ಮುಂಡಗೋಡ: ಚರಸ್ ಮಾರಾಟ ಮಾಡುತ್ತಿದ್ದ ಇಂಜಿನಿಯರ್ ಒಬ್ಬನನ್ನು ಮುಂಡಗೋಡ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ..ಸುಭಾಷ್ ನಗರದ ಸಚಿನ್ ಟೆಕ್ ಬಹದ್ದೂರ್ ಗೂರ್ಖಾ ಬಂಧಿತ. ಆತನಿಂದ 8 ಲಕ್ಷ ರೂ. ಮೌಲ್ಯದ 781 ಗ್ರಾಂ ಚರಸ್ ವಶಕ್ಕೆ ಪಡೆಯಲಾಗಿದೆ..ಆತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ..ಮಾದಕ ವಸ್ತುವಿನೊಂದಿಗೆ ಬೈಕ್ ನಲ್ಲಿ ತೆರಳುವಾಗ ಪಟ್ಟಣದ ಶಿರಸಿ-ಹುಬ್ಬಳ್ಳಿ ಮಾರ್ಗದ (ರಾಜ್ಯ ಹೆದ್ದಾರಿ-69) ರಲ್ಲಿ ಬಸ್ .ಡಿಪೋ ಹತ್ತಿರ ತೆರಳುವಾಗ ಪೊಲೀಸರು ಪರಿಶೀಲಿಸಿ ವಶಕ್ಕೆ ಪಡೆದಿದ್ದಾರೆ. .ಮುಂಡಗೋಡ ಪಿಐ ರಂಗನಾಥ ನೀಲಮ್ಮನವರ, ಪಿಎಸ್ ಐ ಯಲ್ಲಾಲಿಂಗ ಕುನ್ನೂರ, ಸಿಬ್ಬಂದಿ ಕೋಟೇಶ್ವರ ನಾಗರವಳ್ಳಿ ಮಹಾಂತೇಶ ಮುಧೋಳ, ಅಣ್ಣಪ್ಪ ಬುಡಿಗೇರ, ಶಿವಾನಂದ ದಾನಣ್ಣವರ, ಅನ್ವರ ಬಮ್ಮಿಗಟ್ಟಿ, ಚಾಲಕ ಗುರುರಾಜ .ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.