೇತಿಗಾಗಿ ವಿದ್ಯಾರ್ಥಿಗಳು ಬೇರೆ ಬೇರೆ ರಾಜ್ಯಗಳಿಗೆ ತೆರಳುತ್ತಿದ್ದಾರೆ. ಆದರೆ, ಇಲ್ಲಿನ ವಿದ್ಯಾರ್ಥಿಗಳು ಸ್ಥಳೀಯವಾಗಿ ದೊರೆಯುವ ತರಬೇತಿಯ ಉಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳ ಓದಿಗೆ ಉಪಯುಕ್ತವಾಗುವ ‘ಕ್ವಾಂಟಮ್ ಕ್ವೆಸ್ಟ್’ ಪುಸ್ತಕ ಲೋಕಾರ್ಪಣೆಗೊಳಿಸಲಾಯಿತು. ಉಪನ್ಯಾಸಕ ಡಾ.ಸಂತೋಷಕುಮಾರ ಎಂ., ವಿಶ್ವದರ್ಶನ ಪಪೂ ಕಾಲೇಜ್ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪಪೂ ಕಾಲೇಜ್ ಪ್ರಾಂಶುಪಾಲ ಡಾ. ಡಿ.ಕೆ. ಗಾಂವ್ಕರ, ಉಪನ್ಯಾಸಕ ವಿನಾಯಕ ಭಟ್ಟ ಹಾಗೂ ಜೀವಶಾಸ್ತ್ರ ಉಪನ್ಯಾಸಕಿ ಕಾವ್ಯಾ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.