ಬದುಕಿನಲ್ಲಿ ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಲಿ

ಕೆನರಾ ಎಕ್ಸಲೆನ್ಸ್​ ಸಂಭ್ರಮ ಮತ್ತು ಕರ್ನಾಟಕ ವೈಭವ
The Canara Excellence Celebration and Karnataka Vaibhav program organized at Gore PU College, Kumta was inaugurated by Sahitya B.P. Shivananda Rao. Dr. G.G. Hegde, D.N. Bhat, Kiran Bhat were present.
ಕುಮಟಾದ ಗೋರೆ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕೆನರಾ ಎಕ್ಸಲೆನ್ಸ್​ ಸಂಭ್ರಮ ಮತ್ತು ಕರ್ನಾಟಕ ವೈಭವ ಕಾರ್ಯಕ್ರಮವನ್ನು ಸಾಹಿತಿ ಬಿ.ಪಿ. ಶಿವಾನಂದರಾವ್​ ಉದ್ಘಾಟಿಸಿದರು. ಡಾ. ಜಿ.ಜಿ. ಹೆಗಡೆ, ಡಿ.ಎನ್​. ಭಟ್​, ಕಿರಣ ಭಟ್​ ಇದ್ದರು.
Published on: 

ಕುಮಟಾ: ಬದುಕಿನಲ್ಲಿ ವಾಸ್ತವಿಕತೆಯನ್ನು ಅರಿತು ಜೀವಿಸಬೇಕು, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಹಾಗೂ ಯಾರನ್ನೂ ಶೋಷಿಸಬಾರದು ಎಂದು ಹಿರಿಯ ಸಾಹಿತಿ ಬಿ.ಪಿ. ಶಿವಾನಂದರಾವ್​ ಹೇಳಿದರು.

ಗೋರೆಯ ಕೆನರಾ ಎಕ್ಸಲೆನ್ಸ್​ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಕೆನರಾ ಎಕ್ಸಲೆನ್ಸ್​ ಸಂಭ್ರಮ ಮತ್ತು ಕರ್ನಾಟಕ ವೈಭವ 2026 ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವಸ್ಥರಾದ ಡಿ.ಎನ್​. ಭಟ್​ ಹಳೇ ವಿದ್ಯಾಥಿರ್ ಸಂಕ್ಕೆ ಚಾಲನೆ ನೀಡಿದರು. ನಾಡಗೀತೆ ಹಾಗೂ ವಿದ್ಯಾಥಿರ್ನಿ ಸಿಂಧೂರ ಪೂಜಾರಿ ಅವರಿಂದ ಸ್ವಾಗತ ನೃತ್ಯದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಕಿರಣ ಭಟ್​ ಹುತ್ಗಾರ ಸ್ವಾಗತಿಸಿದರು. ಸ್ಪರ್ಧಾ ವಿಜೇತರನ್ನು, ಸಾಧಕ ವಿದ್ಯಾಥಿರ್ಗಳನ್ನು ಸನ್ಮಾನಿಸಲಾಯಿತು. ಸುನೀಲ ನಾಯ್ಕ, ಗಾಯತ್ರಿ ಹೆಗಡೆ, ಅಯ ಹೆಗಡೆ ನಿರ್ವಹಿಸಿದರು.

ಬಳಿಕ ಕಾಲೇಜಿನ ವಿದ್ಯಾಥಿರ್ಗಳಿಂದ ನೃತ್ಯ ವೈಭವ, ಯವೈಭವ, ಗಣಪತಿ ಭಟ್​ ನಿರ್ದೇಶನದಲ್ಲಿ ವಿಜಯ ವೈಭವ ರೂಪಕ, ವಿದ್ವಾನ್​ ಡಾ. ಹರೀಶ್​ ಹೆಗಡೆ ಸಂಗಡಿಗರಿಂದ ಸಂಗೀತ ವೈಭವ ನೆರೆದವರನ್ನು ರಂಜಿಸಿತು.

ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ:

ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ವೈಭವ ಪ್ರಶಸ್ತಿಯನ್ನು ಅಶೋಕೆಯ ಸ್ವರಾತ್ಮ ಗುರುಕುಲದ ಪ್ರಾಚಾರ್ಯ ಡಾ.ಹರೀಶ ಹೆಗಡೆ ಅವರಿಗೆ ಪ್ರದಾನ ಮಾಡಲಾಯಿತು.

ವಿದ್ಯಾಥಿರ್ಗಳ ಹಸ್ತಪತ್ರಿಕೆ ಛಾತ್ರಸಂಪದವನ್ನು ಬಿಡುಗಡೆಗೊಳಿಸಿದ ಉಡುಪಿ ಆಸೆಮ್ಸ್​ ಶಿಣ ಸಂಸ್ಥೆಯ ಪ್ರಾಚಾರ್ಯ ಪ್ರೊ. ಪವನ್​ ಕಿರಣ್​ ಕೆರೆ ಮಾತನಾಡಿ, ಬದುಕಿರುವುದು ಹೊಂದಿಕೊಳ್ಳಲಿಕ್ಕೆ, ಹೋಲಿಸಿಕೊಳ್ಳಲಿಕ್ಕಲ್ಲ. ಪ್ರಾಮಾಣಿಕತೆಯನ್ನು ಬದುಕಿನ ಉಸಿರಾಗಿಸಿಕೊಳ್ಳಬೇಕು. ಯಾವುದೇ ಕಾರ್ಯವನ್ನು ಅತ್ಯುತ್ತಮವಾಗಿ ಮಾಡಬೇಕು. ರ್ಯಾಂಕ್​ ಸಾಧಕನಾದರೆ ಸಾಲದು, ಉತ್ತಮ ಗುಣವಂತನೆಂದು ಗುರುತಿಸಿಕೊಳ್ಳುವುದು ಮುಖ್ಯ ಎಂದರು.

ಅಧ್ಯತೆ ವಹಿಸಿದ್ದ ಕಾಲೇಜಿನ ಸಂಸ್ಥಾಪಕ ಅಧ್ಯ ಡಾ. ಜಿ.ಜಿ. ಹೆಗಡೆ ಮಾತನಾಡಿ, ಹಳೆ ವಿದ್ಯಾಥಿರ್ಗಳು ಸಂಸ್ಥೆಯೊಂದಿಗೆ ಸದಾ ಆತ್ಮೀಯ ಬಾಂಧವ್ಯವನ್ನು ಉಳಿಸಿಕೊಂಡು ಹೋಗಬೇಕು. ಸಂಸ್ಥೆಯಲ್ಲಿ ಕಲಿತ ಉತ್ತಮ ಸಂಸ್ಕಾರಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡಾಗಲೇ ಶಿಣ ಸಾರ್ಥಕವಾಗುತ್ತದೆ ಎಂದರು. ಕಾರ್ಯದಶಿರ್ ಡಾ. ಸೀತಾಲಕ್ಷ್ಮೀ ಹೆಗಡೆ ಉಪಸ್ಥಿತರಿದ್ದರು. ಗಣಪತಿ ಭಟ್​ ಸ್ವಾಗತಿಸಿದರು. ಆಡಳಿತಾಧಿಕಾರಿ ಶಶಾಂಕ ಶಾಸ್ತ್ರಿ, ಪ್ರೊ. ಪೂಜಾ ಭಟ್​ ನಿರ್ವಹಿಸಿದರು.