ಬಾಸಗೋಡ ನಡುಬೇಣ ಗೋಮಾಳ ಜಾಗ ಅನ್ಯ ಬಳಕೆಗೆ ನೀಡಬೇಡಿ

ಅಂಕೋಲಾ ಬಾಸಗೋಡ ನಡುಬೇಣ ಗೋಮಾಳಜಾಗ ರಕ್ಷಿಸುವಂತೆ ಒತ್ತಾಯಿಸಿ ಶಿರಸ್ತೇದಾರ್ ಗಿರೀಶ ಜಾಂಬಳೇಕರ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಅಂಕೋಲಾ ಬಾಸಗೋಡ ನಡುಬೇಣ ಗೋಮಾಳಜಾಗ ರಕ್ಷಿಸುವಂತೆ ಒತ್ತಾಯಿಸಿ ಶಿರಸ್ತೇದಾರ್ ಗಿರೀಶ ಜಾಂಬಳೇಕರ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
Published on
ಅಂಕೋಲಾ: ತಾಲೂಕಿನ ಬಾಸಗೋಡ ಗ್ರಾಮದ ಐತಿಹಾಸಿಕ ನಡುಬೇಣದ ಗೋಮಾಳ (ಸರ್ಕಾರಿ) 15 ಎಕರೆ ಜಮೀನನ್ನು ಸರ್ಕಾರ ಅನ್ಯ ಉದ್ದೇಶಗಳಿಗೆ ಬಳಸಬಾರದು ಎಂದು ಆಗ್ರಹಿಸಿ ಬಾಸಗೋಡ ನಡುಬೇಣ ಹಿತರಕ್ಷಣಾ ಸಮಿತಿ ಸದಸ್ಯರು ತಹಸೀಲ್ದಾರ್‌ಗೆ ಮಂಗಳವಾರ ಮನವಿ ಸಲ್ಲಿಸಿದರು.
ಸ್ವಾತಂತ್ರೃ ಹೋರಾಟಗಾರರು ಬ್ರಿಟಿಷರ ವಿರುದ್ಧ ಹೋರಾಡಲು ಸುತ್ತಮುತ್ತಲಿನ ಗ್ರಾಮದ ಜನರು ಉಪ್ಪಿನ ಸತ್ಯಾಗ್ರಹ ಮತ್ತು ಚಲೇಜಾವ್ ಚಳವಳಿಯಲ್ಲಿ ಭಾಗವಹಿಸಿದ್ದರು.
ಇದರ ಸವಿನೆನಪಿಗಾಗಿ ನಡುಬೇಣದಲ್ಲಿ ಸತ್ಯಾಗ್ರಹ ಸ್ಮತಿವನ ಮತ್ತು ಚಲೇಜಾವ ಚಳ ವಳಿ ಸ್ಮತಿವನ ಎರಡು ಜೀವ ವೈವಿಧ್ಯಯುಳ್ಳ ವನಗಳನ್ನು ನಿರ್ಮಿಸಲಾಗಿದೆ.
ಕಳೆದ 46 ವರ್ಷಗಳಿಂದ ದಿ. ಶಿಳ್ಯ ಅನಂತ ನಾಯಕ ಸ್ಮಾರಕ ಕ್ರಿಕೆಟ್ ಪಂದ್ಯಾವಳಿ ನಡೆಸಲಾಗುತ್ತಿದೆ. ಈ ಮೈದಾನದಲ್ಲಿ ಜನತಾ ಕ್ರಿಕೆಟ್ ಕ್ಲಬ್ ಆಯೋಜಿಸಲಾಗುತ್ತಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರಾದ ಬಿ.ಎಸ್. ಚಂದ್ರಶೇಖರ, ಸೈಯದ್ ಕಿರ್ಮಾನಿ ಮತ್ತು ವೆಂಕಟೇಶ ಪ್ರಸಾದ ಈ ನೆಲದಲ್ಲಿ ಆಡಿ ಹೋಗಿದ್ದಾರೆ. ಹೀಗಾಗಿ, ಈ ಜಮೀನುಗಳನ್ನು ಅನ್ಯ ಉದ್ದೇಶಗಳಿಗೆ ವಹಿಸಬಾರದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಶಿರಸ್ತೇದಾರ್ ಗಿರೀಶ ಜಾಂಬಳೇಕರ ಮನವಿ ಸ್ವೀಕರಿಸಿದರು.
ಬಾಸಗೋಡ ನಡುಬೇಣ ಹಿತರಕ್ಷಣಾ ಸಮಿತಿ ಅಧ್ಯಕ್ಷ ಹೊನ್ನಪ್ಪ ಆರ್.ನಾಯಕ, ಗೋವಿಂದರಾಯ ವಾಸುದೇವ ನಾಯಕ, ವಿನೋದ ನಾಯಕ, ನಾರಾಯಣ ನಾಯಕ, ಗುರುಪ್ರಸಾದ ನೀಲಕಂಠ ನಾಯಕ, ಗೋಕುಲ ನಾಯಕ, ತಿಮ್ಮಣ್ಣ ನಾಯಕ, ಸದಾನಂದ ನಾಯಕ, ಲಕ್ಷ್ಮೀಧರ ನಾಯಕ, ರಾಮು ನಾಯಕ, ಬಿ.ಸಿ. ನಾಯಕ, ಗೋಪಾಲ ನಾಯಕ, ಸೂರಜ ನಾಯಕ, ರಾಧ ನಾಯಕ, ಉದಯ ನಾಯಕ, ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net