ಕಾರವಾರ: ಆದಾಯಕ್ಕಿಂತ ಮೀರಿದ ಹಣ ಗಳಿಕೆ ಆರೋಪದ ಮೇಲೆ ಸಿದ್ದಾಪುರ ತಾಲೂಕಿನ ಕೋಲಸಿರ್ಸಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಮುಖ ಕಾರ್ಯ ನಿರ್ವಾಹಕನ ಮನೆ, ಆಸ್ತಿಗಳ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದಾರೆ.
ಮಾರುತಿ ಯಶವಂತ ಮಾಲ್ವಿ ಅವರ ಹಳಿಯಾಳದ ಮನೆ, ಶಾಪಿಂಗ್ ಕಾಂಪ್ಲೆಕ್ಸ್, ಕೋಲಸಿರ್ಸಿ ಸೊಸೈಟಿ ಸೇರಿ ನಾಲ್ಕು ಕಡೆ ದಾಳಿ ನಡೆಸಲಾಗಿದೆ.
ಲೋಕಾಯುಕ್ತ ಡಿವೈಎಸ್ ಪಿ ಧನ್ಯಾ ನಾಯಕ ಅವರ ನೇತೃತ್ವದಲ್ಲಿ ಉಡುಪಿ, ಕಾರವಾರದ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.