ಸಮಾಜ ಸೇವೆಯಿಂದ ಮನುಷ್ಯನಿಗೆ ದೊಡ್ಡತನ

ಹಳಿಯಾಳ ಪಟ್ಟಣದ ಗಣೇಶ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ದಿ. ಉದಯ ಹೂಲಿ ಅವರ ಸವಿ ನೆನಪು ಕಾರ್ಯಕ್ರಮದಲ್ಲಿ ಶುಕ್ರವಾರ ಪ್ರಕಟವಾದ ಉದಯ ಹುಲಿ ಅವರ ಕುರಿತ ವಿಶೇಷ ವರದಿಯನ್ನು ಹೂಲಿ ಕುಟುಂಬದವರಿಗೆ ಅವರ ಗೆಳೆಯರ ಬಳಗದಿಂದ ಫೋಟೋ ಫ್ರೇಮ್ ಮಾಡಿಸಿ ಕಾಣಿಕೆಯಾಗಿ ನೀಡಲಾಯಿತು.
ಹಳಿಯಾಳ ಪಟ್ಟಣದ ಗಣೇಶ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ದಿ. ಉದಯ ಹೂಲಿ ಅವರ ಸವಿ ನೆನಪು ಕಾರ್ಯಕ್ರಮದಲ್ಲಿ ಶುಕ್ರವಾರ ಪ್ರಕಟವಾದ ಉದಯ ಹುಲಿ ಅವರ ಕುರಿತ ವಿಶೇಷ ವರದಿಯನ್ನು ಹೂಲಿ ಕುಟುಂಬದವರಿಗೆ ಅವರ ಗೆಳೆಯರ ಬಳಗದಿಂದ ಫೋಟೋ ಫ್ರೇಮ್ ಮಾಡಿಸಿ ಕಾಣಿಕೆಯಾಗಿ ನೀಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಕುಮಾರ ವಿರೂಪಾಕ್ಷೇಶ್ವರ ಸ್ವಾಮೀಜಿ ಆಶೀರ್ವಚನ
  • ದಿ. ಉದಯ ಹೂಲಿಯವರ ಸವಿ ನೆನಪು ಕಾರ್ಯಕ್ರಮ
ಹಳಿಯಾಳ: ಮನುಷ್ಯ ಹುಟ್ಟಿನಿಂದ ದೊಡ್ಡವನಾಗುವುದಿಲ್ಲ, ಬದಲಾಗಿ ಆತ ಮಾಡುವ ಸಮಾಜಮುಖಿ ಸೇವಾ ಕಾರ್ಯಗಳಿಂದ ಮಾತ್ರ ದೊಡ್ಡವನಾಗುತ್ತಾನೆ ಎಂದು ಉಪ್ಪಿನ ಬೆಟಗೇರಿ ಮಠದ ಶ್ರೀ ಕುಮಾರ ವಿರೂಪಾಕ್ಷೇಶ್ವರ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಗಣೇಶ ಕಲ್ಯಾಣ ಮಂಟಪದಲ್ಲಿ ಉದಯ ಹೂಲಿ ಗೆಳೆಯರ ಬಳಗದಿಂದ ಶನಿವಾರ ಆಯೋಜಿಸಿದ್ದ ದಿ. ಉದಯ ಹೂಲಿಯವರ ಸವಿ ನೆನಪು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮನುಷ್ಯನಿಗೆ ಸದ್ಗುಣಗಳು, ಆಚಾರ ವಿಚಾರಗಳು, ಪರೋಪಕಾರ, ಸೇವಾ ಗುಣಗಳು ಇದ್ದಾಗ ಮಾತ್ರ ಮನುಷ್ಯ ಬೆಳೆಯುತ್ತಾನೆ. ಅಭಿವೃದ್ಧಿ ಹೊಂದುತ್ತಾನೆ. ಶ್ರೀಮಂತ ಮನೋಭಾವ ಹೊಂದಿರುವ ವ್ಯಕ್ತಿಗಳಿದ್ದರೆ ಸಮಾಜವೂ ಶ್ರೀಮಂತವಾಗುತ್ತದೆ ಇದಕ್ಕೆ ನಿದರ್ಶನವೆಂಬಂತೆ ಉದಯ ಹೂಲಿ ಬದುಕಿದ್ದರು ಎಂದು ಶ್ಲಾಘಿಸಿದರು.
ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ದಶಕಗಳ ಹಿಂದೆ ಅಭಿವೃದ್ಧಿ ಹೊಂದದೆ ಇರುವಂತಹ ಹಳಿಯಾಳದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ವಿ.ಡಿ. ಹೆಗಡೆ ಆದಿಯಾಗಿ ಹಲವು ಮುಖಂಡರ ಜೊತೆ ಸೇರಿಕೊಂಡು ಹಳಿಯಾಳದ ಅಭಿವೃದ್ಧಿಗಾಗಿ ಶ್ರೀಕಾಂತ ಹೂಲಿಯವರು ಶ್ರಮಿಸಿದ್ದಾರೆ. ಅವರ ಮಗ ದಿ. ಉದಯ ಹೂಲಿಯವರು ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯವಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ. ಅವರ ಅಗಲಿಕೆಯಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ಉದಯ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಸ್ಥಾಪಿಸಿರುವ ಈಶ್ವರ ದೇವಸ್ಥಾನ ಎಂದಿಗೂ ನಿರ್ಲಕ್ಷಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು ಎಂದು ಸಮಾಜಕ್ಕೆ ಮನವಿ ಮಾಡಿದರು.
ಧಾರವಾಡದ ಮಾಜಿ ಶಾಸಕ ಅಮೃತ ದೇಸಾಯಿ, ಹಳಿಯಾಳ ಗ್ರಾಮದೇವಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಮಂಗೇಶ ದೇಶಪಾಂಡೆ, ಪುರಸಭೆ ಮಾಜಿ ಅಧ್ಯಕ್ಷ ಉಮೇಶ ಬೋಳಶೆಟ್ಟಿ, ದಿ. ಉದಯ ಹೂಲಿ ಅವರ ಪುತ್ರ ಮೃತ್ಯುಂಜಯ ಮತ್ತು ಪುತ್ರಿ ಶಿವಾನಿ ಮಾತನಾಡಿದರು.
ಹಳಿಯಾಳ ಪುರಸಭೆ ಮಾಜಿ ಅಧ್ಯಕ್ಷೆ ಮಾಲಾ ಬೃಗಾಂಜಾ ಅವರು ಶಾಸಕ ಆರ್.ವಿ. ದೇಶಪಾಂಡೆ ಅವರ ಸಂದೇಶವನ್ನು ವಾಚಿಸಿದರು.
ವೀರಶೈವ ಲಿಂಗಾಯತ ಸಮಾಜದ ಹಳಿಯಾಳ ತಾಲೂಕಾಧ್ಯಕ್ಷ ಎಂ.ಬಿ. ತೋರಣಗಟ್ಟಿ, ಪುರಸಭೆ ಮಾಜಿ ಅಧ್ಯಕ್ಷ ಅಜರುದ್ದೀನ್ ಬಸರಿಕಟ್ಟಿ, ಪ್ರಮುಖರಾದ ಬಸವರಾಜ ಓಶೀಮಠ, ಶಿವದೇವ ದೇಸಾಯಿಸ್ವಾಮಿ, ಉದಯ್ ಜಾಧವ, ಯೋಗರಾಜ ಮರಾಠೆ ಮಾತನಾಡಿದರು.
ವೇದಿಕೆಯಲ್ಲಿ ಕೆ.ಕೆ. ಹಳ್ಳಿ ಶ್ರೀ ಗುರು ನಿತ್ಯಾನಂದ ಆಶ್ರಮದ ಶ್ರೀ ಸುಬ್ರಹ್ಮಣ್ಯ ಸ್ವಾಮೀಜಿ, ವಿ.ಡಿ. ಹೆಗಡೆ, ಮುಸ್ಲಿಂ ಸಮಾಜದ ಮುಖಂಡ ಖಯ್ಯಮ್ ಮುಗದ, ಹೂಲಿ ಕುಟುಂಬದ ಶಾರಕ್ಕ ಎಂ. ಹೂಲಿ ಇತರರಿದ್ದರು. ಸಿದ್ದಪ್ಪ ಬಿರಾದಾರ ನಿರೂಪಿಸಿದರು. ಸಂತೋಷ ಘಟಕಾಂಬಳೆ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net