ಕಾರವಾರ: ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪರೀಕ್ಷೆಯು ನವೆಂಬರ್ 15 ರಂದು ಕಾರವಾರದ ನಾಲ್ಕು ಕೇಂದ್ರಗಳಲ್ಲಿ ನಡೆಯಲಿದ್ದು, ಪಾರದರ್ಶಕತೆಗೆ ಎಲ್ಲ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಾಳಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ನಲ್ಲಿ 20 ಕೊಠಡಿಗಳಿದ್ದು, 480 ಅಭ್ಯರ್ಥಿಗಳಿದ್ದಾರೆ, ಕಾರವಾರ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ 19 ಕೊಠಡಿಗಳಿದ್ದು, 454 ಅಭ್ಯರ್ಥಿಗಳು, ಸರ್ಕಾರಿ ಪಿಯು ಕಾಲೇಜ್ನಲ್ಲಿ 22 ಕೊಠಡಿಗಳಿದ್ದು, 508 ಅಭ್ಯರ್ಥಿಗಳಿದ್ದಾರೆ. ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜ್ನಲ್ಲಿ 20 ಕೊಠಡಿಗಳಿದ್ದು, 528 ಅಭ್ಯರ್ಥಿಗಳಿದ್ದಾರೆ. ಒಟ್ಟಾರೆ 81 ಕೊಠಡಿಗಳಲ್ಲಿ 1970 ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿದ್ದಾರೆ ಎಂದರು.
ಪರೀಕ್ಷೆ ಮೊದಲಿಗಿಂತ ಹೆಚ್ಚು ಭದ್ರತೆಯೊಂದಿಗೆ ನಡೆಯಲು ಪ್ರತಿ ಕೊಠಡಿಗೆ ಇಬ್ಬರಂತೆ ಒಟ್ಟು 172 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಅವರೆಲ್ಲರಿಗೆ ತರಬೇತಿ ನೀಡಲಾಗಿದೆ. ಪ್ರತಿ ಕೇಂದ್ರಕ್ಕೆ ಒಬ್ಬ ಇನ್ಸ್ಪೆಕ್ಟೆರ್ ಗ್ರೇಡ್ನ ಅಽಕಾರಿಯೊಬ್ಬರನ್ನು ಹಾಗೂ ಸಾಕಷ್ಟು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನೇಮಿಸಲಾಗಿದೆ. ಬೆಳಗ್ಗೆ 10 ಗಂಟೆಗೆ ಒಂದು ಹಾಗೂ ಮಧ್ಯಾಹ್ನ 2 ರಿಂದ ಎರಡನೇ ಪತ್ರಿಕೆಯ ಪರೀಕ್ಷೆ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದಲೇ ಪರೀಕ್ಷಾ ಕೇಂದ್ರಗಳನ್ನು ತೆರೆದಿಡಲು ಸೂಚಿಸಲಾಗಿದೆ. ಎಲ್ಲ ಕೊಠಡಿಗಳಿಗೆ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಜಿಲ್ಲಾಽಕಾರಿ ಕಚೇರಿಯಲ್ಲಿ ವೆಬ್ ಕಾಸ್ಟಿಂಗ್ ವೀಕ್ಷಣೆಗೆ ಅವಕಾಶ ಮಾಡಲಾಗಿದೆ. ಸಂಪೂರ್ಣ ಪರೀಕ್ಷೆ ನಿಯಮದಂತೆ ನಡೆಯಲು ಜಿಲ್ಲಾಽಕಾರಿ ಅಧ್ಯಕ್ಷತೆಯಲ್ಲಿ ಮೂರು ಜನರ ಸಮಿತಿ ರಚಿಸಲಾಗಿದೆ ಎಂದರು.
ಅಭ್ಯರ್ಥಿಗಳ ತಪಾಸಣೆಗೆ ಕ್ರಮ ವಹಿಸಲಾಗಿದ್ದು, ಪ್ರತಿ ಕೇಂದ್ರದಲ್ಲಿ ವೈದ್ಯರೊಬ್ಬರನ್ನು ನೇಮಿಸಲಾಗಿದೆ. ಅವರು ಅಭ್ಯರ್ಥಿ ಕಿವಿಯಲ್ಲಿ ಯಾವುದೇ ಇಲೆಕ್ಟ್ರಾನಿಕ್ಸ್ ಡಿವೈಸ್ ಹೊಂದಿರದ ಬಗ್ಗೆ ಖಚಿತಪಡಿಸುವರು. ಉತ್ತರ ಪತ್ರಿಕೆಗಳನ್ನು ಭದ್ರತೆಯಲ್ಲಿ ಸಾಗಿಸಲು ಕ್ರಮ ವಹಿಸಲಾಗಿದೆ. ಮಾರ್ಗಾಽಕಾರಿಗಳನ್ನು ನೇಮಿಸಲಾಗಿದೆ. ಅಭ್ಯರ್ಥಿಗಳಿಗೆ ಕೇಂದ್ರಕ್ಕೆ ತೆರಳಲು ಬಸ್ಗಳ ವ್ಯವಸ್ಥೆ ಮಾಡಲಾಗಿದೆ ಎಂದರು. ಎಡಿಸಿ ಸಾಜಿದ್ ಮುಲ್ಲಾ, ಎಸ್ಪಿ ದೀಪನ್ ಎಂ.ಎನ್.ಸುದ್ದಿಗೋಷ್ಠಿಯಲ್ಲಿದ್ದರು.