religious ಧರ್ಮಾಚರಣೆ ನಿರಂತರವಾಗಿರಲಿ

ಯಲ್ಲಾಪುರ ತಾಲೂಕಿನ ಚಂದಗುಳಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಆಯೋಜಿಸಿದ್ದ ವರ್ಧಂತಿ ಉತ್ಸವದಲ್ಲಿ ಸ್ವರ್ಣವಲ್ಲೀ ಶ್ರೀಗಳ ಪಾದಪೂಜೆ ನೆರವೇರಿಸಲಾಯಿತು.
ಯಲ್ಲಾಪುರ ತಾಲೂಕಿನ ಚಂದಗುಳಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಆಯೋಜಿಸಿದ್ದ ವರ್ಧಂತಿ ಉತ್ಸವದಲ್ಲಿ ಸ್ವರ್ಣವಲ್ಲೀ ಶ್ರೀಗಳ ಪಾದಪೂಜೆ ನೆರವೇರಿಸಲಾಯಿತು.
Published on
ಯಲ್ಲಾಪುರ: ಅಧರ್ಮಗಳು ಹೆಚ್ಚಾದಾಗ ರೋಗ ರುಜಿನಗಳು, ಪ್ರಕೃತಿ ವಿಕೋಪಗಳು, ಕಷ್ಟಗಳು ಹೆಚ್ಚಾಗುತ್ತವೆ. ಅದನ್ನು ತಡೆಯಬೇಕಾದರೆ ಧರ್ಮಾಚರಣೆ religious ನಿರಂತರವಾಗಿ ನಡೆಯಬೇಕು ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ತಾಲೂಕಿನ ಚಂದಗುಳಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ವರ್ಧಂತಿ ಉತ್ಸವದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನಿರಂತರ ದೇವತಾರಾಧನೆ ಹಾಗೂ ಧರ್ಮಾಚರಣೆಯಿಂದ ಮಾತ್ರ ನಾಡಿನಲ್ಲಿ ಸುಭಿಕ್ಷೆ ನೆಲೆಸಲು ಸಾಧ್ಯ. ಈ ಕುರಿತಾಗಿ ಜಾಗೃತಿ ಹೊಂದಬೇಕಾದದ್ದು ನಮ್ಮ ಕರ್ತವ್ಯ ಎಂದರು.
ದೇವಸ್ಥಾನಗಳಲ್ಲಿ ಮಡಿ, ಶುದ್ಧತೆಯ ಮಹತ್ವದ ಕುರಿತು ವಿವರಿಸಿದ ಶ್ರೀಗಳು, ದೇವಸ್ಥಾನಗಳಲ್ಲಿ ನಡೆಯುವ ನಿತ್ಯಪೂಜೆ, ಹಬ್ಬ-ಹರಿದಿನಗಳಲ್ಲಿ ನಡೆಯುವ ವಿಶೇಷ ಪೂಜೆ, ಆಚರಣೆಗಳು ಶಾಸ್ತ್ರೋಕ್ತವಾಗಿ ನಡೆಯಬೇಕು. ಆಗ ಮಾತ್ರ ದೇವತಾ ಸಾನ್ನಿಧ್ಯ ಬಲಗೊಳ್ಳುವ ಜತೆಗೆ, ಭಕ್ತರಿಗೆ ದೇವರ ಅನುಗ್ರಹವೂ ದೊರಕುತ್ತದೆ ಎಂದರು.
ಶ್ರೀಗಳು ಚಂದಗುಳಿಯ ಘಂಟೆ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಆಡಳಿತ ಮಂಡಳಿಯಿಂದ ಶ್ರೀಗಳ ಪಾದಪೂಜೆ ನೆರವೇರಿಸಲಾಯಿತು.
ದೇವಸ್ಥಾನದ ಮೊಕ್ತೇಸರ ಲಕ್ಷ್ಮೀನಾರಾಯಣ ಭಟ್ಟ ತಾರೀಮಕ್ಕಿ, ವೇ.ನಾಗರಾಜ ಭಟ್ಟ ಕೋಣೆಮನೆ, ಆಡಳಿತ ಮಂಡಳಿಯ ಸದಸ್ಯರು, ಅರ್ಚಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net