ಕಾರವಾರ ಅರ್ಬನ್‌ ಬ್ಯಾಂಕ್‌ ಅವ್ಯವಹಾರ ಗ್ರಾಹಕರ ಕಣ್ಣೀರು

ಕಾರವಾರ ಅರ್ಬನ್‌ ಬ್ಯಾಂಕ್‌ ಗ್ರಾಹಕರು ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದರು.
ಕಾರವಾರ ಅರ್ಬನ್‌ ಬ್ಯಾಂಕ್‌ ಗ್ರಾಹಕರು ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದರು.
Published on
ಕಾರವಾರ : ಅವ್ಯವಹಾರ ನಡೆದು, ಆರ್‌ಬಿಐ ಆದೇಶದಂತೆ ಆರ್ಥಿಕ ವಹಿವಾಟು ಸ್ಥಗಿತ ಮಾಡಿರುವ ಕಾರವಾರ ಅರ್ಬನ್ ಬ್ಯಾಂಕ್‌ನ ಆಡಿಟ್ ಹಾಗೂ ಲಿಕ್ವಿಡೇಶನ್ ಪ್ರಕ್ರಿಯೆಯನ್ನು ವಿಳಂಬ ಮಾಡಿರುವುದಕ್ಕೆ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರಿಗೆ ಮನವಿ ಸಲ್ಲಿಸಿದ ಗ್ರಾಹಕರು ಅಂತಿಮ ಆಡಿಟ್ ವರದಿ ಯಾವಾಗ ಅಂತಿಮವಾಗಲಿದೆ ಎಂಬುದನ್ನು ಸ್ಪಷ್ಟಪಡಿಸುವಂತೆ ಪಟ್ಟು ಹಿಡಿದರು. ಸಹಕಾರ ಇಲಾಖೆ ಅಽಕಾರಿಗಳ ಜತೆ ಮಾತನಾಡಿದ ಎಡಿಸಿ ಸಾಜಿದ್ ಅವರು ಮೇ.25 ರೊಳಗೆ ಆಡಿಟ್ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದ ನಂತರ ಗ್ರಾಹಕರು ವಾಪಸಾದರು.
ಕಾರವಾರ ಅರ್ಬನ್ ಬ್ಯಾಂಕ್‌ನಲ್ಲಿ 76 ಕೋಟಿಗೂ ಹೆಚ್ಚು ಅವ್ಯವಹಾರವಾಗಿರುವುದು ಬೆಳಕಿಗೆ ಬಂದ ನಂತರ ಆರ್‌ಬಿಐ ಬ್ಯಾಂಕ್‌ನ ಲೈಸನ್ಸ್ ರದ್ದು ಮಾಡಿದೆ. ಸಹಕಾರ ಇಲಾಖೆಯು ಮಮತಾ ನಾಯಕ ಅವರನ್ನು ಸಮಾಪನಾ ಅಽಕಾರಿ (ಲಿಕ್ವಿಡೇಟರ್) ಆಗಿ 2025 ರ ಮೇ 17 ರಂದು ನೇಮಕ ಮಾಡಿದ್ದು, ಈಗ ವರ್ಷಗಳು ಕಳೆದಿವೆ.
ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದ 1588 ಜನರಿಗೆ ಡಿಫಾಸಿಟ್ ಇನ್ಶುರೆನ್ಸ್ ಆ್ಯಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್(ಡಿಐಸಿಜಿಸಿ) ನಿಂದ ಗರಿಷ್ಠ 5 ಲಕ್ಷದವರೆಗೆ ಒಟ್ಟು 37.79 ಕೋಟಿ ರೂ. ಹಣ ಹಣ ವಾಪಸ್ ನೀಡಲಾಗಿದೆ. ಆದರೆ, ಇನ್ನೂ 2082 ಗ್ರಾಹಕರಿಗೆ ಸಂಬAಽಸಿದ ಸುಮಾರು ಕೋಟ್ಯಂತರ ರೂ. ಠೇವಣಿ ಹಾಗೂ ಉಳಿತಾಯ ಖಾತೆಯ ಹಣ ನೀಡದೇ ತಾರತಮ್ಯ ಮಾಡಲಾಗಿದೆ.
ಸಹಕಾರ ಇಲಾಖೆಯಿಂದ ಆಡಿಟ್ ವರದಿ ಸಲ್ಲಿಸಿದ ನಂತರವಷ್ಟೇ ಇನ್ಶುರೆನ್ಸ್ ಹಣ ಬಿಡುಗಡೆ ಮಾಡುವುದಾಗಿ ಡಿಐಸಿಜಿಸಿ ಹೇಳುತ್ತಿದೆ. ಚೇತನ್ ಪದಕಿ ಎಂಬ ಆಡಿಟರ್‌ಗೆ ಈ ಬ್ಯಾಂಕ್ ಅವ್ಯವಹಾರದ ಆಡಿಟ್ ಪ್ರಕ್ರಿಯೆ ವಹಿಸಲಾಗಿದೆ. ಆದರೆ, ಸಹಕಾರ ಇಲಾಖೆಯು ವಾರ ಹದಿನೈದು ದಿನ ಎಂದು ದಿನ ದೂಡುತ್ತ ವರ್ಷ ಕಳೆದಿದೆ. ಗ್ರಾಹಕರು ನಾವಿಟ್ಟ ಹಣವನ್ನು ವಾಪಸ್ ಪಡೆಯಲು ಬ್ಯಾಂಕ್‌ಗೆ ಒಡಾಡಿ ಸೋತಿದ್ದೇವೆ.
ಆಡಿಟ್ ಹಾಗೂ ಲಿಕ್ವಿಡೇಶನ್ ಪ್ರಕ್ರಿಯೆಯನ್ನು 45 ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದಿದ್ದರೂ ಈಗ ಎಂಟು ತಿಂಗಳು ಕಳೆದಿದೆ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದರು. ಕಾರವಾರ ಅರ್ಬನ್ ಬ್ಯಾಂಕ್ ಠೇವಣಿ ವಂಚಿತ ಗ್ರಾಹಕರ ಸಂಘದ ಅಧ್ಯಕ್ಷ ತಾರಾನಾಥ ನಾಯ್ಕ, ಉಪಾಧ್ಯಕ್ಷ ಪ್ರಶಾಂತ ಸಾವಂತ, ಕಾರ್ಯದರ್ಶಿ ಗಜಾನನ ಡಿ.ನಾಯ್ಕ, ಜಂಟಿ ಕಾರ್ಯದರ್ಶಿ ರಾಜಕುಮಾರ ಎಂ.ನಾಯ್ಕ ಹಾಗೂ ಸದಸ್ಯರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net