ಮಕ್ಕಳಲ್ಲಿ ಯಕ್ಷಗಾನದ ಅಭಿರುಚಿ ಬೆಳೆಯಲಿ

ಅಭಿನೇತ್ರಿ ಯಕ್ಷ್ಸೋತ್ಸವ ಉದ್ಘಾಟನೆ
Artist Ramesh Bhandari was honored with the Kisalur Krishnamoorthi Award at the Abhineti Yakssotsava organized in Badagani, Kumta Taluk. Dr. G.L. Hegde, Shivananda Hegde, Shankar Hegde and others were present.
ಕುಮಟಾ ತಾಲೂಕಿನ ಬಡಗಣಿಯಲ್ಲಿ ಆಯೋಜಿಸಿದ್ದ ಅಭಿನೇತ್ರಿ ಯಕ್ಷ್ಸೋತ್ಸವದಲ್ಲಿ ಕಲಾವಿದ ರಮೇಶ ಭಂಡಾರಿ ಅವರಿಗೆ ಬೆಳೆಯೂರು ಕೃಷ್ಣಮೂತಿರ್ ಪ್ರಶಸ್ತಿಯಿತ್ತು ಗೌರವಿಸಲಾಯಿತು. ಡಾ. ಜಿ.ಎಲ್​.ಹೆಗಡೆ, ಶಿವಾನಂದ ಹೆಗಡೆ, ಶಂಕರ ಹೆಗಡೆ ಇತರರಿದ್ದರು.
Published on: 

ಕುಮಟಾ: ಯಗಾನ ಕಲೆಯು ಜನಜೀವನಕ್ಕೆ ಪ್ರಭಾವ ನೀಡಿದ ಕಲೆಯಾಗಿದ್ದು, ಇಲ್ಲಿ ಅನೇಕ ಕಲಾವಿದರು ಬಂದು ಹೋಗಿದ್ದಾರೆ.ಹೊಸ ಹೊಸ ಕಲಾವಿದರು ಹುಟ್ಟುತ್ತಿದ್ದಾರೆ.ಈ ಸಂಸತಿ ಮುಂದುವರೆಯಲು ಮಕ್ಕಳಲ್ಲಿ ಯಗಾನದ ಅಭಿರುಚಿ ಬೆಳೆಸಬೇಕು ಎಂದು ಜಿಪಂ ನಿಕಟಪೂರ್ವ ಸದಸ್ಯರಾದ ಶಿವಾನಂದ ಹೆಗಡೆ ಕಡತೋಕಾ ಹೇಳಿದರು.

ತಾಲೂಕಿನ ಬಡಗಣಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಭಿನೇತ್ರಿ ಯಕ್ಷ್ಸೋತ್ಸವ ಉದ್ಘಾಟಿಸಿ ಮಾತನಾಡಿದರು. ಯಕ್ಷಗಾನ ಕಲಾವಿದನಾಗಿ ಯಗಾನ ರಂಗಕ್ಕೆ ಏನೆಲ್ಲ ಕೊಡುಗೆ ನೀಡಬಹುದು ಎಂಬುದನ್ನು ನೀಲ್ಕೋಡು ಶಂಕರ ಹೆಗಡೆ ತಮ್ಮ ಅಭಿನೇತ್ರಿ ಸಂಸ್ಥೆಯ ಸಂಸ್ಥೆಯ ಮೂಲಕ ತೋರಿಸಿಕೊಟ್ಟಿದ್ದಾರೆ. ಇದು ಅನೇಕರಿಗೆ ದಾರಿದೀಪವಾಗಲಿ ಎಂದರು.

ಕರ್ನಾಟಕ ಯಗಾನ ಅಕಾಡೆಮಿ ನಿಕಟಪೂರ್ವ ಅಧ್ಯ ಡಾ. ಜಿ.ಎಲ್​. ಹೆಗಡೆ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಯಕ್ಷಗಾನದ ಬಣ್ಣದ ವೇಷದ ಪರಂಪರೆ ಮತ್ತೆ ವಿಜೃಂಭಿಸುವಂತಾಗಬೇಕು ಎಂದರು.

ಕರಿಕಾನ ಪರಮೇಶ್ವರಿ ದೇವಾಲಯದ ಅರ್ಚಕ ವೇ. ಸುಬ್ರಹ್ಮಣ್ಯ ಭಟ್​ ಮೇಲಿನಗಂಟಿಗೆ ಶುಭಹಾರೈಸಿದರು. ಈ ವೇಳೆ ದಿ. ಗೋಪಾಲ ಸುಬ್ಬಯ್ಯ ಹೆಗಡೆ ಹಾಗೂ ದಿ. ಗಣಪತಿ ಸುಬ್ಬಯ್ಯ ಹೆಗಡೆ ಓಜಗಾರ ಸಿದ್ದಾಪುರ ಅವರ ಸ್ಮರಣೆಯಲ್ಲಿ ಕುಟುಂಬದವರ ಸಹಕಾರದಲ್ಲಿ ಕಲಾವಿದ ವಿಷ್ಣು ಮಂಜಪ್ಪ ಆಚಾರಿ ಅವರಿಗೆ ಅಭಿನೇತ್ರಿ ಪ್ರಶಸ್ತಿ, ಶ್ರೀಧರ ಹೆಗಡೆ ಬೆಳೆಯೂರು ಹಾಗೂ ಅಪೂರ್ವ ಬೆಳೆಯೂರು ಕುಟುಂಬದವರ ಸಹಕಾರದಲ್ಲಿ ಕಲಾವಿದ ರಮೇಶ ಭಂಡಾರಿ ಮುರೂರು ಅವರಿಗೆ ಬೆಳೆಯೂರುಕೃಷ್ಣಮೂತಿರ್ ಪ್ರಶಸ್ತಿ, ಸುಮನಾ ಭಟ್​ ಹಾಗೂ ಮನೋಜ ಭಟ್​ ಹೆಗ್ಗಾರಳ್ಳಿ ಸಿದ್ದಾಪುರ ಅವರ ಕುಟುಂಬದವರಿಂದ ಕಲಾವಿದ ಗಣಪತಿ ಹೆಗಡೆ ತೋಟಿಮನೆ ಅವರಿಗೆ ಕಣ್ಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಾಚಾರ್ಯ ಕೆ.ಪಿ. ಹೆಗಡೆ, ಚಂದು ನಾಯ್ಕ ಅಂಕೋಲಾ, ಶ್ರೀಧರ ಭಟ್​ ಕಾಸರಕೋಡು ಕುಟುಂಬಕ್ಕೆ ಆಥಿರ್ಕ ಸಹಾಯಧನ ನೀಡಲಾಯಿತು.

ವೇದಿಕೆಯಲ್ಲಿ ಕಲಾಪೋಷಕ ರಾಜು ಭಂಡಾರಿ, ಶಿರಸಿ ಕೆಡಿಸಿಸಿ ಬ್ಯಾಂಕ್​ ನಿರ್ದೇಶಕ ವಿ.ಕೆ. ವಿಶಾಲ್​ ಇತರರಿದ್ದರು. ತೃಪ್ತಿ ಹೆಗಡೆ ಹಾಗೂ ದ್ಯುತಿ ಹೆಗಡೆ, ಪ್ರಶಾಂತ ಹೆಗಡೆ ಮೂಡಲಮನೆ, ನಾಗರಾಜ ಹೆಗಡೆ ಕಾಸ್ಕಂಡ ಕಾರ್ಯಕ್ರಮ ನಿರ್ವಹಿಸಿದರು. ಅಭಿನೇತ್ರಿ ಟ್ರಸ್ಟ್​ ಸ್ಥಾಪಕರಾದ ಶಂಕರ ಹೆಗಡೆ ನೀಲ್ಕೊಡು ವಂದಿಸಿದರು.