Forest dwellers ಅರ್ಜಿ ಮಹಜರ್ ನ್ಯೂನತೆ ಅರಣ್ಯವಾಸಿಗಳ ಆಕ್ರೋಶ

ಸಿದ್ದಾಪುರ ತಾಲೂಕಿನ ವಾಜಗೋಡ ಗ್ರಾಪಂನಲ್ಲಿ ಅರಣ್ಯ ಹಕ್ಕು ಕಾಯ್ದೆಯಲ್ಲಿ ತಿರಸ್ಕೃತಗೊಂಡ ಅರ್ಜಿಗಳ ಕುರಿತು ಅರಣ್ಯವಾಸಿಗಳು ಪಿಡಿಒ ಗೌರೀಶ್ ಅವರೊಂದಿಗೆ ಚರ್ಚೆ ನಡೆಸಿದರು. ರವೀಂದ್ರ ನಾಯ್ಕ, ಮಹಾಬಲೇಶ್ವರ ನಾಯ್ಕ, ಪಿಎಸ್‌ಐ ನಾಗಪ್ಪ, ಪ್ರತಿಭಾ ಇತರರಿದ್ದರು.
ಸಿದ್ದಾಪುರ ತಾಲೂಕಿನ ವಾಜಗೋಡ ಗ್ರಾಪಂನಲ್ಲಿ ಅರಣ್ಯ ಹಕ್ಕು ಕಾಯ್ದೆಯಲ್ಲಿ ತಿರಸ್ಕೃತಗೊಂಡ ಅರ್ಜಿಗಳ ಕುರಿತು ಅರಣ್ಯವಾಸಿಗಳು ಪಿಡಿಒ ಗೌರೀಶ್ ಅವರೊಂದಿಗೆ ಚರ್ಚೆ ನಡೆಸಿದರು. ರವೀಂದ್ರ ನಾಯ್ಕ, ಮಹಾಬಲೇಶ್ವರ ನಾಯ್ಕ, ಪಿಎಸ್‌ಐ ನಾಗಪ್ಪ, ಪ್ರತಿಭಾ ಇತರರಿದ್ದರು.
Published on
ಸಿದ್ದಾಪುರ: ಅರಣ್ಯ ಹಕ್ಕು ಕಾಯ್ದೆಯಲ್ಲಿ ತಿರಸ್ಕೃತಗೊಂಡ ಅರ್ಜಿಗಳ ಮಹಜರ್ ಪ್ರಕ್ರಿಯೆಯಲ್ಲಿ ನ್ಯೂನತೆ ಉಂಟಾಗಿದೆ. ಈ ಕುರಿತು ತಾಲೂಕಿನ ವಾಜಗೋಡ ಗ್ರಾಪಂನಲ್ಲಿ ಅರಣ್ಯವಾಸಿಗಳು ಪಿಡಿಒ ಗೌರೀಶ್ ಅವರೊಂದಿಗೆ ಮಂಗಳವಾರ ಸಭೆ ನಡೆಸಿದರು.
ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆಯಡಿ ತಿರಸ್ಕೃತ ಅರ್ಜಿದಾರರ ಸಾಗುವಳಿ ಕ್ಷೇತ್ರಕ್ಕೆ ಮಹಜರ್ ಪ್ರಕ್ರಿಯೆಯಲ್ಲಿನ ನ್ಯೂನತೆಯಿಂದ ಅರಣ್ಯ ವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಇದರಿಂದ ಮಹಜರ್ ಪ್ರಕ್ರಿಯೆ ಪರಿಶೀಲಿಸಬೇಕು ಎಂದರು.
ಆಗ ವಾಜಗೋಡ ಗ್ರಾಪಂ ಪಿಡಿಒ ಅವರು, ಅರಣ್ಯವಾಸಿಗಳ ಪ್ರಶ್ನೆಗಳಿಗೆ ಉತ್ತರಿಸಿ, ಕೆಲ ವಿಷಯ ನನಗೆ ಗೊತ್ತಿಲ್ಲ, ಆ ಕುರಿತ ಆದೇಶ ಪ್ರತಿ ಇಲ್ಲ ಎಂದು ಅಸ್ಪಷ್ಟವಾದ ಉತ್ತರ ನೀಡಿದ್ದರಿಂದ ಅರಣ್ಯವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಪಿಎಸ್‌ಐ ನಾಗಪ್ಪ ಭೋವಿ ಅವರು, ಮಹಜರ್ ಪ್ರಕ್ರಿಯೆಯಲ್ಲಿನ ನ್ಯೂನತೆಗಳನ್ನು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಅರ್ಜಿದಾರರೊಂದಿಗೆ ಮರುಪರಿಶೀಲಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಆಗ ವಾತಾವರಣ ತಿಳಿಗೊಂಡಿತು.
ಗ್ರಾಮ ಲೆಕ್ಕಾಧಿಕಾರಿ ಪ್ರತಿಭಾ ಮರಾಠಿ, ಸಂಚಾಲಕ ಮಹಾಬಲೇಶ್ವರ ನಾಯ್ಕ ಬೇಡ್ಕಣಿ, ಬಾಲಚಂದ್ರ ನಾಯ್ಕ, ಮಂಜುನಾಥ ಈರ ನಾಯ್ಕ ಕೆಳಗಿನಸಸಿ, ಶಂಕರ ನಾರಾಯಣ ಹೆಗಡೆ ದಾನಮಾಂವ ಇತರರು ಚರ್ಚೆ ನಡೆಸಿದರು.
ವಾಜಗೋಡ ಗ್ರಾಪಂ ವ್ಯಾಪ್ತಿಯ 11 ಗ್ರಾಮಗಳಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ 284 ಅರ್ಜಿಗಳ ಮಹಜರ್ ಪ್ರಕ್ರಿಯೆ ಮಾಡಬೇಕಾಗಿದೆ ಎಂದು ಪಿಡಿಒ ಮಾಹಿತಿ ನೀಡಿದರು.
ರಾಮಚಂದ್ರ ತ್ಯಾಗಲಿಮನೆ, ನಾರಾಯಣ ರಾಮ ನಾಯ್ಕ, ಸುಧಾಕರ್ ಮಡಿವಾಳ ಬಿಳಗಿ, ಸಂಕೇತ ಹಲಗೇರಿ, ಆರ್.ಟಿ. ನಾಯ್ಕ ಅರಶಿಣಗೋಡ, ಮೋಹನ್, ನಾರಾಯಣ ಗಾಳಿಮನೆ, ಎಂ.ಪಿ. ಗೌಡ ಹುಕ್ಕಳ್ಳಿ, ಗೋದಾವರಿ ನಾಯ್ಕ, ಜಗದೀಶ ಶಿರಳಗಿ, ಬಿ.ಡಿ.ನಾಯ್ಕ ಕುರಗೆತೋಟ, ಮಂಜುನಾಥ ಕಿಲಾರ, ರಾಮಚಂದ್ರ ನಾಯ್ಕ, ಗಣಪತಿ ಶಂಕರ್ ಗೌಡ, ತಿಮ್ಮಪ್ಪ ನಾಯ್ಕ ತ್ಯಾರ್ಸಿ, ಕೃಷ್ಣ ಮೂರ್ತಿ ನಾಯ್ಕ ಐಸೂರು ಇತರರಿದ್ದರು.

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net