ಅರಣ್ಯ ಇಲಾಖೆಯಿಂದ ಗ್ರಾಮಸ್ಥರ ಸಮಸ್ಯೆಗಳ ಪರಿಶೀಲನೆ

ಗೋಕರ್ಣ ಬಳಿಯ ಕಿಮಾನಿಯಲ್ಲಿ ಅರಣ್ಯ ಇಲಾಖೆಯಿಂದ ಸೋಮವಾರ ನಡೆದ ಗ್ರಾಮಸ್ಥರ ಸಮಸ್ಯೆಗಳ ಪರಿಶೀಲನೆ ಸಭೆಯಲ್ಲಿ ಶಿವಶಕ್ತಿ ಗೆಳೆಯರ ಬಳಗದ ವತಿಯಿಂದ ಡಿಸಿಎಫ್ ಯೋಗೀಶ ಅವರನ್ನು ಗೌರವಿಸಲಾಯಿತು. ಪ್ರದೀಪ ನಾಯಕ, ಶಿವರಾಮ ಹರಿಕಾಂತ, ಸಂತೋಷ ಹರಿಕಾಂತ, ಹುಸೇನ್, ಭರತ್, ಶ್ರೀಧರ ಮತ್ತಿತರರಿದ್ದರು.
ಗೋಕರ್ಣ ಬಳಿಯ ಕಿಮಾನಿಯಲ್ಲಿ ಅರಣ್ಯ ಇಲಾಖೆಯಿಂದ ಸೋಮವಾರ ನಡೆದ ಗ್ರಾಮಸ್ಥರ ಸಮಸ್ಯೆಗಳ ಪರಿಶೀಲನೆ ಸಭೆಯಲ್ಲಿ ಶಿವಶಕ್ತಿ ಗೆಳೆಯರ ಬಳಗದ ವತಿಯಿಂದ ಡಿಸಿಎಫ್ ಯೋಗೀಶ ಅವರನ್ನು ಗೌರವಿಸಲಾಯಿತು. ಪ್ರದೀಪ ನಾಯಕ, ಶಿವರಾಮ ಹರಿಕಾಂತ, ಸಂತೋಷ ಹರಿಕಾಂತ, ಹುಸೇನ್, ಭರತ್, ಶ್ರೀಧರ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹೊನ್ನಾವರ ವಿಭಾಗದ ಅರಣ್ಯಾಧಿಕಾರಿ ಯೋಗೇಶ ನೇತೃತ್ವದಲ್ಲಿ ವಿಶೇಷ ಸಭೆ
ಗೋಕರ್ಣ: ಹತ್ತಿರದ ಕಿಮಾನಿ ಗ್ರಾಮದಲ್ಲಿ ಗ್ರಾಮಸ್ಥರು ಎದುರಿಸುತ್ತಿರುವ ಕುಂದು ಕೊರತೆ ಮತ್ತು ಸಮಸ್ಯೆಗಳ ಸಂಬಂಧ ಹೊನ್ನಾವರ ವಿಭಾಗದ ಅರಣ್ಯಾಧಿಕಾರಿ ಯೋಗೇಶ ನೇತೃತ್ವದಲ್ಲಿ ಸೋಮವಾರ ವಿಶೇಷ ಸಭೆ ಆಯೋಜಿಸಲಾಯಿತು.
ಪ್ರಾರಂಭದಲ್ಲಿ ಗ್ರಾಮದ ಶಿವರಾಮ ಹರಿಕಾಂತ ಸಭೆಯ ಕುರಿತು ಪ್ರಸ್ತಾವನೆ ಮಾಡುತ್ತ ಜಿಪಂ ಮಾಜಿ ಸದಸ್ಯ ಪ್ರದೀಪ ನಾಯಕ ಅವರು ಗ್ರಾಮಸ್ಥರ ಸಮಸ್ಯೆಗಳ ಬಗ್ಗೆ ಖುದ್ದಾಗಿ ಆಗಮಿಸಿ ಸ್ಥಳ ಪರಿಶೀಲನೆ ಕೈಗೊಳ್ಳಲು ಹೊನ್ನಾವರ ವಿಭಾಗದ ಅಧಿಕಾರಿಗಳಿಗೆ ವಿನಂತಿ ಮಾಡಿಕೊಂಡಿದ್ದರು. ಈ ಮನವಿಯ ಮೇರೆಗೆ ಕಿಮಾನಿ ಗ್ರಾಮಕ್ಕೆ ಭೇಟಿ ನೀಡಿದ ಡಿಸಿಎಫ್ ಯೋಗೇಶ ಅವರಿಗೆ ಗ್ರಾಮಸ್ಥರಿಗೆ ಅರಣ್ಯ ಇಲಾಖೆ ವತಿಯಿಂದ ಆಗಬೇಕಾದ ಅಗತ್ಯ ಸಹಾಯಗಳನ್ನು ವಿವರಿಸಿದರು.
ಅಹವಾಲುಗಳನ್ನು ಆಲಿಸಿದ ಡಿಸಿಎಫ್ ಯೋಗೇಶ ಸಭೆಯಲ್ಲಿ ಮಾತನಾಡಿ, ಗ್ರಾಮಸ್ಥರ ಸಮಸ್ಯೆಗಳ ಪರಿಹಾರದ ಬಗ್ಗೆ ಇಲಾಖೆಯಿಂದ ಕಾನೂನಿನಡಿ ಮಾಡಬಹುದಾದ ಎಲ್ಲ ಸಹಾಯಗಳ ಬಗ್ಗೆ ಆದಷ್ಟು ತ್ವರಿತವಾಗಿ ಪ್ರಯತ್ನಿಸಲಾಗುವುದು. ವಿಶೇಷವಾಗಿ ಗ್ರಾಮದಲ್ಲಿರುವ ನಾಲ್ವರು ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಯುವಕರಿಗೆ ಅವಶ್ಯವಿರುವ ಆಟದ ಮೈದಾನಕ್ಕೆ ಅರಣ್ಯ ಇಲಾಖೆಯಿಂದ ಲೀಸ್ ಮೂಲಕ ಸ್ಥಳ ಒದಗಿಸಲು ಮನವಿ ಮಾಡಲಾಗಿದೆ. ಗ್ರಾಮದಲ್ಲಿ ಸರ್ಕಾರಕ್ಕೆ ಸೇರಿದ ಮತ್ತು ಇನ್ನಿತರ ಯಾವುದೇ ಸಾರ್ವಜನಿಕ ಜಾಗದ ಅಲಭ್ಯತೆಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ಜಾಗ ನೀಡಲು ಸ್ಥಳೀಯ ಗ್ರಾಪಂ ವತಿಯಿಂದ ಮನವಿ ಸಲ್ಲಿಸಿದಲ್ಲಿ ಅತ್ಯಂತ ಶೀಘ್ರವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇದರ ಜತೆಗೆ ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಗ್ರಾಮಸ್ಥರು ಹೊಂದಿರುವ ಸಮಸ್ಯೆಗಳನ್ನು ಕಾನೂನು ಪ್ರಕಾರ ನಿವಾರಿಸಲು ಕ್ರಮಕ್ಕೆ ಮುಂದಾಗಲಾಗುವುದು ಎಂದರು. ಗ್ರಾಮದ ವತಿಯಿಂದ ಯೋಗೇಶ ಅವರನ್ನು ಶಿವಶಕ್ತಿ ಗೆಳೆಯರ ಬಳಗದ ವತಿಯಿಂದ ಗೌರವಿಸಲಾಯಿತು.
ಸಭೆಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಸಂತೋಷ ಹರಿಕಾಂತ, ಹುಸೇನ್ ಮತ್ತಿತರರಿದ್ದರು. ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಸಮಾಧಾನ ಒದಗಿಸಲು ಪ್ರಯತ್ನಿಸುವ ಭರವಸೆಯಿತ್ತ ಅರಣ್ಯಾಧಿಕಾರಿಯವರನ್ನು ಗ್ರಾಮಸ್ಥರು ಮತ್ತು ಶಿವಶಕ್ತಿ ಗೆಳೆಯರ ಬಳಗದ ಪರವಾಗಿ ಜಿಪಂ ಮಾಜಿ ಸದಸ್ಯ ಪ್ರದೀಪ ನಾಯಕ ಸನ್ಮಾನಿಸಿದರು. ಗ್ರಾಮದ ಭರತ, ಶ್ರೀಧರ ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net