'ಅರಣ್ಯ ಭೂಮಿ ಹಕ್ಕು' ಕಾನೂನು ಹೋರಾಟ ಅನಿವಾರ್ಯ land

ಜಿಲ್ಲಾ ಅರಣ್ಯ ಹಕ್ಕು ಹೋರಾಟಗಾರರು ಕುಮಟಾದ ಮಿರ್ಜಾನದಲ್ಲಿ ನಿಶ್ಚಲಾನಂದನಾಥ ಸ್ವಾಮೀಜಿ ಭೇಟಿಯಾದರು. ರವೀಂದ್ರ ನಾಯ್ಕ, ನಾಗಪತಿ ಗೌಡ, ಸೀತಾರಾಮ ಗೌಡ, ಹರಿಹರ ನಾಯ್ಕ, ಮಲ್ಲೇಶಿ ಬಸವಂತಪ್ಪ ಬಾಳೆಹಳ್ಳಿ, ಅರವಿಂದ ಗೌಡ ಇತರರಿದ್ದರು.
ಜಿಲ್ಲಾ ಅರಣ್ಯ ಹಕ್ಕು ಹೋರಾಟಗಾರರು ಕುಮಟಾದ ಮಿರ್ಜಾನದಲ್ಲಿ ನಿಶ್ಚಲಾನಂದನಾಥ ಸ್ವಾಮೀಜಿ ಭೇಟಿಯಾದರು. ರವೀಂದ್ರ ನಾಯ್ಕ, ನಾಗಪತಿ ಗೌಡ, ಸೀತಾರಾಮ ಗೌಡ, ಹರಿಹರ ನಾಯ್ಕ, ಮಲ್ಲೇಶಿ ಬಸವಂತಪ್ಪ ಬಾಳೆಹಳ್ಳಿ, ಅರವಿಂದ ಗೌಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿಶ್ಚಲನಾಥನಂದ ಸ್ವಾಮೀಜಿ ನುಡಿ ಅರಣ್ಯವಾಸಿಗಳ ಭೂಮಿ ಹಕ್ಕಿನ ಪ್ರತಿಪಾದನೆ
ಕುಮಟಾ: ಅರಣ್ಯವಾಸಿಗಳ ಭೂಮಿ ಹಕ್ಕಿನ ಪ್ರತಿಪಾದನೆಗೆ ಕಾನೂನು ಹೋರಾಟ ಅನಿವಾರ್ಯ ಎಂದು ಆದಿಚುಂಚನಗಿರಿ ಮಿರ್ಜಾನ ಶಾಖಾಮಠದ ನಿಶ್ಚಲನಾಥನಂದ ಸ್ವಾಮೀಜಿ ನುಡಿದರು.
ಮಿರ್ಜಾನದಲ್ಲಿರುವ ಆದಿಚುಂಚನಗಿರಿ ಶಾಖಾಮಠದಲ್ಲಿ ಸೋಮವಾರ ಭೇಟಿಯಾದ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ನಿಯೋಗ ಉದ್ದೇಶಿಸಿ ಅವರು ಮಾತನಾಡಿದರು.
ಮನುಷ್ಯರಿಗೆ ಸ್ವತಂತ್ರ ಭೂಮಿ ಹಕ್ಕು ಅನಿವಾರ್ಯ. ಈ ದಿಸೆಯಲ್ಲಿ ಸರ್ಕಾರಗಳ ಸಕಾರಾತ್ಮಕ ಸ್ಪಂದನೆ ಅವಶ್ಯ. ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಸಂಬಂಧಿಸಿ ಮಠದ ಸ್ಪಂದನೆ ಸದಾ ಇದೆ. ಕಳೆದ ಮೂರು ದಶಕಕ್ಕಿಂತಲೂ ಹೆಚ್ಚು ಸಮಯದಿಂದ ಅರಣ್ಯ ಭೂಮಿ ಹಕ್ಕಿಗಾಗಿ ಶ್ರಮಿಸುತ್ತಿರುವ ಹೋರಾಟಗಾರರ ವೇದಿಕೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಸಂಚಾಲಕರಾದ ನಾಗಪತಿ ಗೌಡ ಮತ್ತು ಸೀತಾರಾಮ ಗೌಡ ಹುಕ್ಕಳ್ಳಿ, ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಸಂಬಂಧಿಸಿದಂತೆ ಆಡಳಿತ ಮತ್ತು ಕಾನೂನಾತ್ಮಕ ಸಮಸ್ಯೆಗಳ ಕುರಿತು ವಿವರಿಸಿದರು. ಅರಣ್ಯವಾಸಿಗಳಿಗೆ ಸಾಗುವಳಿ ಹಕ್ಕಿಗೆ ಸಂಬಂಧಿಸಿ ಹೋರಾಟಗಾರರ ವೇದಿಕೆ ತೆಗೆದುಕೊಂಡ ನಿರ್ಣಯಗಳನ್ನು ಪ್ರಸ್ತುತಪಡಿಸಿದರು. ನಮ್ಮೆಲ್ಲಾ ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಸಂಬಂಧಿಸಿ ಕಾನೂನಾತ್ಮಕ ಹೋರಾಟಕ್ಕೆ ಬೆಂಬಲ ಆಪೇಕ್ಷಿಸುತ್ತೇವೆ ಎಂದರು.
ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ, ಜಿಲ್ಲೆಯ 80 ಸಾವಿರಕ್ಕೂ ಹೆಚ್ಚು ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಸರ್ಕಾರದ ಸ್ಪಂದನೆ ಅವಶ್ಯ. ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನು ವಿಧಿ ವಿಧಾನ ಅನುಸರಿಸದೇ ಪ್ರಥಮ ಹಂತದಲ್ಲಿ 72 ಸಾವಿರಕ್ಕೂ ಮಿಕ್ಕಿ ಅರ್ಜಿಗಳು ತಿರಸ್ಕಾರವಾಗಿರುವುದು ವಿಷಾದಕರ. ಜಿಲ್ಲೆಯಲ್ಲಿ ಇಂದಿನವರೆಗೆ ಕೇವಲ 2853 ಅರಣ್ಯ ಭೂಮಿ ಹಕ್ಕಿನ ಅರ್ಜಿಗಳಿಗೆ ಮಾನ್ಯತೆ ದೊರಕಿದೆ ಎಂದರು.
ಹರಿಹರ ನಾಯ್ಕ, ಮಲ್ಲೇಶಿ ಬಸವಂತಪ್ಪ ಬಾಳೆಹಳ್ಳಿ, ಅರವಿಂದ ಗೌಡ ಅಂಕೋಲಾ, ಸೀತಾರಾಮ ನಾಯ್ಕ, ನಾಗರಾಜ ಮರಾಠಿ ಕೋಡಿಗದ್ದೆ, ಗಣೇಶ ಚಂದಾವರ, ಲಕ್ಷ್ಮಣ ನಾಯ್ಕ ದೊಡ್ನಳ್ಳಿ, ಶಂಕರ ಕೊಡಿಯಾ, ದೇವರಾಜ ಕ್ಯಾದಗಿ, ಬಸಪ್ಪ ಯಲ್ಲಪ್ಪ ಬಸಾಪುರ, ಸತೀಶ ಚೌಡರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net