ಬ್ಯಾಂಕ್‌ನಲ್ಲಿ ಅಳವಡಿಸಿದ ಸಿಸಿ ಕ್ಯಾಮರಾ ವೈರ್‌ನಲ್ಲಿ ಬೆಂಕಿ ಹೊತ್ತಿಕೊಂಡು ದಟ್ಟದಾದ ಹೊಗೆ ಆವರಿಸಿದೆ. ಸ್ಥಳಿಯರು ಬೆಂಕಿಯನ್ನು ಗಮನಿಸಿ ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಬೆಂಕಿ ನಂದಿಸಿ ಉಳಿದ ಅಂಗಡಿಗಳಿಗೆ ಬೆಂಕಿ ವ್ಯಾಪಿಸಿದಂತೆ ನೋಡಿಕೊಂಡರು. ಬ್ಯಾಂಕ್ ಒಳಗಿನ ಕಾಗದಪತ್ರಗಳು ಪೀಠೋಪಕರಣಗಳಿಗೆ ಹಾನಿ ಉಂಟಾಗಿವೆ ಎಂದು ತಿಳಿದುಬಂದಿದೆ.