temple ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದವನ ಸೆರೆ

ಬಂಧಿತನಿಂದ ಪೊಲೀಸರು ವಶಕ್ಕೆ ಪಡೆದ ದೇವಸ್ಥಾನ temple ಸಾಮಗ್ರಿಗಳು.
ಬಂಧಿತನಿಂದ ಪೊಲೀಸರು ವಶಕ್ಕೆ ಪಡೆದ ದೇವಸ್ಥಾನ temple ಸಾಮಗ್ರಿಗಳು.
Published on
ಯಲ್ಲಾಪುರ: ತಾಲೂಕಿನ ಇಡಗುಂದಿ ಶೇಡಿಕೆರೆ ಮಹಾಗಣಪತಿ ದೇವಸ್ಥಾನದಲ್ಲಿ temple ಗಂಟೆ, ಪಾತ್ರೆ ಇತ್ಯಾದಿ ಸಾಮಗ್ರಿಗಳನ್ನು ಕಳುವು ಮಾಡಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ.
ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ, ಪಾತ್ರೆ ವ್ಯಾಪಾರಿ ಕೃಷ್ಣಾನಂದ ಪರಶುರಾಮ ಇಂಗಳೆ ಬಂಧಿತ ವ್ಯಕ್ತಿ.
ಈತ ಕಳೆದ ಏಪ್ರಿಲ್ 18 ರಂದು ಇಡಗುಂದಿ ಸಮೀಪದ ಶೇಡಿಕೆರೆ ದೇವಸ್ಥಾನಕ್ಕೆ ಹೊಕ್ಕು ಹಲವು ವಸ್ತುಗಳನ್ನು ಕಳ್ಳತನ ಮಾಡಿದ್ದ.
ಸಮಿತಿಯವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ ಪೊಲೀಸರು ಕಳ್ಳನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಕಳ್ಳತನ ಮಾಡಿರುವುದನ್ನು ಆತ ಒಪ್ಪಿಕೊಂಡಿದ್ದಾನೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net