ದೇಶದ ಅತಿ ಕಿರಿಯ ಶಾಸಕಿ ಎಂದು ಪ್ರಖ್ಯಾತರಾದ ಬಿಹಾರದ ಮೈಥಿಲಿ ಠಾಕೂರ್ ಕಾಣಕೋಣದ ಗೋಕರ್ಣ ಪರ್ತಗಾಳಿ ಮಠಕ್ಕೆ ಆಗಮಿಸಿ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಆಶೀರ್ವಾದ ಪಡೆದರು.
ಪರ್ತಗಾಳಿ: ಇಲ್ಲಿನ ಶ್ರೀ ಗೋಕರ್ಣ ಪರ್ತಗಾಳಿ ಮಠದಲ್ಲಿ ನಡೆಯುತ್ತಿರುವ ಸಾರ್ಧಪಂಚ ಶತಮಾನೋತ್ಸವ ಕಾರ್ಯಕ್ರಮಕ್ಕೆ ಬಿಹಾರ ಮೂಲದ ಪ್ರಸಿದ್ಧ ಭಜನ ಗಾಯಕಿ ಹಾಗೂ ದೇಶದ ಅತಿ ಕಿರಿಯ ಶಾಸಕಿ ಎಂದೇ ಖ್ಯಾತರಾದ ಮೈಥಿಲಿ ಠಾಕೂರ್ ಆಗಮಿಸಿ ತಮ್ಮ ಭಜನೆಗಳಿಂದ ಕಂಗೊಳಿಸಿದರು.
ಸಾರ್ಧ ಪಂಚಶತಮಾನೋತ್ಸವದಲ್ಲಿ ತಮ್ಮ ಆತ್ಮಸ್ಪರ್ಶಿ ಭಜನೆಗಳಿಂದ ಸಂಭ್ರಮ ಇಮ್ಮಡಿಗೊಳಿಸಿದರು. ವಿವಿಧ ಭಾಷೆಗಳ ಭಜನೆಗಳನ್ನು ಮನಮೋಹಕವಾಗಿ ಹಾಡುವ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿರುವ ಮೈಥಿಲಿ, ಮಹೋತ್ಸವಕ್ಕೆ ವಿಶೇಷ ವೈಭವ ತಂದುಕೊಟ್ಟರು.