ಸಿದ್ದಾಪುರ: ತಾಲೂಕಿನ ಹಲಸಗಾರಿನ ಶ್ರೀ ದುರ್ಗಾಂಬಿಕಾ ದೇವಸ್ಥಾನದ 27ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ, ಅನ್ನಸಂತರ್ಪಣೆ, ಸನ್ಮಾನ ಹಾಗೂ ನಾಟಕ ಪ್ರದರ್ಶನಗೊಂಡಿತು.
ವೇ.ಮೂ. ಶ್ರೀಧರ ಭಟ್ಟ ಮಾಣಿಕ್ಯನಮನೆ ಇವರ ಪೌರೋಹಿತ್ಯದಲ್ಲಿ ಸಾಮೂಹಿಕ ಸತ್ಯನಾರಾಯಣ ವೃತ, ಶ್ರೀ ದೇವಿ ಪಾರಾಯಣ, ನವಗ್ರಹ ಹವನ, ದುರ್ಗಾಹವನ, ಕುಂಕುಮಾರ್ಚನೆ ಹಾಗೂ ಮತ್ತಿತರ ಧಾರ್ಮಿಕ ಕಾರ್ಯಕ್ರಮ ನಡೆಯಿತು. ನಂತರ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಸಂಜೆ ನಡೆದ ಸಭಾಕಾರ್ಯಕ್ರಮದಲ್ಲಿ ಹಾರ್ಸಿಕಟ್ಟಾ ಅಶೋಕ ಪ್ರೌಢಶಾಲೆಯ ಮುಖ್ಯಾಧ್ಯಾಪಕ ರಾಜೇಂದ್ರ ಕಾಂಬಳೆ, ಊರಿನ ಹಿರಿಯರಾದ ಬೀರಾ ಲಿಂಗಾ ನಾಯ್ಕ ಹಾಗೂ ಬೀರಾ ತಿಮ್ಮ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಶ್ರೀ ದುರ್ಗಾಂಬಿಕಾ ಯುವಕ ನಾಟ್ಯ ಸಂಘದವರಿಂದ ಊರ ನಾಗರಿಕರ ಸಹಕಾರದಲ್ಲಿ ಕೆರಳಿದ ಕರ್ಣಾರ್ಜುನರು (ಕಲಿಯುಗದ ಖಳನಾಯಕರು) ನಾಟಕ ಪ್ರದರ್ಶನಗೊಂಡಿತು.