

*
ಕಾರವಾರ: ಮೀನಿನ ವಿಷಾನಿಲ ಸೇವಿಸಿ ಇಬ್ಬರು ಮೃತಪಟ್ಟ ಘಟನೆ ಕಾರವಾರದ ಮುದಗಾ ಬಂದರಿನಲ್ಲಿ ನಡೆದಿದೆ.
ಉಡುಪಿ ಮಲ್ಪೆಯ ಕೃಷ್ಣಾ ಅವರಿಗೆ ಸೇರಿದ ಮೂಕಾಂಬಿಕಾ ಬೋಟ್ ನಲ್ಲಿ ದುರ್ಘಟನೆ ನಡೆದಿದೆ.
ಒಡಿಶಾ ಮೂಲದ ಪುರಂದರ ಬಿಸರಾ(21), ಆಕಾಶ(24) ಕಾರ್ಮಿಕರು ಮೃತಪಟ್ಟಿದ್ದಾರೆ. ಐವರು ಸಸ್ವಸ್ಥರಾಗಿದ್ದರು.
ಚಮನ್ ಎಂಬ ಮೀನು ಹಿಡಿದು ತರುವಾಗ ಘಟನೆ ನಡೆದಿದೆ.
ನಾಲ್ಕು ದಿನಗಳ ಹಿಂದೆ ಗೋಕರ್ಣ ತದಡಿಯಲ್ಲಿ ಇದೇ ರೀತಿ ಘಟನೆ ನಡೆದು ಮೂವರು ಮೃತಪಟ್ಟಿದ್ದರು.
ವಾರದೊಳಗೆ ನಡೆದ ಎರಡನೇ ಘಟನೆ ಇದಾಗಿದೆ.