ಕಾಳಿ ನಡುಗಡ್ಡೆಯ ಜಾತ್ರೆಗೆ ಜನಸಾಗರ

ಕಾಳಿ ದೇವಿ
ಕಾಳಿ ದೇವಿ
Published on
ಕಾರವಾರ: ಇಲ್ಲಿನ ಕಾಳಿ ನದಿಯ ನಡುವೆ ಇರುವ ಕಾಳಿ ಮಾತಾ ದೇವಸ್ಥಾನದ ಜಾತ್ರೆ ಗುರುವಾರ ನಡೆಯಿತು. ಸಾವಿರಾರು ಜನ ತೆರಳಿ ಪ್ರಸಾದ ಸ್ವೀಕರಿಸಿದರು.
ಬುಧವಾರ ಕುಂಕುಮಾರ್ಚನೆ ಹೋಮ ಹವನ ಮುಂತಾದ ಕಾರ್ಯಕ್ರಮಗಳು ನಡೆದವು. ಗುರುವಾರ ಮಹಾ ಅಭಿಷೇಕ, ಮಹಾ ಪೂಜೆ ಅನ್ನ ಸಂತರ್ಪಣೆ ನಡೆಯಿತು. ಗುರುವಾರ ಮಧ್ಯಾಹ್ನದ ಹೊತ್ತಿಗೆ ದ್ವೀಪಕ್ಕೆ ತೆರಳುವ ಭಕ್ತರ ಸಂಖ್ಯೆ ದ್ವಿಗುಣಗೊಂಡಿತ್ತು. ಇದೇ ಮೊದಲ ಬಾರಿಗೆ ಇಷ್ಟು ಸಂಖ್ಯೆಯಲ್ಲಿ ಭಕ್ತರು ಕಂಡುಬಂದರು. ಶುಕ್ರವಾರ ದಹಿಂಕಾಲ ಉತ್ಸವ ನಡೆಯಿತು. ಕಂದಾಯ ಇಲಾಖೆಯಿಂದ ಎಲ್ಲರ ಹೆಸರು ನೋಂದಣಿ ಮಾಡಿಕೊಂಡು ತೆರಳಲು ಅವಕಾಶ ಮಾಡಿಕೊಡಲಾಯಿತು. ಎಲ್ಲರಿಗೂ ಲೈಫ್ ಜಾಕೆಟ್ ಹಾಕಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net