ಫಲವತ್ತತೆ ಕಾಪಾಡಲು ಕೊಟ್ಟಿಗೆ ಗೊಬ್ಬರ ಅವಶ್ಯ fertility

ಶಿರಸಿ ತಾಲೂಕು ಕನಕಾಪುರ ಹಾಲು ಸಂಘದ ನೂತನ ಕಟ್ಟಡಕ್ಕೆ ಸುರೇಶ್ಚಂದ್ರ ಹೆಗಡೆ ಗುದ್ದಲಿಪೂಜೆ ನೆರವೇರಿಸಿದರು. ನಾಗೇಂದ್ರ ನಾಯ್ಕ. ಈಶ್ವರ ನಾಯ್ಕ, ಮೌನೇಶ ಸೋನಾರ ಇತರರಿದ್ದರು.
ಶಿರಸಿ ತಾಲೂಕು ಕನಕಾಪುರ ಹಾಲು ಸಂಘದ ನೂತನ ಕಟ್ಟಡಕ್ಕೆ ಸುರೇಶ್ಚಂದ್ರ ಹೆಗಡೆ ಗುದ್ದಲಿಪೂಜೆ ನೆರವೇರಿಸಿದರು. ನಾಗೇಂದ್ರ ನಾಯ್ಕ. ಈಶ್ವರ ನಾಯ್ಕ, ಮೌನೇಶ ಸೋನಾರ ಇತರರಿದ್ದರು.
Published on
ಶಿರಸಿ: ನಮ್ಮ ಕೃಷಿ ಭೂಮಿಯ ಫಲವತ್ತತೆ (fertility) ಕಾಪಾಡಲು ಕೊಟ್ಟಿಗೆ ಗೊಬ್ಬರದಿಂದ ಮಾತ್ರ ಸಾಧ್ಯ ಎಂದು ಧಾರವಾಡ ಹಾಲು ಒಕ್ಕೂಟದ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಹೇಳಿದರು.
ತಾಲೂಕಿನ ಕನಕಾಪುರದಲ್ಲಿ ಹಾಲು ಸಂಘದ ನೂತನ ಕಟ್ಟಡ್ಕಕೆ ಗುದ್ದಲಿ ಪೂಜೆ ನೆರವೇರಿಸಿ, ಒಕ್ಕೂಟದಿಂದ ನೀಡಲಾಗುವ ಸಹಾಯದ ಚೆಕ್ ಇತ್ತೀಚೆಗೆ ವಿತರಿಸಿ ಅವರು ಮಾತನಾಡಿದರು.
ಪ್ರತಿ ಕುಟುಂಬವೂ ಹಾಲು-ಮೊಸರಿನ ಬಳಕೆ ಮಾಡುತ್ತಿವೆ. ಹೀಗಾಗಿ, ಹೈನುಗಾರಿಕೆ ಇಂದಿನ ಅಗತ್ಯಗಳಲ್ಲಿ ಒಂದು. ನಮ್ಮ ಕೃಷಿ ಜಮೀನುಗಳ ಫಲವತ್ತತೆಗೆ ಬಳಸಲಾಗುವ ಆಕಳಿನ ಸಗಣಿಯಿಂದ ಮಾಡಲ್ಪಟ್ಟ ಗೊಬ್ಬರ ಅತ್ಯುತ್ತಮ.
ಜಿಲ್ಲೆಯಲ್ಲಿ ಲಾಭದ ಉದ್ದೇಶಕ್ಕಾಗಿ ಹೈನುಗಾರಿಕೆ ನಡೆಸುವವರ ಸಂಖ್ಯೆ ಕಡಿಮೆ ಇದ್ದು, ಕೃಷಿ ಕಾರ್ಯಕ್ಕಾಗಿ ಹೈನುಗಾರಿಕೆ ನಡೆಸುವ ಪದ್ಧತಿ ಇದೆ.
ಆದರೆ, ಹಾಲು ಉತ್ಪಾದಕನಿಗೆ ಯೋಗ್ಯ ದರ ನೀಡಿ, ಹೈನುಗಾರಿಕೆ ಉತ್ತೇಜಿಸುವ ಉದ್ದೇಶದಿಂದ ಒಕ್ಕೂಟ ಹೆಚ್ಚಿನ ಸೌಲಭ್ಯ ಒದಗಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಊರಿನಲ್ಲಿರುವವರು ಬಹುತೇಕ ವಯಸ್ಕರೇ ಆಗಿದ್ದು ಅವರಿಗೆ ಹೈನುಗಾರಿಕೆನ್ನು ಮಾಡಲು ಆಸಕ್ತಿ ಇದ್ದರೂ ಸಹ ಅದನ್ನು ಹೇಗೆ ನಿಭಾಯಿಸಿಕೊಂಡು ಹೋಗಬೇಕೆಂಬ ಚಿಂತೆಯಲ್ಲಿದ್ದಾರೆ.
ನಮ್ಮ ಕೃಷಿ ಭೂಮಿಗಳಿಗೆ ಸಗಣಿ ಗೊಬ್ಬರವೇ ಅತ್ಯಂತ ಯೋಗ್ಯವಾಗಿದ್ದು, ಆದರೆ ನಮ್ಮ ಭಾಗಗಳಲ್ಲಿ ಬಯಲುಸೀಮೆ ಕಡೆಗಳಿಂದ ಗೊಬ್ಬರ ತರಿಸಿಕೊಳ್ಳುತ್ತಿದ್ದಾರೆ.
ಈ ಗೊಬ್ಬರದಲ್ಲಿ ಅರ್ಧದಷ್ಟು ಮಣ್ಣು ಸಿಗುವ ಸಾಧ್ಯತೆಗಳೇ ಹೆಚ್ಚಾಗಿದೆಯಲ್ಲದೇ, ಜಂತುಹುಳುಗಳು ಇಂತಹ ಮಣ್ಣು ಮಿಶ್ರಿತ ಗೊಬ್ಬರದಲ್ಲಿ ಕಂಡುಬರುತ್ತಿದ್ದು ಇಲ್ಲದ ರೋಗಗಳೂ ಸಹ ನಮ್ಮ ಕೃಷಿ ಭೂಮಿಗೆ ತಗಲುವಂತಾಗಿದೆ.
ನಮ್ಮ ಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅಡಿಕೆ ತೋಟಗಳಲ್ಲಿ ಅಪಾರವಾದ ಎಲೆ ಚುಕ್ಕೆ ರೋಗ ಕಂಡುಬರುತ್ತಿದ್ದು, ತೋಟಗಳಲ್ಲಿ ಕೊಟ್ಟಗೆ ಗೊಬ್ಬರದ ಕೊರತೆಯಿಂದಲೇ ಎಲೆ ಚುಕ್ಕೆ ರೋಗವು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಕೊಟ್ಟಿಗೆ ಗೊಬ್ಬರಕ್ಕೆ ಬಹಳ ಬೇಡಿಕೆ ಬರಲಿದ್ದು, ಹೈನುಗಾರಿಕೆಗೂ ಸಹ ಉತ್ತಮ ಭವಿಷ್ಯವಿದೆ. ಹಾಲಿಗೆ ಉತ್ತಮ ದರ ಸಿಗುವ ದಿನಗಳು ಬಂದೇ ಬರುತ್ತವೆ.
ನಮ್ಮ ಮನೆಗಳಲ್ಲಿ ದೇಶೀ ತಳಿಗಳ ಸಾಕಾಣಿಕೆಯ ಜತೆಗೆ ವಿದೇಶಿ ಆಕಳನ್ನೂ ಸಹ ಸಾಕಿ ಅತೀ ಹೆಚ್ಚು ಹಾಲು ಉತ್ಪಾದನೆಯೊಂದಿಗೆ ಲಾಭದಾಯಕವಾಗಿ ಮುನ್ನಡೆಸಿಕೊಂಡು ಹೋಗಬೇಕು.
ಜಿಲ್ಲೆಯ ಸಹಕಾರ ವ್ಯವಸ್ಥೆಯ ಅಡಿಯಲ್ಲಿ ಹಾಲು ಉತ್ಪಾದನಾ ಕ್ಷೇತ್ರ ಬೆಳೆಯುತ್ತಿರುವುದರಿಂದ ತಾವೆಲ್ಲರೂ ಕೈ ಜೋಡಿಸಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಮಗ್ರ ಅಭಿವೃದ್ಧಿಗೆ ಕಾರಣೀಕರ್ತರಾಗಬೇಕು ಎಂದರು.
ಮಾಳಂಜಿ ಸಂಘದ ವಿನಯಕುಮಾರ ಕೃಷ್ಣ ನಾಯ್ಕ, ಕನಕಾಪುರ ಹಾಲು ಸಂಘದ ಅಧ್ಯಕ್ಷ ನಾಗೇಂದ್ರ ನಾಯ್ಕ, ಕಾರ್ಯದರ್ಶಿ ಈಶ್ವರ ನಾಯ್ಕ, ವಿಸ್ತರಣಾಧಿಕಾರಿ ಮೌನೇಶ ಸೋನಾರ, ವಿಸ್ತರಣಾಸಮಾಲೋಚಕರಾದ ಜಯಂತ ಪಟಗಾರ, ಕೆ.ಜಿ.ನಾಯ್ಕ, ಕನಕಾಪುರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net