ವಿದ್ಯುಕ್ತ ಚಾಲನೆ ನೀಡಿ ಮಾತನಾಡಿದ ಶಿರಸಿ ವಿಭಾಗದ ಅಂಚೆ ಅಧೀಕ್ಷಕ ಹೂವಪ್ಪ ಜಿ., ಈ ವಾಹನವು ಪ್ರತಿದಿನ ಬೆಳಗ್ಗೆ ಹುಬ್ಬಳ್ಳಿ ಆರ್.ಎಂ.ಎಸ್‌ನಿಂದ ಹೊರಟು ಹಳಿಯಾಳ, ದಾಂಡೇಲಿ, ಅಂಬಿಕಾನಗರ, ಕುಂಬಾರವಾಡಾ, ಜೊಯಿಡಾ, ಗಣೇಶಗುಡಿ, ಜಗಲಬೇಟ್, ರಾಮನಗರ ಮತ್ತು ಕ್ಯಾಸಲ್ ರಾಕ್ ಅಂಚೆ ಕಚೇರಿಗಳಿಗೆ ಸರಕುಗಳನ್ನು ತಲುಪಿಸಿ ಮತ್ತು ಆಯಾ ಅಂಚೆ ಕಚೇರಿಗಳಿಂದ ಅದೇ ಮಾರ್ಗದಲ್ಲಿ ಅಂಚೆ ಚೀಲಗಳನ್ನು ಕೊಂಡೊಯ್ಯುತ್ತದೆ.