ಸ್ವಚ್ಛತೆ ಕಾಪಾಡಲು ಕಸದ ತೊಟ್ಟಿ ಸ್ಥಾಪನೆ Dustbin

ದಾಂಡೇಲಿಯ ರೋಟರಿ ಕ್ಲಬ್ ವತಿಯಿಂದ ನಗರದ ಮೂರು ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ  ಕಸದ ತೊಟ್ಟಿಯನ್ನು (Dustbin) ಇಡಲಾಯಿತು.
ದಾಂಡೇಲಿಯ ರೋಟರಿ ಕ್ಲಬ್ ವತಿಯಿಂದ ನಗರದ ಮೂರು ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಕಸದ ತೊಟ್ಟಿಯನ್ನು (Dustbin) ಇಡಲಾಯಿತು.
Published on
ದಾಂಡೇಲಿ: ಸ್ವಚ್ಛತೆ ಮತ್ತು ಜವಾಬ್ದಾರಿಯುತ ತ್ಯಾಜ್ಯ ವಿಲೇವಾರಿಯನ್ನು ಉತ್ತೇಜಿಸಲು ದಾಂಡೇಲಿಯ ರೋಟರಿ ಕ್ಲಬ್ ಮೂರು ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ತೊಟ್ಟಿಗಳನ್ನು (Dustbin) ಸ್ಥಾಪಿಸಿದೆ.
ನಗರದ ಬಸ್ ನಿಲ್ದಾಣದ ಹತ್ತಿರದಲ್ಲಿರುವ ದಂಡಕಾರಣ್ಯ ಉದ್ಯಾನವನ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮತ್ತು ಮೌಳಂಗಿ ಇಕೋ ಪಾರ್ಕ್ ಉದ್ಯಾನವನದಲ್ಲಿ ಕಸದ ತೊಟ್ಟಿಯನ್ನು ಇಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಕ್ಲಬ್‌ನ ಅಧ್ಯಕ್ಷ ಅಶುತೋಷ ಕುಮಾರ ರಾಯ್, ಈ ಉಪಕ್ರಮವು ಸಾರ್ವಜನಿಕ ನೈರ್ಮಲ್ಯವನ್ನು ಉತ್ತೇಜಿಸುವುದು, ಕಸ ಹಾಕುವುದನ್ನು ತಡೆಗಟ್ಟುವುದು ಮತ್ತು ಪ್ರಮುಖ ಸಮುದಾಯ ಸ್ಥಳಗಳಲ್ಲಿ ಜವಾಬ್ದಾರಿಯುತ ತ್ಯಾಜ್ಯ ನಿರ್ವಹಣೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದರು.
ರೋಟರಿ ಕ್ಲಬ್ ಪ್ರಧಾನ ಕಾರ್ಯದರ್ಶಿ ಮಿಥುನ್ ನಾಯಕ, ರೋಟರಿ ಪ್ರಮುಖ ರಾಹುಲ್ ಬಾವಾಜಿ, ಎಸ್.ಜಿ. ಬಿರಾದಾರ, ಆರ್.ಪಿ. ನಾಯ್ಕ, ಡಾ. ಎಸ್.ಎನ್. ದಫೇದಾರ್, ಡಾ. ಅನೂಪ್ ಮಡ್ದೋಳ್ಕರ್, ಡಾ. ಜ್ಞಾನದೀಪ ಗಾಂವಕರ, ಅಭಿಷೇಕ ಕನ್ಯಾಡಿ, ರಾಧೇಶ್ಯಾಮ್ ರಾಥಿ, ಶೇಖರ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net