Falls ಮಾಗೋಡ ಜಲಪಾತ ರಸ್ತೆ ಸೇತುವೆ ಉದ್ಘಾಟನೆ

ಯಲ್ಲಾಪುರ ತಾಲೂಕಿನ ಮೊಟ್ಟೆಗದ್ದೆ ಬಳಿ ಮಾಗೋಡ ಜಲಪಾತ ( Falls ) ರಸ್ತೆಯಲ್ಲಿ 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ಸೇತುವೆಯನ್ನು ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸಿದರು.
ಯಲ್ಲಾಪುರ ತಾಲೂಕಿನ ಮೊಟ್ಟೆಗದ್ದೆ ಬಳಿ ಮಾಗೋಡ ಜಲಪಾತ ( Falls ) ರಸ್ತೆಯಲ್ಲಿ 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ಸೇತುವೆಯನ್ನು ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸಿದರು.
Published on
ಯಲ್ಲಾಪುರ: ಕ್ಷೇತ್ರದ ಸರ್ವಾಂಗೀಣ ಪ್ರಗತಿ ನಮ್ಮ ಜವಾಬ್ದಾರಿಯಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ತಾಲೂಕಿನ ಮೊಟ್ಟೆಗದ್ದೆ ಬಳಿ ಮಾಗೋಡ ಜಲಪಾತ Falls ರಸ್ತೆಯಲ್ಲಿ 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ಸೇತುವೆ ಉದ್ಘಾಟಿಸಿ ಅವರು ಮಾತನಾಡಿದರು. ಮಾಗೋಡ ಜಲಪಾತ ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು.
ಇಲ್ಲಿಗೆ ಮೂಲಸೌಕರ್ಯ ಕಲ್ಪಿಸುವುದು ಪ್ರವಾಸೋದ್ಯಮ ದೃಷ್ಟಿಯಿಂದ ತೀರಾ ಅಗತ್ಯ. ಮೊಟ್ಟೆಗದ್ದೆಯಿಂದ ಮಾಗೋಡ ಜಲಪಾತದವರೆಗೆ ಹಾಗೂ ಹೆಬ್ಬಾರ ಮನೆಯಿಂದ ಜೇನುಕಲ್ಲು ಗುಡ್ಡದವರೆಗಿನ ರಸ್ತೆ ದುರಸ್ತಿಗೆ ಅನುದಾನ ಶೀಘ್ರವಾಗಿ ನೀಡುವ ಭರವಸೆ ನೀಡಿದರು.
ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್ಟ ಕಿರಕುಂಭತ್ತಿ ಮಾತನಾಡಿ, ಎರಡು ವರ್ಷಗಳ ಹಿಂದೆ ಜೋರಾದ ಮಳೆಯಿಂದಾಗಿ ಈ ಭಾಗದಲ್ಲಿ ಸಿಡಿ, ಪೈಪ್ ಕೊಚ್ಚಿಕೊಂಡು ಹೋಗಿತ್ತು. ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ನಮ್ಮ ಮನವಿಗೆ ಸ್ಪಂದಿಸಿದ ಶಾಸಕರು ನೂತನ ಸೇತುವೆಗೆ ಅನುದಾನ ನೀಡಿ, ಪ್ರವಾಸಿಗರ ಓಡಾಟಕ್ಕೆ ಅನುಕೂಲ ಕಲ್ಪಿಸಿದ್ದಾರೆ ಎಂದರು.
ಹಿರಿಯ ವೈದಿಕ ನಾರಾಯಣ ಭಟ್ಟ ಮೊಟ್ಟೆಗದ್ದೆ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್. ಭಟ್ಟ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್. ಭಟ್ಟ, ಪ್ರಮುಖರಾದ ಜಿ.ಎಸ್. ಭಟ್ಟ, ನಾಗೇಶ ಹೆಗಡೆ ಬಾಳೆಗದ್ದೆ, ಗುತ್ತಿಗೆದಾರ ಕುಪ್ಪಯ್ಯ ಪೂಜಾರಿ, ಅರಣ್ಯ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net