ಗೋಕರ್ಣ ಬಳಿಯ ಹೊಸ್ಕಟ್ಟ ಗ್ರಾಮಸ್ಥರು ಶಾಲೆಗೆ ತೆರಳುವ ರಸ್ತೆ ನಿರ್ಮಾಣಕ್ಕೆ ಶಾಸಕ ದಿನಕರ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು. ಶಿವಾನಂದ ಹೊಸ್ಕಟ್ಟ, ಪ್ರಮೋದ, ಲಕ್ಷ್ಮಣ, ಚಿದಂಬರ, ಬುದವಂತ, ನಾಗರಾಜ ಇತರರಿದ್ದರು.
ಗೋಕರ್ಣ: ಹತ್ತಿರದ ಹೊಸ್ಕಟ್ಟ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿನ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿಗೆ ತೆರಳುವಲ್ಲಿರುವ ಕಡಿದಾದ ಗುಡ್ಡ ಮತ್ತು ಹಳ್ಳದಿಂದ ಸರಿಯಾದ ರಸ್ತೆ ಇಲ್ಲದೆ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಸಂಚಾರ ಯೋಗ್ಯ ರಸ್ತೆ ನಿರ್ಮಿಸಿಕೊಡುವಂತೆ ಹೊಸ್ಕಟ್ಟ ಗ್ರಾಮಸ್ಥರು ಶಾಸಕ ದಿನಕರ ಶೆಟ್ಟಿ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಈಗಾಗಲೇ ಸ್ಥಳ ಭೇಟಿ ಮಾಡಿ ಪರಿಶೀಲನೆ ಮಾಡಿದ್ದೇನೆ. ರಸ್ತೆಯ ಅಗತ್ಯದ ಬಗ್ಗೆ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿದ್ದು, ಇದನ್ನು ಅನುಸರಿಸಿ ಈಗಾಗಲೇ ಅಧಿವೇಶನದಲ್ಲಿ ಸಂಬಂಧಿಸಿದ ಸಚಿವರ ಗಮನ ಸೆಳೆದಿದ್ದೇನೆ. ಆದಷ್ಟು ಬೇಗ ಅನುದಾನದ ವ್ಯವಸ್ಥೆ ಮಾಡಿ, ಮಕ್ಕಳ ಓಡಾಟಕ್ಕೆ ಸುರಕ್ಷಿತವಾದ ಕಾಮಗಾರಿಗೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.
ಗ್ರಾಮದ ಶಿವಾನಂದ ಹೊಸ್ಕಟ್ಟ, ಪ್ರಮೋದ, ಲಕ್ಷ್ಮಣ, ಚಿದಂಬರ, ಬುದವಂತ, ನಾಗರಾಜ, ಮಹಾದೇವ ಮತ್ತು ಮಿರ್ಜಾನ್ ಗ್ರಾಪಂ ಸದಸ್ಯ ಮಂಜುನಾಥ ಕಿಮಾನಿ ಇದ್ದರು.