ಫ್ರೀ ಡಾಕ್ಟರ್‌ ಡಾ.ಚಂದ್ರಶೇಖರ ಕದಂ ಇನ್ನಿಲ್ಲ

ಡಾ. ಚಂದ್ರಶೇಖರ ಕದಂ
ಡಾ. ಚಂದ್ರಶೇಖರ ಕದಂ
Published on: 

ಕಾರವಾರ: ಉಚಿತ ಸೇವೆಯ ಮೂಲಕ ನಗರದಲ್ಲಿ ಪ್ರಸಿದ್ಧರಾಗಿದ್ದ ಡಾ.ಚಂದ್ರಶೇಖರ ಕದಂ(72)ಚಿಕ್ಕಬಳ್ಳಾಪುರ ಮುದ್ದೇನಹಳ್ಳಿಯಲ್ಲಿ ಸೋಮವಾರ ನಿಧನರಾದರು.

ಹಳಗಾ ಮೂಲದ ಅವರು ಎಂಬಿಬಿಎಸ್ ಶಿಕ್ಷಣದ ನಂತರ ದುಬೈನಲ್ಲಿ ವೈದ್ಯಕೀಯ ವೃತ್ತಿಯಲ್ಲಿ ತೊಡಗಿದ್ದರು. ಸತ್ಯ ಸಾಯಿಬಾಬಾ ಅವರ ಅಪಾರ ಭಕ್ತರಾದ ಅವರು, ಪುಟ್ಟಪರ್ತಿಗೆ ಆಗಮಿಸಿ ಸೇವೆಯಲ್ಲಿ ತೊಡಗಿದರು. ನಂತರ ಕಾರವಾರಕ್ಕೆ ಆಗಮಿಸಿ ಹಲವು ವರ್ಷ ಜಿಲ್ಲಾ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಮಾಡಿದ್ದರು. ಸಾಯಂಕಾಲ ಅವರು ಮುರಳೀಧರ ಮಠ ಸಮೀಪದ ಸಾಯಿ ಮಂದಿರದಲ್ಲಿ ರೋಗಿಗಳಿಗೆ ಉಚಿತ ತಪಾಸಣೆ, ವೈದ್ಯಕೀಲ ಸಹಲೆ ನೀಡುತ್ತಿದ್ದರು. ಇತ್ತೀಚೆಗೆ ಕೆಲ ವರ್ಷಗಳಿಂದ ಅವರು ಮುದ್ದೇನಹಳ್ಳಿ ವಾಸ್ತವ್ಯ ಹೂಡಿ ಸತ್ಯಸಾಯಿ ಆಸ್ಪತ್ರೆಯಲ್ಲಿ ಸೇವೆಯಲ್ಲಿ ತೊಡಗಿದ್ದರು. ನ.3 ರಂದು ಕಾರವಾರ ಸದಾಶಿವಗಡದ ಸಹೋದರನ ಮನೆಯ ಸಮೀಪ ಮೃತರ ಅಂತ್ಯಸAಸ್ಕಾರ ನೆರವೇರಲಿದೆ.

...........