ಭಾರತದಲ್ಲಿ ಗೋ ಹತ್ಯೆ ಕೊನೆಗೊಳ್ಳಲಿ

ಗೋ ರಕ್ಷಣೆಗಾಗಿ ಗೋಮಾತೆಯ ಗೌರವದ ಅಭಿಯಾನ ಸಮಿತಿ ವತಿಯಿಂದ ದಾಂಡೇಲಿಯ ಅಂಬೆವಾಡಿಯಲ್ಲಿರುವ ತಾಲೂಕು ಆಡಳಿತ ಸೌಧದಲ್ಲಿ  ತಹಸೀಲ್ದಾರ್ ಶೈಲೇಶ ಪರಮಾನಂದ ಅವರ ಮೂಲಕ  ಮನವಿಯನ್ನು ಸಲ್ಲಿಸಲಾಯಿತು. ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಶ್ರೀನಾಥ ಪಾಸಲ್ಕರ, ಮುಖಂಡರಾದ ವಾಸುದೇವ ಪ್ರಭು, ನಾಮದೇವ ಇತರರಿದ್ದರು.

Published on
ದಾಂಡೇಲಿ: ಗೋ ರಕ್ಷಣೆಗಾಗಿ ಗೋಮಾತೆಯ ಗೌರವದ ಅಭಿಯಾನ ಸಮಿತಿ ವತಿಯಿಂದ ಅಂಬೆವಾಡಿಯಲ್ಲಿರುವ ತಾಲೂಕು ಆಡಳಿತ ಸೌಧದಲ್ಲಿ ಸೋಮವಾರ ತಹಸೀಲ್ದಾರ್ ಶೈಲೇಶ ಪರಮಾನಂದ ಅವರ ಮೂಲಕ ರಾಷ್ಟ್ರಪತಿಗಳಿಗೆ, ಪ್ರಧಾನ ಮಂತ್ರಿ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಗೋವಿನ ಸೇವೆಗಾಗಿ ಕೇಂದ್ರ ಕಾನೂನು ರೂಪಿಸಬೇಕು. ಭಾರತದಲ್ಲಿ ಗೋ ಹತ್ಯೆಯನ್ನು ಸಂಪೂರ್ಣವಾಗಿ ಕೊನೆಗೊಳಿಸಬೇಕು. ಕೃಷಿ ಮತ್ತು ಇತರ ಬಳಕೆಗಳಲ್ಲಿ ಗೋಮಯ ಮತ್ತು ಗೋಮೂತ್ರದ ಪ್ರಾಮುಖ್ಯತೆಯನ್ನು ಹೆಚ್ಚಿಸಲು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಗೋಮಯ ಮತ್ತು ಗೋಮೂತ್ರದ ಕುರಿತು ದೊಡ್ಡ ಪ್ರಮಾಣದ ಸಂಶೋಧನೆಯನ್ನು ನಡೆಸಬೇಕು. ಕೈ ಬಿಟ್ಟಿರುವ ದನಗಳ ಸೇವೆಗಾಗಿ ಎಲ್ಲ ರಾಜ್ಯಗಳು ಗೋಶಾಲೆಗಳಿಗೆ ಅನುದಾನ ನೀಡಬೇಕು ಹೀಗೆ ಮೊದಲಾದ ಬೇಡಿಕೆಗಳನ್ನು ಒಳಗೊಂಡಿರುವ ಮನವಿ ಸಲ್ಲಿಸಲಾಯಿತು.
ಹಿರಿಯರಾದ ರಘುನಾಥ ರಾಂದಡ್ಜಿ, ವಿಶ್ವ ಹಿಂದೂ ಪರಿಷತ್ ತಾಲೂಕಾಧ್ಯಕ್ಷ ಶ್ರೀನಾಥ ಪಾಸಲ್ಕರ, ಮುಖಂಡರಾದ ವಾಸುದೇವ ಪ್ರಭು,ನಾಮದೇವ, ಲಿಂಗಯ್ಯ ಪೂಜಾರ, ಸಚಿನ್ ದೊಂಡವಾಡ, ಅಶೋಕ ಕಾಮತ್, ಪ್ರಶಾಂತ ನಾಯ್ಕ, ಡಿ.ಇ. ನಾಯ್ಕ ಸೇರಿದಂತೆ ಹಿಂದೂಪರ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net