Indescribable ಸಮಾಧಿ ಸ್ಥಿತಿಯಲ್ಲಿ ಪರಮಾತ್ಮನ ದರ್ಶನಕ್ಕೆ ಅನಿರ್ವಚನೀಯ ನಿದ್ರೆ ಹೆದ್ದಾರಿ

ಗೋಕರ್ಣದ ಅಶೋಕೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿರುವ 33ನೇ ಅನ್ನಬ್ರಹ್ಮ ಚಾತುರ್ಮಾಸ್ಯ ನಿಮಿತ್ತ ಮಂಗಳವಾರ ನಡೆದ ಧರ್ಮ ಸಭೆಯಲ್ಲಿ ಚಾತುರ್ಮಾಸ್ಯ ವ್ರತನಿಷ್ಠರಾದ ಶ್ರೀ ರಾವೇಶ್ವರ ಭಾರತೀ ಸ್ವಾಮೀಜಿ ಅವರಿಗೆ ರಾಮಚಂದ್ರಾಪುರ ಮಂಡಲದ ವಿವಿಧ ವಲಯಗಳ ವತಿಯಿಂದ ಆಯೋಜಿತವಾದ ಭಿಾಸೇವೆಯಲ್ಲಿ ಕಿರಣ್​ ದಂಪತಿ ಶ್ರೀಗಳಿಗೆ ರ್ಪೂಣಲ ಸರ್ಮಪಿಸಿದರು.
ಗೋಕರ್ಣದ ಅಶೋಕೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿರುವ 33ನೇ ಅನ್ನಬ್ರಹ್ಮ ಚಾತುರ್ಮಾಸ್ಯ ನಿಮಿತ್ತ ಮಂಗಳವಾರ ನಡೆದ ಧರ್ಮ ಸಭೆಯಲ್ಲಿ ಚಾತುರ್ಮಾಸ್ಯ ವ್ರತನಿಷ್ಠರಾದ ಶ್ರೀ ರಾವೇಶ್ವರ ಭಾರತೀ ಸ್ವಾಮೀಜಿ ಅವರಿಗೆ ರಾಮಚಂದ್ರಾಪುರ ಮಂಡಲದ ವಿವಿಧ ವಲಯಗಳ ವತಿಯಿಂದ ಆಯೋಜಿತವಾದ ಭಿಾಸೇವೆಯಲ್ಲಿ ಕಿರಣ್​ ದಂಪತಿ ಶ್ರೀಗಳಿಗೆ ರ್ಪೂಣಲ ಸರ್ಮಪಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ರಾವೇಶ್ವರ ಶ್ರೀಗಳಿಂದ ಆಹಾರ, ವಿಹಾರ ಜಾಗೃತಿ, ನಿದ್ದೆಯ ಪರಿಚಯ

ಗೋಕರ್ಣ:

ಯೋಗ ನಿದ್ರೆಗೆ ಜಾಗೃತ ಜೀವನವು ಕಾಲುದಾರಿ. ತುರೀಯಾವಸ್ಥೆಯ ಸಮಾಧಿ ಸ್ಥಿತಿಯಲ್ಲಿ ಪರಮಾತ್ಮನ ದರ್ಶನಕ್ಕೆ ನಿದ್ದೆಯೇ ಹೆದ್ದಾರಿಯಾಗಿದೆ. ಇದನ್ನೇ ಆದಿಗುರುವರ್ಯ ಶ್ರೀ ಆಚಾರ್ಯಶಂಕರರು ಅಜಾಡ್ಯ ನಿದ್ರಾ ಎಂಬುದಾಗಿ ವಿವರಿಸಿರುವರು ಎಂದು 33ನೇ ಅನ್ನಬ್ರಹ್ಮ ಚಾತುರ್ಮಾಸ್ಯ ವ್ರತನಿಷ್ಠರಾದ ಶ್ರೀ ರಾವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಅಶೋಕೆಯ ಶ್ರೀ ರಾಮಚಂದ್ರಾಪುರ ಮಠದಲ್ಲಿ ಮಂಗಳವಾರದ ಧರ್ಮಸಭೆಯಲ್ಲಿ ಶ್ರೀಗಳು ಅನ್ನಂಬ್ರಹ್ಮ ಪ್ರವಚನ ಮಾಲಿಕೆಯಲ್ಲಿ ಆಹಾರ, ವಿಹಾರ, ಜಾಗೃತ, ನಿದ್ರೆಯ ಕುರಿತಾದ ಯುಕ್ತಾಯುಕ್ತಗಳನ್ನು ವಣಿರ್ಸಿದರು.
ಧಾತು ಸಾಮ್ಯ: ಯೋಗನಿದ್ರೆಗೆ ಶರೀರದಲ್ಲಿನ ಸಪ್ತ ಧಾತುಗಳ ಸಾಮ್ಯವೇ ಮೂಲಾಧಾರ. ರ್ಪೂಣವಾದ ಧಾತು ಸಾಮ್ಯ ಪರಿರ್ಪೂಣವಾದ ಆರೋಗ್ಯಕ್ಕೆ ಕಾರಣವಾಗುತ್ತದೆ. ರ್ಪೂಣ ಆರೋಗ್ಯದಿಂದ ಮಾತ್ರ ಆತ್ಮ ದರ್ಶನ ಪ್ರಾಪ್ತಿ ಎನ್ನುವುದನ್ನು ಆಯುರ್ವೇದ ಮತ್ತು ಯೋಗ ಶಾಸ್ತ್ರಗಳು ಏಕರೂಪದಲ್ಲಿ ಸಾರಿವೆ. ಪರಿರ್ಪೂಣ ನಿದ್ರೆಗೆ ಯುಕ್ತವಾದ ಆಹಾರ ವಿಹಾರಗಳ ಮೂಲಕದ ಶರೀರ ಸ್ವಾಸ್ಥ್ಯ ಮುಖ್ಯ. ಶರೀರ ಸ್ವಾಸ್ಥ್ಯಕ್ಕೆ ಒಳಗಿರುವ ಸಪ್ತ ಧಾತುಗಳ ಸಾಮ್ಯ ಪ್ರಧಾನವಾದುದು. ಶರೀರದೊಳಗೆ ಉತ್ಪನ್ನವಾಗುವ ವಿವಿಧ ಪ್ರಕಾರದ ವೇಗ ಅಥವಾ ಒತ್ತಡಗಳನ್ನು ಧಾರಣೆ ಮಾಡಲು ಬಿಡದೆ ಅವುಗಳನ್ನು ಹೊರ ಹೋಗುವಂತೆ ಮಾಡುವುದರಿಂದ ರೋಗ ಭೀತಿ ದೂರಾಗುತ್ತದೆ ಎಂದು ಶ್ರೀಗಳು ಹೇಳಿದರು.

ಮಾಡಲೇಬಾರದ ಶಾರೀರಿಕ ಕ್ರಿಯೆಗಳು

ಶರೀರದ ಒಳಗೆ ನಿತ್ಯದಲ್ಲಿ ವಿವಿಧ ವೇಗ ಅಥವಾ ಒತ್ತಡಗಳು ನೈಸಗಿರ್ಕವಾಗಿ ಉಂಟಾಗುತ್ತವೆ. ಇಂತಹವುಗಳಿಗೆ ನಾವು ತಡೆಹಾಕಿ ಅವುಗಳನ್ನು ನಿಲ್ಲಿಸುವ ಪ್ರಯತ್ನ ಮಾಡಬಾರದು. ದೇಹದ ಒಳಗೆ ಉತ್ಪನ್ನವಾಗುವ ನಾನಾ ಕಲ್ಮಷಗಳು ಸಹಜ ಕ್ರಿಯೆಯ ಮೂಲಕ ದೇಹ ಹೊರ ಹಾಕಲು ಮುಂದಾದಾಗ ಅವುಗಳನ್ನು ತಡೆದರೆ ಅವು ಪುನಃ ದೇಹವನ್ನು ಸೇರಿ ಅಪಾಯಕ್ಕೆ ಕಾರಣವಾಗಬಹುದು. ಉದಾಹರಣೆಗೆ ತ್ವರಿತಗತಿಯಲ್ಲಿ ಬರುವ ಸೀನು. ಕಾಲಕಾಲದ ಮೂತ್ರ, ಕೆಮ್ಮು, ಕ ಇಂತಹವುಗಳ ವಿಸರ್ಜನೆಯನ್ನು ತಡೆಯಬಾರದು. ಅದೇ ರೀತಿ ನೇತ್ರೋದಕ ಅಥವಾ ಕಣ್ಣೀರು. ಕಣ್ಣೀರಿನಲ್ಲಿ ಆನಂದ ಬಾಷ್ಪ ಮತ್ತು ದುಃಖಾಶ್ರು ಎನ್ನುವ ಎರಡು ಬಗೆ. ಮೊದಲನೆಯದು ಶೀತಲವಾದರೆ ಎರಡನೆಯ ದುಃಖದ ಕಣ್ಣೀರು ಬಿಸಿಬಿಸಿ. ಇವುಗಳನ್ನು ಸಹ ಹರಿಯಲು ಬಿಡಬೇಕು. ಇನ್ನೊಂದು ಬಹು ಮಹತ್ವದ ಬಾಯಾರಿಕೆ. ಬಾಯಾರಿಕೆ ಆದಾಗ ನೀರು ಕುಡಿಯಬೇಕು. ಆದರೆ ಇಂದಿನ ಆಧುನಿಕ ಜೀವನ ಕ್ರಮದಲ್ಲಿ ಬಾಯಾರಿಕೆ ಇಲ್ಲದೆಯೂ, ಶರೀರ ನೀರನ್ನು ಕೇಳದೇ ಹೋದರೂ ನೀರನ್ನು ಒಳಗೆ ತುಂಬುವುದು ್ಯಾಶನ್​ ಆಗಿದೆ. ಇದರಿಂದ ದೇಹ ಭಾರವಾಗುವುದರಿಂದ ಆಯುರ್ವೇದ ಶಾಸ್ತ್ರ ಇದನ್ನು ಒಪ್ಪುವುದಿಲ್ಲ. ದೇಹ ಕೇಳಿದಾಗ ಮಾತ್ರ ನೀರನ್ನು ಕುಡಿಯುವುದು ಸರಿಯಾದ ಕ್ರಮ ಎಂದಿದೆ. ಇದರೊಂದಿಗೆ ಹಸಿವು ಮತ್ತು ನಿದ್ರೆ. ಹಸಿವನ್ನು ಕಟ್ಟಬಾರದು. ಇದರಿಂದ ಒಳಗಿನ ಜಠರಾಗ್ನಿ ಪ್ರಕೋಪಗೊಂಡು ಏನೆಲ್ಲವನ್ನು ಸುಡುವ ಸಾಧ್ಯತೆ ಇದೆ. ಇದರಂತೆ ಸಕಾಲದಲ್ಲಿ ಬರುವ ನಿದ್ರೆಯನ್ನೂ ಯಾವತ್ತೂ ತಡೆದು ಎಚ್ಚರವಾಗಿರುವ ಸಾಹಸ ಮಾಡಲೇಬಾರದು.
ಶರೀರದಲ್ಲಿ ಉಂಟಾಗುವ ಇಂತಹ ವೇಗಗಳನ್ನು ನಿಷಮಿಸದೆ ಯಥಾವತ್​ ಧಾರಣೆ ಮಾಡಲು ಬಿಡುವುದರಿಂದ ಅದು ನಾನಾ ರೋಗಕ್ಕೆ ಮೂಲವಾಗುತ್ತದೆ. ದೇಹದ ಸಹಜ ಕ್ರಿಯೆಯಲ್ಲಿ ಹಸ್ತೇಪ ಮಾಡುವುದರಿಂದ "ವೇಗೋ ಸವೋರ್ಪ ಜಾಯಂತೇ' ಅಂದರೆ ಈ ವೇಗ ಅಥವಾ ಒತ್ತಡದಿಂದ ಯಾವ ರೋಗವೂ ಶರೀರವನ್ನು ಆಕ್ರಮಿಸಬಹುದು ಎನ್ನುವುದು ಆಯುರ್ವೇದ ಶಾಸ್ತ್ರದ ಎಚ್ಚರಿಕೆಯಾಗಿದೆ. ಇವುಗಳ ಜತೆಗೆ ರಾಗ, ದ್ವೇಷ, ಕ್ರೋಧ, ಪರಪೀಡನೆ, ಅನೃತ ಇತ್ಯಾದಿ ಶರೀರದಿಂದ ಆಗಬಹುದಾದ ಅಧರ್ಮ ಕ್ರಿಯೆಗಳನ್ನು ಕೂಡ ನಿರ್ಬಂಧಿಸುವಂತಾಗಬೇಕು. ಹೀಗೆ ಗೀತೋಪದೇಶದಲ್ಲಿ ಶ್ರೀಕೃಷ್ಣ ತಿಳಿಸಿದಂತೆ, "ಯುಕ್ತಾಹಾರ ವಿಹಾರಸ್ಯ ಯುಕ್ತ ಚೇಷ್ಟಸ್ಯ ಕರ್ಮಸು>ಯುಕ್ತ ಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾ>ಯುಕ್ತವಾದ ಆಹಾರ&ವಿಹಾರ,ಯುಕ್ತವಾದ ಸುಕರ್ಮಗಳು ಮತ್ತು ಯುಕ್ತವಾದ ಎಚ್ಚರ ಮತ್ತು ನಿದ್ರೆಯಿಂದ ಜೀವನ ಯೋಗವಾಗಿ ದುಃಖಗಳ ವಿನಾಶವಾಗಲಿ ಎಂದು ಶ್ರೀಗಳು ಆಶೀರ್ವಾದವನ್ನು ಅನುಗ್ರಹಿಸಿದರು.
ಮಂಗಳವಾರದ ಧರ್ಮಸಭೆಯಲ್ಲಿ ರಾಮಚಂದ್ರಾಪುರ ಮಂಡಲದ ಭೀಮನಕೋಣೆ, ಕಾನುಗೋಡು, ಪುರಪ್ಪೇಮನೆ, ಶಿವಮೊಗ್ಗ,ತೀರ್ಥರಾಜಪುರ ವಲಯಗಳ ಪರವಾಗಿ ನಡೆದ ಗುರು ಭಿಾಸೇವೆ ನಿಮಿತ್ತ ಕಿರಣ್​ ದಂಪತಿ ಶ್ರೀಗಳಿಗೆ ರ್ಪೂಣಲ ಸರ್ಮಪಿಸಿದರು. ಆಡಳಿತಾಧಿಕಾರಿ ಡಾ. ಪ್ರಸನ್ನಕುಮಾರ, ಅಶೋಕಾಲೋಕದ ಶ್ರೀಸಂಯೋಜಕ ಮಂಜುನಾಥ ಸುವರ್ಣಗದ್ದೆ, ವ್ಯವಸ್ಥಾ ಪರಿಷತ್​ ಅಧ್ಯ ಶ್ರೀಕಾಂತ ಪಂಡಿತ್​, ಲಕ್ಷಿ$್ಮನಾರಾಯಣ ಕೆ.ಪಿ., ಸೀತಾರಾಮ ಇಕ್ಕೇರಿ, ರಮೇಶ ಕಾನುಗೋಡು ಮತ್ತು ದಿನ ಪ್ರಧಾನರಾದ ಚಂದ್ರಶೇಖರ ಹೊಸಗದ್ದೆ ದಂಪತಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net