ಕೈಗಾ 5 ಮತ್ತು 6 ನೇ ಘಟಕದ ಕಾಂಕ್ರೀಟ್ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಇಂಧನ,ಟರ್ಬೈನ್‌ಗಳು, ಸ್ಟೀಮ್ ಜನರೇಟರ್‌ಗಳು ಹಾಗೂ ವಿವಿಧ ಉಪಕರಣಗಳೂ ಭಾರತದಲ್ಲೇ ತಯಾರಾಗುತ್ತವೆ. ಭಾರ ಜಲ ಅಥವಾ ಹೆವಿ ವಾಟರ್ ತಯಾರಿಸುವ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಿದ್ದು, ಭಾರಿ ಬೇಡಿಕೆ ಇದೆ. ನಾವು ರಷ್ಯಾ, ಯುಎಸ್‌ಎ, ಅರ್ಜೆಂಟೀನಾ ಸೇರಿ ಸಾಕಷ್ಟು ರಾಷ್ಟ್ರಗಳಿಗೆ ರಫ್ತು ಮಾಡುತ್ತೇವೆ. ಇನ್ನಷ್ಟು ದೇಶಗಳಿಂದ ಬೇಡಿಕೆ ಇದೆ ಎಂದರು.