ಓದಿನಷ್ಟೇ ಕ್ರೀಡೆಗೂ ಮಹತ್ವ ನೀಡುವಂತಾಗಲಿ

ಯಲ್ಲಾಪುರದ ವಿಶ್ವದರ್ಶನ ಬಿಸಿಎ ಕಾಲೇಜಿನಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಅಂತಾರಾಷ್ಟ್ರೀಯ ಕ್ರೀಡಾಪಟು ಸಂತೋಷ ಮರಾಠೆ ಉದ್ಘಾಟಿಸಿದರು. ಹರಿಪ್ರಕಾಶ ಕೋಣೆಮನೆ, ಅಶೋಕ ನಾಯ್ಕ್, ಪ್ರಸನ್ನ ಭಟ್, ಸೀತಾರಾಮ ಗೌಡ ಇದ್ದರು.
ಯಲ್ಲಾಪುರದ ವಿಶ್ವದರ್ಶನ ಬಿಸಿಎ ಕಾಲೇಜಿನಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಅಂತಾರಾಷ್ಟ್ರೀಯ ಕ್ರೀಡಾಪಟು ಸಂತೋಷ ಮರಾಠೆ ಉದ್ಘಾಟಿಸಿದರು. ಹರಿಪ್ರಕಾಶ ಕೋಣೆಮನೆ, ಅಶೋಕ ನಾಯ್ಕ್, ಪ್ರಸನ್ನ ಭಟ್, ಸೀತಾರಾಮ ಗೌಡ ಇದ್ದರು.
Published on
ಯಲ್ಲಾಪುರ: ಓದಿನಷ್ಟೇ ಕ್ರೀಡಗೂ ಮಹತ್ವ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿದ್ದ ಪ್ರತಿಭೆಯನ್ನು ಗುರುತಿಸಬೇಕು ಎಂದು ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು.
ವಿಶ್ವದರ್ಶನ ಬಿಸಿಎ ಕಾಲೇಜಿನಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಕಾರ್ಯಕ್ರಮ ಆಯೋಜನೆ ಮಾಡಿದರೂ ಅದನ್ನು ಚೆನ್ನಾಗಿ ಮಾಡುವ ತಂಡ ವಿಶ್ವದರ್ಶನದಲ್ಲಿ ಇರುವುದರಿಂದ ನಾವು ಯಶಸ್ವಿಯಾಗುತ್ತಿದ್ದೇವೆ. ಕ್ರೀಡಾ ಮನೋಭಾವದಿಂದ ಆಟವಾಡಬೇಕು ಕ್ರೀಡೆಯ ಮೂಲಕ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕು. ಮುಂದಿನ ದಿನದಲ್ಲಿ ಇಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಕ್ರೀಡಾ ತರಬೇತಿ ನೀಡುತ್ತೇವೆ ಎಂದರು.
ಪಂದ್ಯಾವಳಿ ಉದ್ಘಾಟಿಸಿದ ಅಂತಾರಾಷ್ಟ್ರೀಯ ಕ್ರೀಡಾಪಟು ಸಂತೋಷ ಮರಾಠೆ ಮಾತನಾಡಿ, ಕ್ರಿಡಾಪಟು ಆಗುವುದು ಕಷ್ಟದ ಕೆಲಸ, ಅದಕ್ಕೆ ನಿರಂತರ ಪರಿಶ್ರಮ ಬೇಕು. ಈ ಪಂದ್ಯಾವಳಿಯಲ್ಲಿ ಭಾಗವಹಿಸಿದವರು ಇಲ್ಲಿಗೆ ಮಾತ್ರವೇ ಸೀಮಿತವಾಗದೇ ಮುಂದೆ ಜಿಲ್ಲೆ ರಾಜ್ಯಮಟ್ಟದಲ್ಲಿ ಭಾಗವಹಿಸುವಂತಾಗಬೇಕು ಎಂದರು.
ಪ್ರಥಮ ದರ್ಜೆ ಗುತ್ತಿಗೆದಾರ ಅಶೋಕ ನಾಯ್ಕ, ಬಿಸಿಎ ಕಾಲೇಜಿನ ಪ್ರಾಂಶುಪಾಲ ಪ್ರಸನ್ನ ಭಟ್, ಉಪನ್ಯಾಸಕ ಸೀತಾರಾಮ ಗೌಡ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net