ಭಾರತೀಯ ಸಂಸ್ಕೃತಿ, ಆರ್ಥಿಕತೆ, ಮಾನವ ಆರೋಗ್ಯ, ವಿಷಮುಕ್ತ ಕೃಷಿ ಮತ್ತು ಪರಿಸರ ಸಮತೋಲನದಲ್ಲಿ ಹಸುವಿನ ಸ್ಥಾನವು ಅತ್ಯಂತ ಮಹತ್ವದಾಗಿದೆ. ಶತಮಾನಗಳಿಂದಲೂ ಗೋವಂಶವು ಭಾರತೀಯ ಪರಂಪರೆಯ ಜೀವನಾಡಿಯಾಗಿದೆ. ಆದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ಅವುಗಳ ಸರಿಯಾದ ಸಂರಕ್ಷಣೆ, ಉತ್ತೇಜನದ ಕೊರತೆಯಿಂದಾಗಿ ಗೋವಂಶದ ಸ್ಥಿತಿ ಶೋಚನೀಯವಾಗಿದೆ. ಭಾರತದ ಭೂಮಿಯಲ್ಲಿ ಎಲ್ಲಾ ಗೋ ವಂಶಗಳೂ ಆರೋಗ್ಯಕರ, ಸಂತೋಷಕರ, ಗೌರವಯುತ ಮತ್ತು ಸುರಕ್ಷಿತವಾಗಿರಲು ಸರ್ಕಾರಿ ಮಟ್ಟದಲ್ಲಿ ಇನ್ನೂ ದೃಢವಾದ ಪ್ರಯತ್ನಗಳ ಅಗತ್ಯವಿದೆ.