ಭಟ್ಕಳ: ತಾಲೂಕಿನ ಹಲವೆಡೆ ಸೋಮವಾರ ಹೋಳಿ (Holi) ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಬಂದರಿನ ಯುವಕ, ಯುವತಿಯರು ಬಣ್ಣದಾಟದಲ್ಲಿ ತೊಡಗಿದರೆ, ವಿವಿಧ ಭಾಗದ ಯುವಕರು ವಿವಿಧ ಬಣ್ಣದ ಟಿ ಶರ್ಟ್‌ಗಳನ್ನು ಧರಿಸಿ ಶಾಂತಿಯುತವಾಗಿ ರಂಗಿನಾಟ ಆಡಿದರು.
ಪಟ್ಟಣದ ವಡೇರ ಮಠ ಕಾಂಪೌಂಡ್, ಮಣ್ಕುಳಿಯ ಗೆಳೆಯರು, ಸರ್ಪನಕಟ್ಟೆ, ತಲಾಂದ, ರೈಲ್ವೆ ನಿಲ್ದಾಣ, ಬೆಳಲಖಂಡ, ಮುರ್ಡೇಶ್ವರ, ಶಿರಾಲಿ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲೂ ಪರಸ್ಪರ ಬಣ್ಣಹಚ್ಚಿ ರಂಗಿನೋಕುಳಿ ಆಡಿ ಸಂಭ್ರಮಿಸಿದರು.
ಕೆಲ ಶಾಲಾ-ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪರಸ್ಪರ ಬಣ್ಣದಾಟದಲ್ಲಿ ಮಿಂದೆದ್ದರು. ಯಾವುದೆ ಗೌಜು-ಗದ್ದಲಕ್ಕೆ ಆಸ್ಪದ ನೀಡದೆ ತಾಲೂಕಿನಾದ್ಯಂತ ಶಾಂತಿಯುತವಾಗಿ ಬಣ್ಣ ಆಡಲಾಯಿತು.