

ಪ್ರಮುಖ ಮುಖ್ಯಾಂಶಗಳು
ಚಿರತೆ ಸಂಚಾರದ ಸಂದರ್ಭದಲ್ಲಿ ಸಾರ್ವಜನಿಕರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ಅರಣ್ಯ ಇಲಾಖೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಚಿರತೆ ಕಂಡುಬಂದಲ್ಲಿ ಅದರ ಸಮೀಪ ಹೋಗುವುದು, ಗುಂಪಾಗಿ ಹಿಂಬಾಲಿಸುವುದು, ಕಲ್ಲು ಎಸೆಯುವುದು ಅಥವಾ ಗಲಾಟೆ ಮಾಡುವುದು ಅಪಾಯಕಾರಿ. ಬದಲಾಗಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಎಂ.ಎಸ್. ಕಳ್ಳಿಮಠ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ
ನಗರದ ಜನವಸತಿ ಪ್ರದೇಶಗಳ ಸಮೀಪ ಪದೇಪದೆ ಚಿರತೆಗಳ ಓಡಾಟ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಚಿರತೆಗಳ ಸಂಚಾರದ ನಿಖರ ಮಾಹಿತಿ ಸಂಗ್ರಹಿಸಬೇಕು. ಅವು ನಗರ ಪ್ರದೇಶದತ್ತ ಬರುತ್ತಿರುವ ಕಾರಣ ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು. ಯಾವುದೇ ದುರ್ಘಟನೆ ಸಂಭವಿಸಿದ ನಂತರ ಎಚ್ಚೆತ್ತುಕೊಳ್ಳುವುದಕ್ಕಿಂತ, ಮುನ್ನೆಚ್ಚರಿಕೆಯಾಗಿ ಈಗಲೇ ಕ್ರಮ ಕೈಗೊಳ್ಳಬೇಕು.
ಡಿ. ಸ್ಯಾಮಸನ್