ಯಲ್ಲಾಪುರ: ಪಾಮರರನ್ನೂ ಪರಮಾತ್ಮನ ಚಿಂತನೆಯಲ್ಲಿ ತೊಡಗಿಸುವ ಸ್ತೋತ್ರ ಸಾಹಿತ್ಯವನ್ನು ನೀಡಿದ ಶಂಕರಾಚಾರ್ಯರು Shankaracharya ನಿಜವಾದ ಆದಿಕವಿ ಎಂದು ಗಣಪತಿ ಭಟ್ಟ ಕೋಲಿಬೇಣ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಮಂಗಳವಾರ ಹಮ್ಮಿಕೊಂಡಿದ್ದ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಶಂಕರಾಚಾರ್ಯರ ಬದುಕು, ಸಾಧನೆ, ಆದರ್ಶಗಳ ಬಗ್ಗೆ ವಿವರಿಸಿದ ಅವರು, 4 ಆಮ್ನಾಯ ಪೀಠಗಳನ್ನು ಸ್ಥಾಪಿಸಿ, ತತ್ವಜ್ಞಾನದ ಅಧ್ಯಾತ್ಮದ ಶಕ್ತಿ ಕೇಂದ್ರಗಳನ್ನಾಗಿಸಿದ್ದಾರೆ. ಶಂಕರಾಚಾರ್ಯರ ಸಂದೇಶಗಳು, ತತ್ವಗಳು ಮನಸಿನ ನೆಮ್ಮದಿ ಪಡೆಯಲು ಸಹಕಾರಿಯಾಗಿವೆ.
ಶಂಕರರ ಸಾರ್ವಕಾಲಿಕವಾದ ತತ್ವ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಈ ಆಚರಣೆ ನಾಂದಿಯಾಗಬೇಕು ಎಂದರು.
ಉಪತಹಸೀಲ್ದಾರ್ ಕೆ.ಎಸ್. ಫರ್ನಾಂಡೀಸ್, ಬಿಇಒ ರೇಖಾ ನಾಯ್ಕ, ತಾಪಂ ಯೋಜನಾಧಿಕಾರಿ ರಾಘವ, ಸಮಾಜ ಕಲ್ಯಾಣ ಇಲಾಖೆಯ ನಾಗೇಶ ಮಲಮೇತ್ರಿ, ವಿವಿಧ ಸಂಘಟನೆಗಳ ಪ್ರಮುಖರಾದ ಮಾರುತಿ ಘಟ್ಟಿ, ರಾಮಕೃಷ್ಣ ಕವಡಿಕೆರೆ, ನರಸಿಂಹ ಗೇರಗದ್ದೆ ಇತರರಿದ್ದರು.