ಸಮಾರೋಪ ಸಭೆಯಲ್ಲಿ ವಿವಿಧ ಘಟಕಗಳ ಪದಾಧಿಕಾರಿಗಳ ಆಯ್ಕೆ ನಡೆಯಿತು. ರಾಜ್ಯ ಘಟಕದ ಲಕ್ಷ್ಮೀನರಸಯ್ಯ, ಮಂಚೇಗೌಡ, ಜಗದೀಶ ಇಳಗೇರಿ, ಜಿಲ್ಲಾಧ್ಯಕ್ಷ ದೇವರಾಜ ನಾಯ್ಕ, ತಾಲೂಕಾಧ್ಯಕ್ಷರಾದ ದಾಮೋದರ ನಾಯ್ಕ, ಶ್ರೀಧರ ನಾಯ್ಕ, ರಾಜೇಶ ನಾಯ್ಕ, ಸತೀಶ ನಾಯ್ಕ, ಮಂಜುಳಾ ನಾಯ್ಕ ವೇದಿಕೆಯಲ್ಲಿದ್ದರು. ನಾಗರಾಜ ಮಂಜಗುಣಿ, ತೇಜಸ್ವಿ ನಾಯ್ಕ, ವರ್ಧನ ನಾಯ್ಕ ಇತರರು ಕಾರ್ಯಕ್ರಮ ನಿರ್ವಹಿಸಿದರು. ಪುಣ್ಯಾಶ್ರಮದ ವತಿಯಿಂದ ಡಾ.ಪ್ರಣವಾನಂದ ಶ್ರೀಗಳನ್ನು ರಾಜಗೋಪಾಲ ಅಡಿ ಗುರೂಜಿ ಅವರ ಪರವಾಗಿ ಪವನ ಗುನಗ ಶ್ರೀ ಮಹಾಬಲೇಶ್ವರ ಆತ್ಮಲಿಂಗದ ಸ್ಮರಣಿಕೆ ಸಮರ್ಪಿಸಿ ಗೌರವಿಸಿದರು.